ಕರ್ನಾಟಕ

karnataka

ನಟಿ ಕರೀನಾ ಕಪೂರ್ ಖಾನ್, ಅಮೃತಾ ಅರೋರಾಗೆ ಕೊರೊನಾ ಪಾಸಿಟಿವ್​

By

Published : Dec 13, 2021, 9:12 PM IST

Updated : Dec 14, 2021, 7:51 PM IST

ಕರೀನಾ ಕಪೂರ್ ಖಾನ್ ನಿವಾಸವನ್ನು ಸೀಲ್ ಮಾಡಲಾಗಿದೆ. ಅವರು ಸರಿಯಾದ ಮಾಹಿತಿಯನ್ನು ನೀಡದ ಹಿನ್ನೆಲೆ ನಮ್ಮ ಅಧಿಕಾರಿಗಳು ಆಕೆ ಜೊತೆ ಎಷ್ಟು ಜನ ಸಂಪರ್ಕಕ್ಕೆ ಬಂದಿದ್ದಾರೆ ಎಂದು ಕಂಡು ಹಿಡಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಪಾಲಿಕೆ ಅಧಿಕಾರಿಗಳು ಹೇಳಿದರು.

ನಟಿ ಕರೀನಾ ಕಪೂರ್ ಖಾನ್, ಅಮೃತಾ ಅರೋರಾಗೆ ಕೊರೊನಾ ಪಾಸಿಟಿವ್​
ನಟಿ ಕರೀನಾ ಕಪೂರ್ ಖಾನ್, ಅಮೃತಾ ಅರೋರಾಗೆ ಕೊರೊನಾ ಪಾಸಿಟಿವ್​

ಮುಂಬೈ: ನಟಿ ಕರೀನಾ ಕಪೂರ್ ಖಾನ್ ಹಾಗೂ ಅವರ ಸ್ನೇಹಿತೆ ಅಮೃತಾ ಅರೋರಾಗೆ ಕೊರೊನಾ ದೃಢಪಟ್ಟಿದೆ. ಈ ಬಗ್ಗೆ ಮುಂಬೈ ಮಹಾನಗರ ಪಾಲಿಕೆ ಮಾಹಿತಿ ನೀಡಿದೆ. ನನಗೆ ಕೊರೊನಾ ಪಾಸಿಟಿವ್​ ಆಗಿದೆ. ಎಲ್ಲ ವೈದ್ಯಕೀಯ ಪ್ರೋಟೋಕಾಲ್‌ಗಳನ್ನು ಅನುಸರಿಸುತ್ತಿದ್ದೇನೆ, ಇದರ ಬೆನ್ನಲ್ಲೇ ನಾನು ಕ್ವಾರಂಟೈನ್​ ಆಗಿದ್ದೇನೆ. ನನ್ನೊಂದಿಗೆ ಸಂಪರ್ಕಕ್ಕೆ ಬಂದವರು ದಯವಿಟ್ಟು ಪರೀಕ್ಷಿಸಲು ವಿನಂತಿಸುತ್ತೇನೆ ಎಂದು ಎರಡೂ ಡೋಸ್​ಗಳನ್ನು ಹಾಕಿಸಿಕೊಂಡಿರುವ ಕರೀನಾ ಕಪೂರ್ ಹೇಳಿದ್ದಾರೆ.

ನನ್ನ ಕುಟುಂಬ ಮತ್ತು ಸಿಬ್ಬಂದಿ ಕೂಡ ಎರಡೂ ಲಸಿಕೆ ಹಾಕಿಸಿಕೊಂಡಿದ್ದಾರೆ. ಆದರೆ, ಅವರಲ್ಲಿ ಪ್ರಸ್ತುತ ಯಾವುದೇ ರೋಗಲಕ್ಷಣ ಕಂಡು ಬಂದಿಲ್ಲ. ಅದೃಷ್ಟವಶಾತ್, ನಾನು ಚೆನ್ನಾಗಿದ್ದೇನೆ. ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತೇನೆ ಎಂದು ಕಪೂರ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಇನ್ನು ಕರೀನಾ ಕಪೂರ್ ಅವರ ಆಪ್ತ ಸ್ನೇಹಿತೆ ಅಮೃತಾ ಅರೋರಾ ಅವರಿಗೂ ಸಹ ಕೊರೊನಾ ದೃಢಪಟ್ಟಿದೆ. ಈ ಇಬ್ಬರ ಸಂಪರ್ಕಕ್ಕೆ ಬಂದ ಎಲ್ಲರಿಗೂ ಆರ್‌ಟಿಪಿಸಿಆರ್ ಪರೀಕ್ಷೆಗಳನ್ನು ಮಾಡಲು ಆದೇಶಿಸಲಾಗಿದೆ ಎಂದು ಬಿಎಂಸಿ ಹೇಳಿದೆ.

ಇದನ್ನೂ ಓದಿ: 2021ರ ಮಿಸ್‌ ಯೂನಿವರ್ಸ್‌ ಹರ್ನಾಜ್‌ ಕೌರ್‌ ಯಾರು? ಇವರ ಸೇವೆಗಳು ನಿಜಕ್ಕೂ ಎಲ್ಲ ಯುವತಿಯರಿಗೂ ಸ್ಫೂರ್ತಿ!

ಈ ನಟಿಯರು ಪಾರ್ಟಿಗಳಿಗೆ ಹೋಗುವ ಮೂಲಕ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬ ವರದಿಗಳ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬೈನಲ್ಲಿ ಓಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ, ನಗರದಲ್ಲಿ ದೊಡ್ಡ ಸಭೆಗಳನ್ನು ನಿಷೇಧಿಸಲಾಗಿದೆ. ಮಹಾರಾಷ್ಟ್ರದಾದ್ಯಂತ ಇಪ್ಪತ್ತು ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ ಹಾಗೆ ಏಳು ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಭಾರತದಾದ್ಯಂತ ಒಮಿಕ್ರಾನ್‌ನ 40 ಪ್ರಕರಣಗಳಿವೆ. ಇದು ಕಳೆದ ತಿಂಗಳು ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಕಂಡು ಬಂದ ಹೊಸ ಕೋವಿಡ್ ರೂಪಾಂತರವಾಗಿದೆ. ಹೆಚ್ಚಿನ ಸಂಖ್ಯೆಯ ರೂಪಾಂತರಗಳನ್ನು ಹೊಂದಿರುವ ತಳಿಯು ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚು ಸಾಂಕ್ರಾಮಿಕವಾಗಿದೆ. ಆದರೆ, ಸೌಮ್ಯವಾದ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ ಎಂದು ನಂಬಲಾಗಿದೆ.

ಕಪೂರ್​ ನಿವಾಸ ಸೀಲ್​ಡೌನ್​:

ಕಪೂರ್ ಖಾನ್ ನಿವಾಸವನ್ನು ಸೀಲ್​ಡೌನ್​ ಮಾಡಲಾಗಿದೆ. ಅವರು ಇನ್ನೂ ಸರಿಯಾದ ಹೆಚ್ಚಿನ ಮಾಹಿತಿ ನೀಡಿಲ್ಲ. ಆದರೆ, ನಮ್ಮ ಅಧಿಕಾರಿಗಳು ಎಷ್ಟು ಜನರು ಅವರೊಂದಿಗೆ ಸಂಪರ್ಕಕ್ಕೆ ಬಂದಿದ್ದಾರೆ ಎಂದು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Last Updated : Dec 14, 2021, 7:51 PM IST

ABOUT THE AUTHOR

...view details