ಕರ್ನಾಟಕ

karnataka

ETV Bharat / bharat

ಮಾರ್ಚ್​ 15ರಿಂದ ನಾಗ್ಪುರ​ ಲಾಕ್​ಡೌನ್​.. ದೇಶಕ್ಕೆ ಎಚ್ಚರಿಕೆ ಗಂಟೆ ಬಾರಿಸಿದ ‘ಮಹಾ’ ನಿರ್ಣಯ! - ನಾಗ್ಪುರ್​ದಲ್ಲಿ ಲಾಕ್​ಡೌನ್​,

ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಯಲ್ಲಿ 13 ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಕಂಡು ಬಂದಿದ್ದು, ನಾಗ್ಪುರದಲ್ಲಿ ಮಾರ್ಚ್​ 15ರಿಂದ ಲಾಕ್​ಡೌನ್​ ಹೇರಲಾಗಿದೆ.

Lockdown in Maharashtra, Lockdown in Nagpur, Lockdown in Nagpur from March 15, corona effect, corona effect news, ಮಹಾರಾಷ್ಟ್ರದಲ್ಲಿ ಲಾಕ್​ಡೌನ್​, ನಾಗ್ಪುರ್​ದಲ್ಲಿ ಲಾಕ್​ಡೌನ್​, ಮಾರ್ಚ್​ 15ರಿಂದ ನಾಗ್ಪುರ್​ದಲ್ಲಿ ಲಾಕ್​ಡೌನ್​, ಕೊರೊನಾ ಎಫೆಕ್ಟ್​, ಕೊರೊನಾ ಎಫೆಕ್ಟ್​ ಸುದ್ದಿ,
ಮಾರ್ಚ್​ 15ರಿಂದ ನಾಗ್ಪುರ್​ ಲಾಕ್​ಡೌನ್​

By

Published : Mar 11, 2021, 2:02 PM IST

ನಾಗ್ಪುರ್​( ಮಹಾರಾಷ್ಟ್ರ):ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಲೇ ಇರುವುದರಿಂದ ಮಾರ್ಚ್ 15 ರಿಂದ ಮಾರ್ಚ್ 21 ರವರೆಗೆ ನಾಗ್ಪುರದಲ್ಲಿ ಲಾಕ್‌ಡೌನ್ ಜಾರಿಗೊಳಿಸಲು ಸರ್ಕಾರ ಆದೇಶಿಸಿದೆ.

ಲಾಕ್‌ಡೌನ್ ಸಮಯದಲ್ಲಿ ಅಗತ್ಯ ಸೇವೆಗಳನ್ನು ಮಾತ್ರ ನಿರ್ವಹಿಸಲು ಅನುಮತಿಸಲಾಗಿದೆ. ತರಕಾರಿ ಮತ್ತು ಹಾಲಿನ ಅಂಗಡಿಗಳು, ಇತರ ಅಗತ್ಯ ಸೇವೆಗಳ ಜೊತೆಗೆ ಕಾರ್ಯನಿರ್ವಹಿಸುವುದರಿಂದ ಜನರು ಯಾವುದೇ ಸಮಸ್ಯೆಗಳನ್ನು ಎದುರಿಸುವ ಅವಶ್ಯಕತೆ ಇಲ್ಲ.

ನಾಗ್ಪುರ ಪೊಲೀಸ್ ಆಯುಕ್ತ ವ್ಯಾಪ್ತಿಗೆ ಬರುವ ಎಲ್ಲ ಪ್ರದೇಶಗಳಲ್ಲಿಯೂ ಲಾಕ್ ಡೌನ್ ವಿಧಿಸಲಾಗಿದೆ. ಒಂದು ವರ್ಷದ ಹಿಂದೆ ಅಂದ್ರೆ ಈ ದಿನ ನಾಗ್ಪುರದಲ್ಲಿ ಮೊದಲ ಕೊರೊನಾ ಸೋಂಕು ಕಂಡು ಬಂದಿತ್ತು.

ಮಹಾರಾಷ್ಟ್ರದಲ್ಲಿ ಬುಧವಾರ 13,659 ಹೊಸ ಕೋವಿಡ್​ ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ಲಾಕ್​ಡೌನ್​ ಮಾಡಲು ಸರ್ಕಾರ ಆದೇಶಿಸಿದೆ.

ಇದು ದೇಶದ ದೈನಂದಿನ ಹೊಸ ಪ್ರಕರಣಗಳಲ್ಲಿ ಶೇಕಡಾ 60 ರಷ್ಟಿದೆ. ವಿಶೇಷವೆಂದರೆ, ಮಹಾರಾಷ್ಟ್ರ, ಕೇರಳ, ಪಂಜಾಬ್, ಕರ್ನಾಟಕ, ಗುಜರಾತ್ ಮತ್ತು ತಮಿಳುನಾಡು ಸೇರಿದಂತೆ ಆರು ರಾಜ್ಯಗಳು ಕಳೆದ 24 ಗಂಟೆಗಳಲ್ಲಿ ವರದಿಯಾದ ಹೊಸ ಕೊರೊನಾ ವೈರಸ್ ಪ್ರಕರಣಗಳಲ್ಲಿ ಶೇಕಡಾ 85.91 ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ. ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ ಒಟ್ಟು 22,854 ಹೊಸ ಪ್ರಕರಣಗಳು ದಾಖಲಾಗಿವೆ.

ಭಾರತದಲ್ಲಿ ಒಟ್ಟು ಕೋವಿಡ್​ ಸಕ್ರಿಯ ಕ್ಯಾಸೆಲೋಡ್ ಪ್ರಕರಣಗಳು 1,89,226 ಕ್ಕೆ ತಲುಪಿದೆ. ದೇಶದಲ್ಲಿ ಪ್ರಸ್ತುತ ಸಕ್ರಿಯ ಕ್ಯಾಸೆಲೋಡ್ ಭಾರತದ ಒಟ್ಟು ಸಕಾರಾತ್ಮಕ ಪ್ರಕರಣಗಳಲ್ಲಿ ಶೇಕಡಾ 1.68 ರಷ್ಟಿದೆ ಎಂದು ಅಂಕಿ- ಸಂಖ್ಯೆಗಳಿಂದ ಗೊತ್ತಾಗಿದೆ.

ABOUT THE AUTHOR

...view details