ಚೆಂಗಲ್ಪಟ್ಟು (ತಮಿಳುನಾಡು):ದೇಶದಲ್ಲಿ ಕೋವಿಡ್ ಎರಡನೇ ಅಲೆಯ ಅಟ್ಟಹಾಸದ ನಡುವೆ ಆಮ್ಲಜನಕದ ಕೊರತೆ ಗಂಭೀರ ಸ್ವರೂಪ ಪಡೆದಿದೆ. ಇದೀಗ ತಮಿಳುನಾಡಿನಲ್ಲಿ ಮತ್ತೊಂದು ಘೋರ ದುರಂತ ಸಂಭವಿಸಿದೆ.
ತಮಿಳುನಾಡಿನಲ್ಲಿ 11 ಸೋಂಕಿತರ ದಾರುಣ ಸಾವು ಇಲ್ಲಿನ ಚೆಂಗಲ್ಪಟ್ಟು ಸರ್ಕಾರಿ ಆಸ್ಪತ್ರೆಯಲ್ಲಿ ಮೂರು ಗಂಟೆಗೂ ಹೆಚ್ಚು ಕಾಲ ಎದುರಾದ ಆಕ್ಸಿಜನ್ ಕೊರತೆಯಿಂದ ಹನ್ನೊಂದು ಜನರ ಪ್ರಾಣಪಕ್ಷಿ ಹಾರಿ ಹೋಗಿದೆ.
ಇದನ್ನೂ ಓದಿ:ಅಂತರ್‌ರಾಜ್ಯ ಪ್ರಯಾಣಕ್ಕೆ RT-PCR ವರದಿ ಬೇಕಿಲ್ಲ: ಕೋವಿಡ್ ಪರೀಕ್ಷೆಗೆ ಕೇಂದ್ರದಿಂದ ಹೊಸ ನಿಯಮ
ತಮಿಳುನಾಡಿನಲ್ಲಿ ಮಂಗಳವಾರ ಕೊರೊನಾ ಪ್ರಕರಣಗಳ ಸಂಖ್ಯೆ 21,000 ಗಡಿ ದಾಟಿದೆ. ಒಟ್ಟು 21,228 ಜನರು ಸೋಂಕಿಗೆ ತುತ್ತಾಗಿದ್ದು, 144 ಜನರು ಸಾವನ್ನಪ್ಪಿದ್ದಾರೆ. ಮಾರ್ಚ್ 5 ರಿಂದ ಹೊಸ ಕೊರೊನಾ ಸೋಂಕುಗಳ ಪ್ರಮಾಣ ಹೆಚ್ಚುತ್ತಿದೆ. ದೈನಂದಿನ ಪ್ರಕರಣಗಳ ಉಲ್ಬಣದಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 1,25,230 ಕ್ಕೆ ತಲುಪಿದೆ.
ರಾಜಧಾನಿ ಚೆನ್ನೈನಲ್ಲಿ ಮಂಗಳವಾರ 6,228 ಜನರು ಕೊರೊನಾ ಸೋಂಕಿಗೆ ತುತ್ತಾದರೆ, ಎರಡನೇ ಸ್ಥಾನದಲ್ಲಿರುವ ಚೆಂಗಲ್ಪಟ್ಟು ಜಿಲ್ಲೆಯಲ್ಲಿ 1,608 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.