ಮೋಗಾ(ಪಂಜಾಬ್): ಕಳೆದ ಐದು ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಜೋಡಿವೊಂದು ಪರಸ್ಪರರ ಮೇಲಿನ ಪ್ರೀತಿ ತೋರಿಸುವ ಉದ್ದೇಶದಿಂದ ವಿಷ ಕುಡಿದಿದ್ದು, ಪತ್ನಿ ಸಾವಿಗೀಡಾಗಿರುವ ಘಟನೆ ಪಂಜಾಬ್ನ ಮೋಗಾ ಜಿಲ್ಲೆಯಲ್ಲಿ ನಡೆದಿದೆ.
ಕಳೆದ ಐದು ವರ್ಷಗಳ ಹಿಂದೆ ಮನ್ಪ್ರೀತ್ ಕೌರ್ ಹಾಗೂ ಹರ್ಜಿಂದ್ರ ಸಿಂಗ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಗೆ ಒಂದು ವರ್ಷದ ಹೆಣ್ಣು ಮಗುವಿದೆ. ಇದೀಗ ಪರಸ್ಪರ ತಮ್ಮ ಮೇಲಿನ ಪ್ರೀತಿ ಸಾಬೀತು ಪಡಿಸುವ ಉದ್ದೇಶದಿಂದ ತಂಪು ಪಾನೀಯದಲ್ಲಿ ಇಲಿ ಔಷಧಿ ಸೇರಿಸಿ ಕುಡಿದಿದ್ದಾರೆ. ಇದರ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಚಿಕಿತ್ಸೆ ನೀಡ್ತಿದ್ದ ವೇಳೆ ಪತ್ನಿ ಮನ್ಪ್ರೀತ್ ಕೌರ್ ಸಾವನ್ನಪ್ಪಿದ್ದಾರೆ. ಆದರೆ ಹರ್ಜಿಂದ್ರಗೆ ಚಿಕಿತ್ಸೆ ಮುಂದುವರೆದಿದೆ.