ಕರ್ನಾಟಕ

karnataka

ETV Bharat / bharat

ಬಿಹಾರ: ಮಕ್ಕಳಿಗೆ ಕೋವ್ಯಾಕ್ಸಿನ್​​​ ಬದಲಿಗೆ ಕೋವಿಶೀಲ್ಡ್​ ಹಾಕಿದ ಆರೋಗ್ಯ ಸಿಬ್ಬಂದಿ

ಬಿಹಾರ ರಾಜ್ಯದ ನಳಂದ ಜಿಲ್ಲೆಯಲ್ಲಿ ಮಕ್ಕಳಿಗೆ ಲಸಿಕೆ ಹಾಕಲಾಗುತ್ತಿದ್ದು, ಇಬ್ಬರು ಸಹೋದರರಿಗೆ ಕೋವಿನ್​ ಬದಲಿಗೆ ಕೋವಿಶೀಲ್ಡ್​ ಹಾಕಿರುವ ಘಟನೆ ವರದಿಯಾಗಿದೆ. ​ ​

Corona vaccination to children in nalanda of bhihar
ಸಹೋದರರಿಗೆ ಕೋವ್ಯಾಕ್ಸಿನ್​​​ ಬದಲಿಗೆ ಕೋವಿಶೀಲ್ಡ್​ ಹಾಕಿದ ಆರೋಗ್ಯ ಸಿಬ್ಬಂದಿ

By

Published : Jan 4, 2022, 10:45 AM IST

ನಳಂದ (ಬಿಹಾರ): ಬಿಹಾರ ರಾಜ್ಯದ ನಳಂದ ಜಿಲ್ಲೆಯಲ್ಲಿ ಮಕ್ಕಳಿಗೆ ಲಸಿಕೆ ಹಾಕುವಲ್ಲಿ ಆರೋಗ್ಯ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದು, ಮಕ್ಕಳು ಸಮಸ್ಯೆಗೆ ಸಿಲುಕುವ ಸಾಧ್ಯತೆಗಳಿವೆ. ದೇಶದಲ್ಲಿ ಕೋವಿಡ್ ಮೂರನೇ ಅಲೆಯ ಆತಂಕ ಹೆಚ್ಚುತ್ತಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಡಿ. 25, 2021 ರಂದು, ಮಕ್ಕಳಿಗೆ ಕೊರೊನಾ ಲಸಿಕೆ ಹಾಗೂ ಹಿರಿಯ ನಾಗರಿಕರಿಗೆ ಬೂಸ್ಟರ್ ಡೋಸ್ ನೀಡುವ ಮಹತ್ವದ ಘೋಷಣೆ ಮಾಡಿದ್ದರು.

ನಿನ್ನೆಯಿಂದ ದೇಶಾದ್ಯಂತ 15 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಮೊದಲ ಹಂತದಲ್ಲಿ ಲಸಿಕೆ ನೀಡಲಾಗುತ್ತಿದೆ. ಅದರಂತೆ ನಳಂದದಲ್ಲಿ ಮಕ್ಕಳಿಗೆ ಲಸಿಕೆ ಹಾಕಲಾಗುತ್ತಿದ್ದು, ಇಬ್ಬರು ಸಹೋದರರಿಗೆ ಕೋವಿನ್​/ಕೋವ್ಯಾಕ್ಸಿನ್ ಬದಲಿಗೆ ಕೋವಿಶೀಲ್ಡ್​ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ​ ​

ಸಹೋದರರಿಗೆ ಕೋವ್ಯಾಕ್ಸಿನ್​​​ ಬದಲಿಗೆ ಆರೋಗ್ಯ ಸಿಬ್ಬಂದಿ ಕೋವಿಶೀಲ್ಡ್​ ಹಾಕಿದ್ದಾರೆ ಎಂದು ಆರೋಪಿಸಲಾಗುತ್ತಿದೆ,

ಈ ಬಗ್ಗೆ ಕಿಶೋರ್ ಪಿಯೂಷ್ ರಂಜನ್ ಮಾತನಾಡಿ, ನಾವು ಭಾನುವಾರದಂದು ಲಸಿಕೆಗೆ ಆನ್​ಲೈನ್​ನಲ್ಲಿ ಅಪ್ಲೈ ಮಾಡಿದ್ದೆವು. ಸೋಮವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಐಎಂಎ ಹಾಲ್‌ಗೆ ತೆರಳಿದ್ದೆವು. ಆರೋಗ್ಯ ಇಲಾಖೆ ನಡೆಸುತ್ತಿದ್ದ ಲಸಿಕಾಭಿಯಾನದ ಪ್ರಕ್ರಿಯೆ ಮುಗಿಸಿದ ಬಳಿಕ ಲಸಿಕೆ ಪಡೆದೆವು.

ನಂತರ ನನಗೆ ಮತ್ತು ಸಹೋದರನಿಗೆ ಕೋವಿನ್​​ ಬದಲು ಕೋವಿಶೀಲ್ಡ್ ಲಸಿಕೆ ನೀಡಲಾಗಿದೆ ಎಂದು ತಿಳಿದು ಬಂತು. ನಂತರ ಈ ಬಗ್ಗೆ ಆಯೋಜಕರಲ್ಲಿ ಕೇಳಿದಾಗ, ಕೋವಿಶೀಲ್ಡ್ ತೆಗೆದುಕೊಳ್ಳುವುದರಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ನಮಗೆ ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಕಿಶೋರ್ ತಂದೆ ಪ್ರಿಯರಂಜನ್ ಕುಮಾರ್ ಮಾತನಾಡಿ, ಆರೋಗ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ಕಿಡಿಕಾರಿದ್ದಾರೆ. ಸಿಎಸ್ ಕಚೇರಿಗೆ ಹೋದಾಗ ಒಂದೂವರೆ ಗಂಟೆಗಳ ಕಾಲ ನಿಗಾವಹಿಸಿ, ಏನಾದರೂ ತೊಂದರೆಯಾದರೆ ವೈದ್ಯಕೀಯ ತಂಡವನ್ನು ಮನೆಗೆ ಕಳುಹಿಸುವುದಾಗಿ ಹೇಳಿ ಕಳುಹಿಸಿದ್ದಾರೆ. ಆದರೆ, ತಮ್ಮ ಪುತ್ರರಿಗೇನಾದರೂ ಆದರೆ ಎಂಬ ಚಿಂತೆಯಲ್ಲಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ:ONGC ನೂತನ ಸಿಎಂಡಿ ಆಗಿ ಅಲ್ಕಾ ಮಿತ್ತಲ್​ ನೇಮಕ..

ನಳಂದದಲ್ಲಿ ಲಸಿಕೆ ಹಾಕುವಲ್ಲಿ ಒಂದೆಡೆ ನಿರ್ಲಕ್ಷ್ಯ ವಹಿಸಿದರೆ, ಮತ್ತೊಂದೆಡೆ ಪ್ರಮಾಣಪತ್ರವನ್ನೂ ತಮಗೆ ಬೇಕಾದಂತೆ ರೆಡಿ ಮಾಡಿದ್ದಾರೆ. ಅದರಲ್ಲಿ ಕೋವ್ಯಾಕ್ಸಿನ್​ ಎಂದೇ ತೋರಿಸಲಾಗಿದೆ. ಆದರೆ ಮಕ್ಕಳಿಗೆ ನೀಡಿರುವುದು ಕೋವಿಶೀಲ್ಡ್​. ಆರೋಗ್ಯ ಇಲಾಖೆಯು ತಮ್ಮನ್ನು ತಾವು ರಕ್ಷಿಸಿಕೊಳ್ಳುವಲ್ಲಿ ತೊಡಗಿಸಿಕೊಂಡಿದೆ ಎಂದು ಮಕ್ಕಳ ತಂದೆ ಆರೋಪಿಸಿದ್ದಾರೆ.

ಈ ಬಗ್ಗೆ ಮಾಹಿತಿ ಪಡೆದಿರುವ ಎಂದಿರುವ ಸರ್ಜನ್​

ಈ ಕುರಿತು ಮಾಹಿತಿ ಪಡೆದಿರುವುದಾಗಿ ಸಿವಿಲ್ ಸರ್ಜನ್ ಡಾ ಸುನೀಲ್ ಕುಮಾರ್ ತಿಳಿಸಿದ್ದಾರೆ. ಲಸಿಕೆ ನೀಡುತ್ತಿರುವ ಉದ್ಯೋಗಿಯಿಂದ ಸ್ವಲ್ಪ ಹೆಚ್ಚು ಕಡಿಮೆ ಆಗಿದೆ. ಮಕ್ಕಳಿಗೆ ಧೈರ್ಯ ತುಂಬಿ, ಆರೋಗ್ಯ ಇಲಾಖೆಯ ನಂಬರ್ ನೀಡಲಾಗಿದೆ. ಯಾವುದೇ ರೀತಿಯ ಸಮಸ್ಯೆ ಕಂಡುಬಂದಲ್ಲಿ ಅವರಿಗೆ 24 ಗಂಟೆಗಳ ವೈದ್ಯಕೀಯ ಸೇವೆಯನ್ನು ಒದಗಿಸಲಾಗುವುದು ಎಂದು ಡಾಕ್ಟರ್​ ಸುನೀಲ್​​​​ ಕುಮಾರ್​ ಹೇಳಿದ್ದಾರೆ.

ABOUT THE AUTHOR

...view details