ವಿದಿಶಾ (ಮಧ್ಯಪ್ರದೇಶ): ಚಿಕಿತ್ಸೆ ಪಡೆಯುತ್ತಿದ್ದ ಕೋವಿಡ್ ರೋಗಿಯೊಬ್ಬರು ಬದುಕ್ಕಿದ್ದಾಗಲೇ ಸಾವನ್ನಪ್ಪಿದ್ದಾರೆ ಎಂದು ಎರಡೆರಡು ಬಾರಿ ವರದಿ ನೀಡಿರುವ ಘಟನೆ ನಡೆದಿದೆ. ಮಧ್ಯಪ್ರದೇಶದ ವಿದಿಶಾದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇಂತಹದೊಂದು ನಿರ್ಲಕ್ಷ್ಯ ನಡೆದಿರುವುದು ಬೆಳಕಿಗೆ ಬಂದಿದೆ.
ಅಸಲಿಗೆ ನಡೆದಿದ್ದೇನು..?
ಇಲ್ಲಿನ ಸುಲ್ತಾನಿಯಾ ನಗರದ ನಿವಾಸಿ ಗೊರೆಲಾಲ್ ಕೌರಿಯವರು ಕೋವಿಡ್ ಬಂದಿದ್ದ ಹಿನ್ನೆಲೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಆದರೆ, ಆಸ್ಪತ್ರೆಗೆ ದಾಖಲಾದ ಮೊದಲ ದಿನವೇ ಅವರು ಸಾವನಪ್ಪಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ. ಇದರಿಂದ ಕುಟುಂಬಸ್ಥರು ಆಘಾತಕ್ಕೆ ಒಳಗಾಗಿದ್ದಾರೆ. ಕುಟುಂಬಸ್ಥರು ಆಸ್ಪತ್ರೆಗೆ ಆಗಮಸಿದಾಗ ಆತ ಇನ್ನೂ ಉಸಿರಾಡುತ್ತಿರುವುದು ಕಂಡು ಬಂದಿದೆ. ತಕ್ಷಣವೇ ಆತನನ್ನು ಚಿಕಿತ್ಸೆಗೆ ಒಳಪಡಿಸಲಾಗಿದೆ.
ಇದಾದ ಮಾರನೇ ದಿನ ಏಪ್ರಿಲ್ 14ರಂದು ಮತ್ತೆ ಬೆಳಗ್ಗೆ ವೈದ್ಯರು ಕರೆ ಮಾಡಿ ಗೊರೇಲಾಲ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಆದರೆ, ಈ ಬಾರಿ ಕುಟುಂಬಸ್ಥರಿಗೆ ಗೋರೆಲಾಲ್ ಮೃತದೇಹದ ಬದಲು ಬೇರೊಂದು ಮೃತದೇಹ ನೀಡಿದ್ದಾರೆ. ಗೋರೆಲಾಲ್ ಮೃತದೇಹ ನೋಡಿದ ಪುತ್ರ ಇದು ನಮ್ಮ ತಂದೆಯಲ್ಲ ಎಂದು ಗುರುತಿಸಿದ್ದಾನೆ. ರಕ್ಷಣ ಎಚ್ಚೆತ್ತ ಆಸ್ಪತ್ರೆ ಸಿಬ್ಬಂದಿ, ಗೋರೆಲಾಲ್ನನ್ನು ಪತ್ತೆಮಾಡಿ ವೆಂಟಿಲೇಟರ್ಗೆ ಶಿಫ್ಟ್ ಮಾಡಿದ್ದಾರೆ.
ಕೋವಿಡ್ ರೋಗಿ ಬದುಕಿದ್ದಾಗಲೇ ಎರಡೆರಡು ಬಾರಿ ಸಾವನಪ್ಪಿದ್ದಾನೆಂದು ವರದಿ ನೀಡಿದ ಆಸ್ಪತ್ರೆ ಈ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ವೈದ್ಯಕೀಯ ಕಾಲೇಜಿನ ಡೀನ್ ಸುನಿಲ್ ನಂದೇಶ್ವರ, ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ನಡುವೆ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಸಹ ಏರಿಕೆಯಾಗಿದೆ. ಇದರಿಂದ ಗೊಂದಲ ಏರ್ಪಟ್ಟು ಸ್ಟಾಫ್ ನರ್ಸ್ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಘಟನೆ ಬಗ್ಗೆ ವಿವರಣೆ ನೀಡಿದ್ದಾರೆ.
ಇದೀಗ ಗೋರೆಲಾಲ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.