ಚಂಡೀಗಢ: ಪಂಜಾಬ್ನ 116 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಏಳು ಮಹಾನಗರ ಪಾಲಿಕೆಗಳಲ್ಲೂ ಕಾಂಗ್ರೆಸ್ ಗೆಲುವು ದಾಖಲಿಸಿದೆ.
ಏಳು ಮಹಾನಗರ ಪಾಲಿಕೆಗಳಾದ ಅಬೋಹರ್, ಬತಿಂಡಾ, ಬಟಾಲಾ, ಕಪುರ್ಥಾಲಾ, ಹೋಶಿಯಾರ್‌ಪುರ, ಪಠಾಣ್‌ಕೋಟ್, ಮೊಗಾ ಮತ್ತು 109 ಪುರಸಭೆಗಳು ಹಾಗೂ ಪುರಸಭೆಯ ಪಂಚಾಯತ್‌ಗಳಿಗೆ ಮತ ಎಣಿಕೆ ಇಂದು ನಡೆಯಿತು.