ಜೋಧಪುರ್ (ರಾಜಸ್ಥಾನ): ರಾಜಸ್ಥಾನದ ಜೋಧ್ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿ ಸೇರಿದಂತೆ ಸುಮಾರು 70 ಕೊರೊನಾ ಸೋಂಕು ದೃಢಪಟ್ಟಿದ್ದು, ಸದ್ಯ 60 ಸಕ್ರಿಯ ಪ್ರಕರಣಗಳಿವೆ.
ಈ ಕುರಿತು ಮಾಹಿತಿ ನೀಡಿದ ವೈದ್ಯಾಧಿಕಾರಿ ಪಿ.ಸಿಂಗ್, ಮಾರ್ಚ್ 11ರಂದು ಗುಜರಾತ್, ಜೈಪುರ ಮತ್ತು ಚಂಡೀಗಢದ ಬುಡಕಟ್ಟು ಗ್ರಾಮಗಳಿಂದ ಕೆಲ ಸೋಂಕಿತರು ಐಐಟಿ ಕಾಲೇಜಿಗೆ ಆಗಮಿಸಿದ್ದರು. ಆ ಬಳಿಕ ಕೋವಿಡ್ ಪ್ರಕರಣಗಳು ಹೆಚ್ಚಾಗತೊಡಗಿದವು. ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿ ಸೇರಿದಂತೆ ಐಐಟಿಯ ಸುಮಾರು 70 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸದ್ಯ 60 ಸಕ್ರಿಯ ಪ್ರಕರಣಗಳಿವೆ.
ಅದರಲ್ಲಿ ಯಾವುದೇ ಗಂಭೀರ ಪ್ರಕರಣಗಳಿಲ್ಲ. ಕ್ಯಾಂಪಸ್‌ನಲ್ಲಿರುವ ಬ್ಲಾಕ್ ಜಿ3 ಅನ್ನು ಕಂಟೋನ್ಮೆಂಟ್ ವಲಯವೆಂದು ಘೋಷಿಸಲಾಗಿದೆ. ಗುಜರಾತ್, ಜೈಪುರ ಮತ್ತು ಚಂಡಿಗಢದಿಂದ ಬಂದ ವಿದ್ಯಾರ್ಥಿಗಳಲ್ಲೇ ಹೆಚ್ಚು ಕೊರೊನಾ ಸೋಂಕು ದೃಢಪಟ್ಟಿದೆ ಎಂದರು.