ಕರ್ನಾಟಕ

karnataka

ETV Bharat / bharat

ಭಾರತ ವಿಭಜನೆಗೆ ಸಂಚು ರೂಪಿಸಲಾಗಿದೆ, ಅದು ಸಾಧ್ಯವಿಲ್ಲ: ಮೋಹನ್​ ಭಾಗವತ್​ - ಬರಹಗಾರ ಕೃಷ್ಣಾನಂದ್ ಸಾಗರ್​,

ಭಾರತ ವಿಭಜನೆಗೆ ಸಂಚು ರೂಪಿಸಲಾಗಿದೆ. ಅದು ಇಂದಿಗೂ ಅದು ಮುಂದುವರಿದಿದೆ. ಆದ್ರೆ ನಾವು ವಿಭಜನೆಗೆ ಬಿಡುವುದಿಲ್ಲ ಎಂದು ಮೋಹನ್​ ಭಾಗವತ್​ ಹೇಳಿದ್ದಾರೆ.

Mohan Bhagwat statement on Country divided, Mohan Bhagwat reaction, Vibhajankaleen Bharat Ke Sakshi book, The Witness of Partition India book, Writer Krishnanand Sagar, ದೇಶ ವಿಭಜನ ಬಗ್ಗೆ ಮೋಹನ್​ ಭಾಗವತ್​ ಮಾತು, ಮೋಹನ್​ ಭಾಗವತ್​ ಹೇಳಿಕೆ,  ವಿಭಜನ್​ ಕಲೀನ್​ ಭಾರತ್​ ಕೆ ಸಾಕ್ಷಿ ಪುಸ್ತಕ, ಬರಹಗಾರ ಕೃಷ್ಣಾನಂದ್ ಸಾಗರ್​, ಭಾರತ ಪಾಕ್​ ವಿಭಜನೆ,
ಮೋಹನ್​ ಭಾಗವತ್​

By

Published : Nov 26, 2021, 8:42 AM IST

ನವದೆಹಲಿ:ಭಾರತವನ್ನು ವಿಭಜಿಸುವ ಬಗ್ಗೆ ಮಾತನಾಡುವವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಬೆಂಡೆತ್ತಿದ್ದಾರೆ. ದೇಶ ವಿಭಜನೆಯ ಸಮಯದಲ್ಲಿ ದೊಡ್ಡ ಎಡವಟ್ಟನ್ನು ಮಾಡಿಕೊಂಡಿದ್ದೇವೆ. ಅದು ಇಂದಿಗೂ ಮರೆಯಲು ಸಾಧ್ಯವಿಲ್ಲ. ಮತ್ತೆ ಈ ಘಟನೆ ಮರಕಳಿಸದು ಎಂದು ಖಡಕ್​ ಆಗಿಯೇ ಹೇಳಿದ್ದಾರೆ.

ಕೃಷ್ಣಾನಂದ್ ಸಾಗರ್ ಬರೆದಿರುವ ‘ವಿಭಜನ್​ ಕಲೀನ್ ಭಾರತ್ ಕೆ ಸಾಕ್ಷಿ’ ಪುಸ್ತಕವನ್ನು ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಆರ್​ಎಸ್​ಎಸ್​ ಸಂಘದ ಮುಖ್ಯಸ್ಥ ಮೋಹನ್​ ಭಾಗವತ್​, ಇದು 2021ರ ಭಾರತ, 1947 ಅಲ್ಲ. ಆಗ ದೇಶ ವಿಭಜನೆಯಾಯಿತು. ಈಗ ಅದು ಸಾಧ್ಯವಿಲ್ಲ. ಅಖಂಡ ಭಾರತವಾಗಿಯೇ ಉಳಿಯುತ್ತದೆ ಎಂದು ಹೇಳಿದರು.

ವಿಭಜನೆಯೊಂದು ಮರೆಯಲಾಗದ ಘಟನೆ. ಭಾರತ - ಪಾಕ್​ ವಿಭಜನೆಯನ್ನು ಹಿಂತೆಗೆದುಕೊಂಡಾಗ ಮಾತ್ರ ನೋವು ಕೊನೆಗೊಳ್ಳುತ್ತದೆ. ವಿಭಜನೆಗೊಂಡಿದ್ದನ್ನು ಮತ್ತೆ ಒಗ್ಗೂಡಿಸಿದಾಗ ಮಾತ್ರ ಸಮಸ್ಯೆ ಇತ್ಯಾರ್ಥವಾಗುವುದು. ಭಾರತ ವಿಭಜನೆಗೆ ಸಂಚು ರೂಪಿಸಲಾಗಿದ್ದು, ಇಂದಿಗೂ ಅದು ಮುಂದುವರಿದಿದೆ. ದೇಶ ವಿಭಜನೆ ಶಾಂತಿಗಾಗಿ ನಡೆದಿದೆ. ಆದರೆ ಅದರ ನಂತರವೂ ದೇಶದಲ್ಲಿ ಗಲಭೆಗಳು ನಡೆದಿವೆ ಎಂದು ಭಾಗವತ್ ಹೇಳಿದ್ದಾರೆ.

ಭಾರತದ ಅಸ್ಮಿತೆ ಹಿಂದೂ. ಹಾಗಾಗಿ ಅದನ್ನು ಒಪ್ಪಿಕೊಂಡರೆ ಏನು ತೊಂದರೆ. 'ಘರ್ ವಾಪ್ಸಿ' ಕುರಿತು ಮಾತನಾಡಿದ ಸಂಘದ ಪ್ರಮುಖರು, ಯಾರಾದರೂ ತಮ್ಮ ಪೂರ್ವಜರ ಮನೆಗೆ ಮರಳಲು ಬಯಸಿದರೆ ನಾವು ಅವರನ್ನು ಸ್ವಾಗತಿಸುತ್ತೇವೆ. ಆದರೆ ಅವರು ಬರಲು ಬಯಸದಿದ್ದರೆ ಪರವಾಗಿಲ್ಲ ಅದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ ಎಂದೂ ಇದೇ ವೇಳೆ ಅವರು ಹೇಳಿದ್ದಾರೆ.

ABOUT THE AUTHOR

...view details