ಬಸ್ತರ್(ಛತ್ತೀಸ್‌ಗಢ):ಇಲ್ಲಿನ ದಕ್ಷಿಣ ಬಸ್ತಾರ್ ಅರಣ್ಯ ಪ್ರದೇಶದಲ್ಲಿರುವ ಮಾವೋವಾದಿಗಳಿಗೆ ಕೊರೊನಾ ಸೋಂಕು ತಗುಲಿದ್ದು,ಅಂದಾಜು 10 ನಕ್ಸಲರು ಸಾವನ್ನಪ್ಪಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.
ಸುಕ್ಮಾ, ದಂತೇವಾಡ, ಬಿಜಾಪುರ ಜಿಲ್ಲೆಗಳ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ 100ಕ್ಕೂ ಹೆಚ್ಚು ನಕ್ಸಲರಿಗೆ ಕೊರೊನಾ ತಗುಲಿದೆ. ಹಲವರು ವಿಷಾಹಾರ ಸೇವನೆಯಿಂದ ಬಳಲುತ್ತಿರುವುದಾಗಿ ಪೊಲೀಸ್ ಇಲಾಖೆಗೆ ಮಾಹಿತಿ ಸಿಕ್ಕಿದೆ.
ದಂಡಕಾರಣ್ಯ ವಿಶೇಷ ವಲಯದ ನಕ್ಸಲ್ ನಾಯಕಿ ಸುಜಾತ, ಜಯಲಾಲ್ ಮತ್ತು ದಿನೇಶ್ ಸೇರಿದಂತೆ 10 ನಕ್ಸಲರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ.
ಕೊರೊನಾ ಸಂಬಂಧಿತ ಜಾಗೃತಿಗಳನ್ನು ಪಾಲನೆ ಮಾಡದೆ ಗಡಿಭಾಗದ ಗಿರಿಜನಗಳ ಜೊತೆ ಸಮಾವೇಶ ನಡೆಸಿದ್ದ ಕಾರಣ ಮಾವೋವಾದಿಗಳಿಗೆ ಕೊರೊನಾ ಸೋಂಕು ಹರಡಿದೆ. ಅವಧಿ ಮುಗಿದಿರುವ ಆಹಾರ ಪದಾರ್ಥಗಳು, ಔಷಧಿಗಳ ಸೇವನೆಯಿಂದಾಗಿ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂಬ ಬಗ್ಗೆ ವಿಶ್ವಾಸರ್ಹರಿಂದ ಮಾಹಿತಿ ಬಂದಿದೆ. ಈಗಲಾದ್ರೂ ಅವರು ಶರಣಾದ್ರೆ ವೈದ್ಯಕೀಯ ಸೇವೆಗಳನ್ನು ನೀಡಲು ಸಾಧ್ಯವಾಗುತ್ತದೆ ಎಂದು ದಂತೇವಾಡ ಎಸ್ಪಿ ಅಭಿಷೇಕ್ ಪಲ್ಲವ್ ಹೇಳಿದ್ದಾರೆ.
ಇದನ್ನೂ ಓದಿ:Revealed! ಗಂಗಾ ನದಿಯಲ್ಲಿ ಮೃತದೇಹ ತೇಲಿಬಿಡುತ್ತಿದ್ದ ವ್ಯಕ್ತಿ ಸಿಕ್ಕಿಬಿದ್ದ! ಆತ ಹೇಳಿದ್ದೇನು ಕೇಳಿ..