ಚೆನ್ನೈ (ತಮಿಳುನಾಡು):ಮದುವೆ ಎಂಬುದು ಜೀವನದ ಪ್ರಮುಖ ಘಟ್ಟಗಳಲ್ಲಿ ಒಂದಾಗಿದೆ. ಅನೇಕ ಮಂದಿ ತಮ್ಮ ವಿವಾಹವನ್ನು ವಿಶೇಷವಾಗಿ, ವಿಶೇಷ ಸ್ಥಳಗಳಲ್ಲಿ ಮಾಡಿಕೊಳ್ಳಲು ಇಚ್ಛಿಸುತ್ತಾರೆ. ಇಂತಹ ಡೆಸ್ಟಿನೇಶನ್ ವೆಡ್ಡಿಂಗ್ಗಳು ಅವಿಸ್ಮರಣೀಯ ಅನುಭವಗಳನ್ನು ನೀಡುತ್ತವೆ.
ತಮಿಳುನಾಡಿನ ಜೋಡಿಯೊಂದು ಚೆನ್ನೈನ ನೀಲಂಕರೈ ಕರಾವಳಿಯೊಳಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವೃತ್ತಿಯಲ್ಲಿ ಇಂಜಿನಿಯರ್ಗಳಾಗಿರುವ ಚಿನ್ನದುರೈ ಮತ್ತು ಶ್ವೇತಾ ಸುಮಾರು 60 ಅಡಿಗಳಷ್ಟು ಸಮುದ್ರದಾಳದಲ್ಲಿ ಹೂವಿನ ಹಾರ ಬದಲಿಸಿಕೊಂಡಿದ್ದಾರೆ.