ಮುಂಬೈ (ಮಹಾರಾಷ್ಟ್ರ):ಕೊರೊನಾ ಸೋಂಕಿತನೋರ್ವ ವೈದ್ಯನ ಮೇಲೆ ಚಾಕುವಿನಿಂದ ಹಲ್ಲೆಗೈದ ಘಟನೆ ಮಲಬಾರ್ ಹಿಲ್ ಕೋವಿಡ್ ಕೇಂದ್ರದಲ್ಲಿ ನಡೆದಿದೆ.
ಐಸಿಯುಗೆ ತೆರಳುವ ಬಗ್ಗೆ ವಿಚಾರವಾಗಿ ಕೋಪಗೊಂಡ ರೋಗಿಯು ವೈದ್ಯರ ಕುತ್ತಿಗೆ ಮತ್ತು ಬೆನ್ನಿನ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾನೆ. ಘಟನೆಯಲ್ಲಿ ವೈದ್ಯ ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.