ಕರ್ನಾಟಕ

karnataka

ETV Bharat / bharat

ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ: ಮನನೊಂದು ಆತ್ಮಹತ್ಯೆಗೆ ಶರಣಾದ ದಂಪತಿ - ಆತ್ಮಹತ್ಯೆ

ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಘಟನೆಯಿಂದ ತೀವ್ರವಾಗಿ ಆಘಾತಕ್ಕೊಳಗಾದ ಸಂತ್ರಸ್ತೆ ಹಾಗೂ ಪತಿ ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದಾರೆ.

file pick
ಸಾಂದರ್ಭಿಕ ಚಿತ್ರ

By ETV Bharat Karnataka Team

Published : Sep 24, 2023, 11:43 AM IST

ಬಸ್ತಿ (ಉತ್ತರ ಪ್ರದೇಶ): ಪತ್ನಿಯ ಮೇಲೆ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆಯ ಹಿನ್ನೆಲೆಯಲ್ಲಿ ಮನನೊಂದು ದಂಪತಿ ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಬೆಳಕಿಗೆ ಬಂದಿದೆ. ಈ ಕುರಿತು ಪೊಲೀಸರು ಎಫ್ಐಆರ್ ದಾಖಲಿಸಿದ್ದು ಇಬ್ಬರನ್ನು ಬಂಧಿಸಿದ್ದಾರೆ. ಆದರ್ಶ (25) ಹಾಗೂ ತ್ರಿಲೋಕಿ (47) ಬಂಧಿತರು.

ಪತಿ, ಪತ್ನಿ ಗುರುವಾರ ಮುಂಜಾನೆ ವಿಷ ಸೇವಿಸಿದ್ದಾರೆ. ಪತಿ ಅದೇ ದಿನ ಮೃತಪಟ್ಟರೆ, ಪತ್ನಿ ಗೋರಖ್‌ಪುರ ಆಸ್ಪತ್ರೆಯಲ್ಲಿ ಶುಕ್ರವಾರ ಸಾವನ್ನಪ್ಪಿದ್ದಾರೆ ಎಂದು ಬಸ್ತಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಗೋಪಾಲಕೃಷ್ಣ ತಿಳಿಸಿದರು.

ಸೆ.21ರ ಮಧ್ಯರಾತ್ರಿ ರುಧೌಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯ ಮೇಲೆ ಇಬ್ಬರು ದುರುಳರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ದಂಪತಿಯ ಸಂಬಂಧಿಕರು ಹೇಳಿದ್ದಾರೆ. ಆತ್ಮಹತ್ಯೆಗೂ ಮುನ್ನ, ದಂಪತಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಆರೋಪಿಗಳ ಹೆಸರು ಉಲ್ಲೇಖಿಸಿದ್ದಾರೆ ಎಂದು ಎಸ್‌ಪಿ ಮಾಹಿತಿ ನೀಡಿದರು. ಮೃತ ವ್ಯಕ್ತಿಯ ಸಹೋದರ ನೀಡಿದ ದೂರಿನ ಮೇರೆಗೆ ಇಬ್ಬರು ದುಷ್ಕರ್ಮಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 376 ಡಿ ಮತ್ತು 306ರ ಅನ್ವಯ ಸಾಮೂಹಿಕ ಅತ್ಯಾಚಾರ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಲಾಗಿದೆ.

ಬೆಳಗ್ಗೆ ನಾವು ಶಾಲೆಗೆ ಹೊರಡಲು ಸಿದ್ಧವಾದಾಗ ತಂದೆ, ತಾಯಿ ವಿಷ ಸೇವಿಸಿದ್ದಾಗಿ ಹೇಳಿದರು. ನಾವು ಕೆಲವೇ ಕ್ಷಣದಲ್ಲಿ ಸಾವಿಗೀಡಾತ್ತೇವೆ ಎಂದರು ಎಂದು ಮಕ್ಕಳು ಪೊಲೀಸರಿಗೆ ಘಟನೆಯನ್ನು ವಿವರಿಸಿದ್ದಾರೆ. ದಂಪತಿಗೆ 8 ಹಾಗೂ 6 ವರ್ಷದ ಇಬ್ಬರು ಪುತ್ರರು ಮತ್ತು ಒಂದೂವರೆ ವರ್ಷದ ಪುತ್ರಿ ಇದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಅತ್ಯಾಚಾರ ಘಟನೆ ಸಂತ್ರಸ್ತೆಯ ಒಡೆತನದ ಜಮೀನು ಮಾರಾಟಕ್ಕೆ ಸಂಬಂಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚಿನ ಪ್ರಕರಣ- ನಾಲ್ವರು ಮಹಿಳೆಯರ ಮೇಲೆ ಗ್ಯಾಂಗ್‌ರೇಪ್:ಇತ್ತೀಚೆಗೆ ಹರಿಯಾಣದ ಮಟ್ಲೌಡಾ ರಿಫೈನರಿ ರಸ್ತೆಯ ಎರಡು ಶಿಬಿರಗಳಲ್ಲಿ ನಾಲ್ವರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ನಡೆದಿತ್ತು. ಸೆ. 21ರಂದು ತಡರಾತ್ರಿ ದರೋಡೆಕೋರರು ಮಟ್ಲೌಡಾ ಪೊಲೀಸ್ ಠಾಣಾ ವ್ಯಾಪ್ತಿಯ ಕ್ಯಾಂಪ್‌ಗೆ ನುಗ್ಗಿ ಅಲ್ಲಿದ್ದ ಎಲ್ಲರನ್ನೂ ಒತ್ತೆಯಾಳಾಗಿರಿಸಿದ್ದರು. ನಂತರ ಶಿಬಿರ ಲೂಟಿ ಮಾಡಿದ್ದರು. ಕುಟುಂಬಸ್ಥರ ಎದುರೇ ನಾಲ್ವರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಸೆ.22ರಂದು ಸಂತ್ರಸ್ತರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು.

ರಿಫೈನರಿ ಬಳಿ ಕ್ಯಾಂಪ್​ಗೆ ನುಗ್ಗಿದ ದರೋಡೆಕೋರರು ಅಲ್ಲಿದ್ದ ಎಲ್ಲರನ್ನೂ ಕಟ್ಟಿಹಾಕಿ ಲೂಟಿ ಮಾಡಿದ್ದಾರೆ. ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಸದ್ಯ ಎಫ್‌ಐಆರ್ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ತಂಡ ರಚಿಸಲಾಗಿದೆ ಎಂದು ಮಟ್ಲೌಡಾ ಪೊಲೀಸ್ ಠಾಣೆಯ ತನಿಖಾಧಿಕಾರಿ ವಿನೋದ್ ಕುಮಾರ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದರು.

ಇದನ್ನೂ ಓದಿ:ಪಾಣಿಪತ್‌ನಲ್ಲಿ ನಾಲ್ವರು ಮಹಿಳೆಯರ ಮೇಲೆ ಗ್ಯಾಂಗ್‌ರೇಪ್​, ಓರ್ವ ಸಂತ್ರಸ್ತೆ ಸಾವು, ನಗ-ನಾಣ್ಯ ಲೂಟಿ!

ABOUT THE AUTHOR

...view details