ಕರ್ನಾಟಕ

karnataka

ETV Bharat / bharat

ಭಾರತದಲ್ಲಿ ಮತ್ತಷ್ಟು ಹೆಚ್ಚಾಯ್ತು ಕೋವಿಡ್​.. 5,233 ಹೊಸ ಪ್ರಕರಣ ದಾಖಲು - ಭಾರತದಲ್ಲಿ ಕೋವಿಡ್​

ಭಾರತದಲ್ಲಿ ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ಏರಿಕೆಯಾಗ್ತಿದ್ದು, ನಿನ್ನೆಗೆ ಹೋಲಿಕೆ ಮಾಡಿದಾಗ ಇಂದು ಅದರಲ್ಲಿ ಮತ್ತಷ್ಟು ಹೆಚ್ಚಳ ಕಂಡು ಬಂದಿದೆ.

Coronavirus cases in india
Coronavirus cases in india

By

Published : Jun 8, 2022, 9:46 AM IST

ನವದೆಹಲಿ: ನಿನ್ನೆಗೆ ಹೋಲಿಕೆ ಮಾಡಿದಾಗ ಭಾರತದಲ್ಲಿ ಶೇ. 41ರಷ್ಟು ಕೋವಿಡ್​ ಸೋಂಕಿತ ಪ್ರಕರಣಗಳು ಹೆಚ್ಚಾಗಿದ್ದು, 5,233 ಹೊಸ ಕೇಸ್​​ಗಳು ದಾಖಲಾಗಿವೆ. ನಿನ್ನೆ ದೇಶದಲ್ಲಿ 4,518 ಪ್ರಕರಣ ದಾಖಲಾಗಿದ್ದವು. ಆದರೆ, ಇದೀಗ ಅದರಲ್ಲಿ ತುಸು ಏರಿಕೆ ಕಂಡು ಬಂದಿದೆ. ಆದರೆ, ಕಳೆದ 24 ಗಂಟೆಗಳಲ್ಲಿ 3,345 ಜನರು ಕೋವಿಡ್​ನಿಂದ ಗುಣಮುಖರಾಗಿದ್ದು, 7 ಜನರು ಸಾವನ್ನಪ್ಪಿದ್ದಾರೆ.

ಸದ್ಯ ದೇಶದಲ್ಲಿ 28,857 ಸಕ್ರಿಯ ಪ್ರಕರಣಗಳಿದ್ದು, ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲೆಯ 1,881 ಪ್ರಕರಣ ದಾಖಲಾಗಿದ್ದು, ಮುಂಬೈನಲ್ಲೇ 1,242 ಕೇಸ್​ ಕಾಣಿಸಿಕೊಂಡಿವೆ. ಉಳಿದಂತೆ ಕೇರಳ, ಕರ್ನಾಟಕದಲ್ಲೂ ಮಹಾಮಾರಿ ಆರ್ಭಟ ತುಸು ಹೆಚ್ಚಾಗಿದೆ. ದೆಹಲಿಯಲ್ಲೂ 450 ಪ್ರಕರಣ ಕಾಣಿಸಿಕೊಂಡಿವೆ.

ಇದನ್ನೂ ಓದಿ:ಹರಿಣಗಳ ವಿರುದ್ಧದ ಸರಣಿಯಲ್ಲಿ ಉಮ್ರಾನ್​ ಆಡುವುದು ಅನುಮಾನ.. ಕೋಚ್​ ದ್ರಾವಿಡ್ ಹೇಳಿದ್ದೇನು?

ದೇಶದಲ್ಲಿ ಕೋವಿಡ್​ನಿಂದ ಇಲ್ಲಿಯವರೆಗೆ 4,26,36,710 ಜನರು ಗುಣಮುಖರಾಗಿದ್ದು, 5,24,715 ಜನರು ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ ದೇಶದಲ್ಲಿ 85,35,22,623 ಜನರಿಗೆ ಕೋವಿಡ್ ಟೆಸ್ಟ್​ ನಡೆಸಲಾಗಿದೆ.

ABOUT THE AUTHOR

...view details