ಕರ್ನಾಟಕ

karnataka

ETV Bharat / bharat

ಕೇರಳ ಜೈಲಿನಲ್ಲಿದ್ದ 60 ಕೈದಿಗಳಿಗೆ ಕೊರೊನಾ ದೃಢ.. - ಕೇರಳ ಜೈಲಿನಲ್ಲಿದ್ದ 60 ಕೈದಿಗಳಿಗೆ ಕೊರೊನಾ ದೃಢ

ಎರ್ನಾಕುಲಂ ಜಿಲ್ಲೆಯಲ್ಲಿ ಸುಮಾರು 4396 ಹೊಸ ಕೋವಿಡ್ ಪ್ರಕರಣ ವರದಿಯಾಗಿವೆ. ಇದು ರಾಜ್ಯದಲ್ಲಿ ಅತಿ ಹೆಚ್ಚು ಪ್ರಕರಣಗಳನ್ನು ವರದಿ ಮಾಡಿದೆ..

  Corona to  60 inmates in Kerala jail
Corona to 60 inmates in Kerala jail

By

Published : Apr 23, 2021, 3:40 PM IST

ಎರ್ನಾಕುಲಂ (ಕೇರಳ) :ಕೊರೊನಾ ಇಲ್ಲಿನ ಕಕ್ಕನಾಡಿನ ಜಿಲ್ಲಾ ಜೈಲಿನಲ್ಲಿನ ಕಾಂಪೌಡ್‌ನ ದಾಟಿ ಹೋಗಿದೆ. ಜೈಲಿನಲ್ಲಿರುವ ಅರವತ್ತು ಕೈದಿಗಳಿಗೆ ಕೊರೊನಾ ದೃಢಪಟ್ಟಿದೆ. ಈ ಹಿನ್ನೆಲೆ ಇವರನ್ನೆಲ್ಲಾ ಒಂದೇ ಬ್ಲಾಕ್‌ಗೆ ಸ್ಥಳಾಂತರಿಸಲಾಗಿದೆ.

ಇವರಲ್ಲಿ ತೀವ್ರ ರೋಗಲಕ್ಷಣ ಕಾಣಿಸಿಕೊಂಡ ಮೂವರು ಕೈದಿಗಳನ್ನು ಪರಾವೂರಿನ ಪ್ರಥಮ ಚಿಕಿತ್ಸಾ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. 65 ಸಿಬ್ಬಂದಿಯಲ್ಲಿ ಇಬ್ಬರು ಸಿಬ್ಬಂದಿಗೂ ಕೊರೊನಾ ವಕ್ಕರಿಸಿದೆ. ಜೈಲಿನಲ್ಲಿ ಒಟ್ಟಾರೆ 180 ಕೈದಿಗಳು ಇದ್ದಾರೆ.

ಈ ಕೊರೊನಾ ನಿಯಂತ್ರಿಸಲು ಜೈಲು ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ. ಎರ್ನಾಕುಲಂ ಜಿಲ್ಲೆಯಲ್ಲಿ ಸುಮಾರು 4396 ಹೊಸ ಕೋವಿಡ್ ಪ್ರಕರಣ ವರದಿಯಾಗಿವೆ. ಇದು ರಾಜ್ಯದಲ್ಲಿ ಅತಿ ಹೆಚ್ಚು ಪ್ರಕರಣಗಳನ್ನು ವರದಿ ಮಾಡಿದೆ.

ABOUT THE AUTHOR

...view details