ಪೂರ್ವ ಗೋದಾವರಿ(ಆಂಧ್ರಪ್ರದೇಶ):ಸದ್ಯದ ದುಬಾರಿ ದುನಿಯಾದಲ್ಲಿ ಎಲ್ಲವೂ ತುಟ್ಟಿ. ಚೀಲ ತುಂಬ ಹಣವನ್ನು ಒಯ್ದು ಜೇಬು ತುಂಬುವಷ್ಟೇ ಸಾಮಗ್ರಿ ತರುವಂತಾಗಿದೆ. ಆದರೆ ಈ ಎಲ್ಲದರ ಮಧ್ಯೆ ಕಳೆದ 16 ವರ್ಷಗಳಿಂದ ದಂಪತಿಗಳಿಬ್ಬರು ಕೇವಲ 1 ರೂಪಾಯಿಗೆ ಇಡ್ಲಿ ಮಾರಾಟ ಮಾಡಿ ಬಡವರ ಹಸಿವು ನೀಗಿಸುವ ಕೆಲಸ ಮಾಡ್ತಿದ್ದಾರೆ.
ಹೌದು, ಒಂದು ರೂಪಾಯಿಗೆ ಏನು ಬರುತ್ತೆ ಎಂದು ಕೇಳುವ ಜನರಿದ್ದಾರೆ. ಆದರೆ, ಆಂಧ್ರಪ್ರದೇಶದ ಪೂರ್ವ ಗೋದಾವರಿಯಲ್ಲಿ ದಂಪತಿಗಳು 1 ರೂಪಾಯಿಗೆ ಇಡ್ಲಿ ಸೇರಿದಂತೆ ಇತರ ತಿಂಡಿ ಮಾರಾಟ ಮಾಡ್ತಿದ್ದಾರೆ.
ಕಳೆದ 16 ವರ್ಷಗಳಿಂದ ಬೆಲೆಯಲ್ಲಿ ಇವರು ಯಾವುದೇ ರೀತಿಯ ಬದಲಾವಣೆ ಮಾಡಿಲ್ಲ. ಕಳೆದ ಒಂದು ದಶಕದ ಹಿಂದೆ ಕೇವಲ 50 ಪೈಸೆಗೆ ಇಡ್ಲಿ ಹಾಗೂ ತಿಂಡಿ ಮಾರಾಟ ಮಾಡ್ತಿದ್ದರು. ಆದರೆ, ಇದೀಗ ಅದರ ಬೆಲೆ 1 ರೂಪಾಯಿ ಆಗಿದೆ. ಬೇರೆ ಹೋಟೆಲ್ಗಳು 20ರಿಂದ 30 ರೂಪಾಯಿಗೆ ಮಾರಾಟ ಮಾಡುತ್ತಾರೆ.. ಅದು 3,4, ಫೈವ್ ಸ್ಟಾರ್ ಹೋಟೆಲ್ಗಳಲ್ಲಿ ನೂರರ ಆಜುಬಾಜು ದರ ಇದೆ. ಆದರೆ ಈ ಬಗ್ಗೆ ಈ ದಂಪತಿಗಳನ್ನ ಪ್ರಶ್ನೆ ಮಾಡಿದರೆ, ನಮ್ಮಲ್ಲಿ ಪ್ರತಿದಿನ ಅನೇಕರು ಸಂತೃಪ್ತಿಯಿಂದ ಇಡ್ಲಿ ಸೇವನೆ ಮಾಡ್ತಾರೆ ಎಂಬ ಸಂತೋಷವಿದೆ ಎನ್ನುತ್ತಾರೆ.