ಕರ್ನಾಟಕ

karnataka

ETV Bharat / bharat

ದಯವಿಟ್ಟು ಕೋವಿಡ್ ಮಾರ್ಗಸೂಚಿ ಪಾಲಿಸಿ: ಕೊರೊನಾ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ ಇನ್ಸ್​ಪೆಕ್ಟರ್​​ ಭಾವನಾತ್ಮಕ ವಿಡಿಯೋ! - ಇನ್ಸ್‌ಪೆಕ್ಟರ್ ಖಲೀಲ್ ಅಹ್ಮದ್ ಖಿಲ್ಜಿ

ಮಹಾಮಾರಿ ಕೊರೊನಾ ಸೋಂಕಿಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಇನ್ಸ್​ಪೆಕ್ಟರ್​ ಒಬ್ಬರು ವಿಡಿಯೋ ಹರಿಬಿಟ್ಟಿದ್ದು, ಕೋವಿಡ್ ಮಾರ್ಗಸೂಚಿ ಅನುಸರಣೆ ಮಾಡುವಂತೆ ಮನವಿ ಮಾಡಿದ್ದಾರೆ.

Inspector Khalil Ahmed Khilji
Inspector Khalil Ahmed Khilji

By

Published : Apr 20, 2021, 5:56 PM IST

Updated : Apr 21, 2021, 9:12 AM IST

ಜೈಪುರ(ರಾಜಸ್ಥಾನ):ದೇಶದಲ್ಲಿ ಎರಡನೇ ಹಂತದ ಕೋವಿಡ್ ಅಲೆ ಜೋರಾಗಿದ್ದು, ನಿತ್ಯ ಸಾವಿರಾರು ಜನರು ಸಾವನ್ನಪ್ಪುತ್ತಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಬೆಡ್​ ಸಿಗದಂತಹ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಇದರ ಮಧ್ಯೆ ಪೊಲೀಸ್ ಅಧಿಕಾರಿಯೊಬ್ಬ ಭಾವನಾತ್ಮಕ ಮನವಿ ಮಾಡಿದ್ದಾರೆ.

ಕೋವಿಡ್​ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿರುವ ರಾಜಸ್ಥಾನದ ಪೊಲೀಸ್​ ಅಧಿಕಾರಿಯೊಬ್ಬರು ಭಾವನಾತ್ಮಕ ವಿಡಿಯೋ ರಿಲೀಸ್​ ಮಾಡಿದ್ದು, ಸರಿಯಾದ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಕೊರೊನಾ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ ಇನ್ಸ್​ಪೆಕ್ಟರ್​​ ಭಾವನಾತ್ಮಕ ವಿಡಿಯೋ!

ಮಹಾಮಾರಿ ಕೊರೊನಾ ವೈರಸ್​ ಸೋಂಕಿಗೊಳಗಾಗಿ ಏಪ್ರಿಲ್ 5 ರಿಂದ ಚಿಕಿತ್ಸೆ ಪಡೆಯುತ್ತಿರುವ ಇನ್ಸ್‌ಪೆಕ್ಟರ್ ಖಲೀಲ್ ಅಹ್ಮದ್ ಖಿಲ್ಜಿ ಆಸ್ಪತ್ರೆಯ ಹಾಸಿಗೆಯಿಂದ ಭಾವನಾತ್ಮಕ ವಿಡಿಯೋ ರಿಲೀಸ್​ ಮಾಡಿದ್ದು, ಕೋವಿಡ್​ನ ಎಲ್ಲ ಮಾರ್ಗಸೂಚಿ ಪಾಲಿಸುವಂತೆ ಮನವಿ ಮಾಡಿದ್ದಾರೆ. ಆಕ್ಸಿಜನ್ ಮಟ್ಟ ಶೇ.90ರಷ್ಟಿದ್ದು, ಶ್ವಾಸಕೋಸಕ್ಕೆ ಸಾಕಷ್ಟು ಹಾನಿಯಾಗಿದೆ. ಹೀಗಾಗಿ ಚೇತರಿಸಿಕೊಳ್ಳಲು ಕಷ್ಟವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಮೋದಿಗೆ ಪತ್ರ ಬರೆದ ಮಮತಾ ಬ್ಯಾನರ್ಜಿ: ಯುನಿವರ್ಸಲ್ 'ವ್ಯಾಕ್ಸಿನೇಷನ್ ನೀತಿ ಟೊಳ್ಳು ಎಂದ ದೀದಿ

ಯಾವುದೇ ಕಾರಣಕ್ಕೂ ಕೋವಿಡ್​ ಪರಿಸ್ಥಿತಿ ಲಘುವಾಗಿ ತೆಗೆದುಕೊಳ್ಳದಂತೆ ಎಚ್ಚರಿಕೆ ನೀಡಿರುವ ಅವರು, ಸಾಮಾಜಿಕ ಅಂತರ, ನಿಯಮಿತವಾಗಿ ಕೈತೊಳೆಯುವುದು, ಮಾಸ್ಕ್ ಬಳಕೆ ಮಾಡುವಂತೆ ಮನವಿ ಮಾಡಿದ್ದಾರೆ. ಕೊರೊನಾ ಸೋಂಕಿನಿಂದಾಗಿ ಇನ್ಸ್​ಪೆಕ್ಟರ್ ಖಿಲ್ಜಿ ಅವರ ಪತ್ನಿ ಮತ್ತು ಇಬ್ಬರು ಪುತ್ರಿಯರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಅವರು ಸಂಪೂರ್ಣವಾಗಿ ಚೇತರಿಸಿಕೊಂಡು ಡಿಸ್ಚಾರ್ಜ್​​ ಆಗಿದ್ದಾರೆ. 2020ರಲ್ಲಿ ರಾಜಸ್ಥಾನದಲ್ಲಿ 4 ಸಾವಿರಕ್ಕೂ ಹೆಚ್ಚು ಪೊಲೀಸರು ಕೋವಿಡ್​​ ಸೋಂಕಿಗೊಳಗಾಗಿದ್ದು, 21 ಜನರು ಸಾವನ್ನಪ್ಪಿದ್ದಾರೆ.

Last Updated : Apr 21, 2021, 9:12 AM IST

ABOUT THE AUTHOR

...view details