ಅಹಮದಾಬಾದ್ (ಗುಜರಾತ್): ಕೋವಿಡ್ ಮಹಾಮಾರಿಯಿಂದ ಮೃತಪಟ್ಟವರ ಶವಗಳನ್ನು ನದಿಗಳಲ್ಲಿ ಎಸೆಯುತ್ತಿರುವ ಘಟನೆಗಳ ಬೆನ್ನಲ್ಲೇ ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಗುಜರಾತ್ನ ಅಹಮದಾಬಾದ್‌ನ ಸಬರಮತಿ ನದಿ, ಕಾಕರಿಯಾ ಮತ್ತು ಚಂದೋಲಾ ಸರೋವರದ ನೀರಿನಲ್ಲಿ ಕೊರೊನಾ ವೈರಸ್ ಪತ್ತೆಯಾಗಿರುವುದಾಗಿ ಗಾಂಧಿನಗರ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ವರದಿ ಮಾಡಿದೆ.
ಗಾಂಧಿನಗರ ಐಐಟಿ ಭೂ ವಿಜ್ಞಾನ ವಿಭಾಗದ ಪ್ರೊ.ಮನೀಶ್ ಕುಮಾರ್ ನೇತೃತ್ವದಲ್ಲಿ ಇತರ ಎಂಟು ಸಂಸ್ಥೆಗಳು ಈ ಸಂಶೋಧನೆ ನಡೆಸಿವೆ. ಸೆಪ್ಟೆಂಬರ್ನಿಂದ ಡಿಸೆಂಬರ್‌ವರೆಗೆ ಸಬರಮತಿ ನದಿ, ಕಾಕರಿಯಾ ಮತ್ತು ಚಂದೋಲಾ ಸರೋವರ ನೀರಿನ ಮಾದರಿಯನ್ನು ಸಂಗ್ರಹಿಸಿ, ಪರೀಕ್ಷೆಗೆ ಒಳಪಡಿಸಲಾಗಿದೆ. ಸಂಶೋಧನೆಯ ವರದಿ ಇನ್ನೂ ಪ್ರಕಟವಾಗಿಲ್ಲ. ಆದರೆ ನೀರಿನಲ್ಲಿ ವೈರಸ್ ಪತ್ತೆಯಾಗಿರುವುದನ್ನು ಸಂಶೋಧನಾ ತಂಡ ಸ್ಪಷ್ಟಪಡಿಸಿದೆ.