ಕರ್ನಾಟಕ

karnataka

ETV Bharat / bharat

ಬಲವಂತವಾಗಿ ಸೊಸೆಯನ್ನ ಅಪ್ಪಿಕೊಂಡು ಆಕೆಗೂ ವೈರಸ್​ ಅಂಟಿಸಿದ ಕೋವಿಡ್​ ಸೋಂಕಿತ ಅತ್ತೆ! - ಸುಮಾರಿಪೇಟಾ

ತನ್ನ ಹತ್ತಿರ ಯಾರೂ ಬರುತ್ತಿಲ್ಲ ಎಂದು ಬೇಸರಗೊಂಡಿದ್ದ ಕೊರೊನಾ ಸೋಂಕಿತ ಅತ್ತೆ ಸೊಸೆಗೂ ವೈರಸ್​ ಅಂಟಿಸಿರುವ ವಿಚಿತ್ರ ಘಟನೆ ತೆಲಂಗಾಣದಲ್ಲಿ ನಡೆದಿದೆ.

Covid positive woman hugs daughter-in-law to infect her
ಬಲವಂತವಾಗಿ ಸೊಸೆಯನ್ನ ಅಪ್ಪಿಕೊಂಡು ಆಕೆಗೂ ವೈರಸ್​ ಅಂಟಿಸಿದ ಕೋವಿಡ್​ ಸೋಂಕಿತ ಅತ್ತೆ

By

Published : Jun 5, 2021, 8:24 AM IST

ಹೈದರಾಬಾದ್​ (ತೆಲಂಗಾಣ):ಕೋವಿಡ್​ ಪಾಟಿಟಿವ್​ ಬಂದು ಐಸೋಲೇಷನ್​ಗೆ ಒಳಗಾಗಿದ್ದ ಅತ್ತೆ ಬಲವಂತವಾಗಿ ಸೊಸೆಯನ್ನ ತಬ್ಬಿಕೊಂಡು ಆಕೆಗೂ ಸೋಂಕು ಅಂಟಿಸಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ತೆಲಂಗಾಣದ ರಾಜಣ್ಣ ಸಿರಿಸಿಲ್ಲಾ ಜಿಲ್ಲೆಯ ಸುಮಾರಿಪೇಟಾ ಎಂಬ ಗ್ರಾಮದಲ್ಲಿ ವಾಸವಾಗಿರುವ ಮಹಿಳೆಗೆ ಕೊರೊನಾ ತಗುಲಿದ್ದರಿಂದ ಅವರನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿರಿಸಲಾಗಿತ್ತು. ಪ್ರತ್ಯೇಕವಾಗಿ ಆಹಾರ ನೀಡಲಾಗುತ್ತಿತ್ತು ಹಾಗೂ ಮೊಮ್ಮಕ್ಕಳನ್ನು ಅವರ ಬಳಿ ಹೋಗಲು ಸೊಸೆ ಬಿಡುತ್ತಿರಲಿಲ್ಲ ಎಂದು ಹೇಳಲಾಗಿದೆ.

ಇದನ್ನೂ ಓದಿ: ಘೋರ ದುರಂತ: ಹೆಂಡತಿ ಶವ ಮನೆಗೆ ತರುವಾಗ ನಡೆದ ಅಪಘಾತದಲ್ಲಿ ಪತಿ ದುರ್ಮರಣ

ತನ್ನ ಬಳಿ ಯಾರೂ ಬರುವುದಿಲ್ಲ, ಅಂತರ ಕಾಯ್ದುಕೊಳ್ಳುತ್ತಿದ್ದಾರೆಂದು ಬೇಸರಗೊಂಡಿದ್ದ ಮಹಿಳೆ, ನಿನಗೂ ಕೊರೊನಾ ಬರಬೇಕೆಂದು ಬಲವಂತವಾಗಿ ಸೊಸೆಯನ್ನ ಅಪ್ಪಿಕೊಂಡಿದ್ದಾರೆ. ಸೊಸೆಯ ವರದಿಯೂ ಪಾಸಿಟಿವ್​ ಬರುತ್ತಿದ್ದಂತೆಯೇ ಆಕೆಯನ್ನು ಮನೆಯಿಂದ ಹೊರ ಕಳುಹಿಸಲಾಗಿದೆ. ಸೊಸೆಯ ತಂಗಿ ಬಂದು ತವರು ಮನೆಗೆ ಕರೆದೊಯ್ದು, ಕ್ವಾರಂಟೈನ್​ಗೆ ಒಳಪಡಿಸಿದ್ದಾರೆ.

ABOUT THE AUTHOR

...view details