ಕರ್ನಾಟಕ

karnataka

ETV Bharat / bharat

ದೇಶದಲ್ಲಿ ಮತ್ತೆ ಕೋವಿಡ್‌ ಆತಂಕ: ಮೃತರ ಸಂಖ್ಯೆಯಲ್ಲಿ ಏರಿಕೆ - ಭಾರತದಲ್ಲಿ ಕೋವಿಡ್‌ ವರದಿ

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 149 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ದೈನಂದಿನ ಪಾಸಿಟಿವಿಟಿ ದರವು ಶೇ.0.40 ರಷ್ಟಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

corona cases india reports 2528 new cases 149 deaths in last 24 hrs
ದೇಶದಲ್ಲಿ ಮತ್ತೆ ಕೋವಿಡ್‌ ಆತಂಕ; ಸೋಂಕಿತರ ಸಂಖ್ಯೆಯಲ್ಲಿ ಏರಿಕೆ

By

Published : Mar 18, 2022, 11:23 AM IST

Updated : Mar 18, 2022, 11:37 AM IST

ನವದೆಹಲಿ: ಗುರುವಾರ ಬೆಳಗ್ಗೆಯಿಂದ ಶುಕ್ರವಾರ ಬೆಳಗಿನವರೆಗೆ ದೇಶದಲ್ಲಿ ಹೊಸದಾಗಿ 2,528 ಮಂದಿಗೆ ಕೋವಿಡ್‌ ದೃಢಪಟ್ಟಿದ್ದು, 3,997 ಸೋಂಕಿತರು ವೈರಸ್‌ನಿಂದ ಚೇತರಿಸಿಕೊಂಡಿದ್ದಾರೆ.

ಕೋವಿಡ್‌ನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 149 ಮಂದಿ ಮೃತಪಟ್ಟಿದ್ದಾರೆ. ನಿನ್ನೆಯ ವರದಿಯಲ್ಲಿ ಕೇವಲ 60 ಮಂದಿ ಸಾವನ್ನಪ್ಪಿದ್ದರು. ದೈನಂದಿನ ಪಾಸಿಟಿವಿಟಿ ದರವು ಶೇ.0.40 ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

  • ಒಟ್ಟು ಪ್ರಕರಣಗಳು: 4,30,04,005
  • ಒಟ್ಟು ಸಾವುಗಳು: 5,16,281
  • ಸಕ್ರಿಯ ಪ್ರಕರಣಗಳು: 29,181
  • ಚೇತರಿಸಿಕೊಂಡವರು: 4,24,58,543

ಲಸಿಕೆ ಪ್ರಕ್ರಿಯೆಯು ಭರದಿಂದ ಸಾಗುತ್ತಿದ್ದು, ನಿನ್ನೆ ಒಂದೇ ದಿನ 15,77,783 ಡೋಸ್‌ಗಳನ್ನು ವಿತರಿಸಲಾಗಿದೆ. ಒಟ್ಟು 1,80,97,94,588 ಲಸಿಕೆಗಳನ್ನು ನೀಡಲಾಗಿದೆ. ನಿನ್ನೆ 6,33,867 ಕೊರೊನಾ ಪರೀಕ್ಷೆಗಳನ್ನು ನಡೆಸಿರುವುದಾಗಿ ಐಸಿಎಂಆರ್‌ ತಿಳಿಸಿದೆ.

ಇದನ್ನೂ ಓದಿ:ಕೋವಿಡ್‌ ಸೋಂಕಿತ ಮಕ್ಕಳು, ಹದಿಹರೆಯದವರಿಗೆ ದೀರ್ಘಕಾಲದ ಸಮಸ್ಯೆ ಕಾಡುತ್ತಾ? ಅಧ್ಯಯನ ಹೇಳಿದಿಷ್ಟು..

Last Updated : Mar 18, 2022, 11:37 AM IST

ABOUT THE AUTHOR

...view details