ನಾಂದೇಡ್: ಗಂಡ ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಮನನೊಂದ ಪತ್ನಿ ತನ್ನ 3 ವರ್ಷದ ಮಗನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಲೋಹಾ ಪಟ್ಟಣದಲ್ಲಿ ನಡೆದಿದೆ.
ದಂಪತಿ ಚಾಪೆಗಳನ್ನು ಮಾರುವ ಕೆಲಸ ಮಾಡುತ್ತಿದ್ದರು. ಮಹಾರಾಷ್ಟ್ರ ಸರ್ಕಾರ ಘೋಷಿಸಿದ ಮಿನಿ ಲಾಕ್ಡೌನ್ನಿಂದ ವ್ಯಾಪಾರ ಕುಂಠಿತಗೊಂಡಿದೆ. ಹೀಗಾಗಿ ಕುಟುಂಬ ನಿರ್ವಹಣೆ ಕಷ್ಟವಾಗಿತ್ತು. ಇದರಿಂದ ಬೇಸತ್ತು ಮಹಿಳೆ ಸಾವಿನ ದಾರಿ ತುಳಿದಿದ್ದಾರೆ ಎಂಬ ಮಾಹಿತಿ ದೊರೆತಿದೆ.