ನವದೆಹಲಿ:ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಏರುಗತಿಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ 37,379 ಸೋಂಕಿತರು ಪತ್ತೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಲಾಖೆ ಮಾಹಿತಿ ನೀಡಿದೆ.
ಒಂದೇ ದಿನದಲ್ಲಿ 11,007 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಈವರೆಗೆ ಒಟ್ಟು 3,43,06,141 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಗುಣಮುಖರಾಗುವವರ ಪ್ರಮಾಣ ಶೇಕಡಾ 98.13ರಷ್ಟಿದೆ ಎಂದು ಆರೋಗ್ಯ ಇಲಾಖೆಯ ಅಂಕಿ ಅಂಶಗಳು ದೃಢಪಡಿಸಿವೆ.
ದೇಶದಲ್ಲಿ ಸಕ್ರಿಯ ಪ್ರಕರಣಗಳು ಒಟ್ಟು 1,71,830 ಮಂದಿ ಇದ್ದು, ಈಗ ಒಟ್ಟು ಸೋಂಕಿತರಲ್ಲಿ ಶೇಕಡಾ 0.49ರಷ್ಟು ಮಂದಿ ಸಕ್ರಿಯ ಸೋಂಕಿತರಿದ್ದಾರೆ.
ದಿನವೊಂದಕ್ಕೆ ಸೋಂಕು ಕಾಣಿಸಿಕೊಳ್ಳುವವರ ಪ್ರಮಾಣ ಶೇಕಡಾ 3.24ರಷ್ಟಿದ್ದು, ಒಂದು ವಾರದಲ್ಲಿ ಸೋಂಕು ಕಾಣಿಸಿಕೊಳ್ಳುವವರ ಪ್ರಮಾಣ ಶೇಕಡಾ 2.05ಕ್ಕೆ ಏರಿಕೆ ಕಂಡಿದೆ. ಕಳೆದ 24 ಗಂಟೆಯಲ್ಲಿ 124 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, ಈವರೆಗೆ ದೇಶದಲ್ಲಿ ಸುಮಾರು 4,82,017 ಮಂದಿ ಮೃತಪಟ್ಟಿದ್ದಾರೆ.
ಟೆಸ್ಟಿಂಗ್ ಮತ್ತು ವ್ಯಾಕ್ಸಿನೇಷನ್: ಈವರೆಗೆ ಸುಮಾರು 68 ಕೋಟಿ ಮಂದಿಗೆ ಸೋಂಕು ಪರೀಕ್ಷೆ ಮಾಡಲಾಗಿದೆ. ಸೋಮವಾರ ಒಂದೇ ದಿನ 11,54,302 ಮಂದಿಗೆ ಸೋಂಕು ಪರೀಕ್ಷೆ ಮಾಡಲಾಗಿದೆ ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮಾಹಿತಿ ನೀಡಿದೆ. ಈವರೆಗೆ ಸುಮಾರು 1,46,70,18,464 ಕೋಟಿ ವ್ಯಾಕ್ಸಿನೇಷನ್ ನೀಡಲಾಗಿದೆ.
ಒಮಿಕ್ರಾನ್ ಸೋಂಕು:ಆರೋಗ್ಯ ಇಲಾಖೆಯು ಮಾಹಿತಿಯಂತೆ ಪ್ರಕಾರ ದೇಶದ ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ 23 ರಾಜ್ಯಗಳಲ್ಲಿ ಒಮಿಕ್ರಾನ್ ಸೋಂಕು ಕಂಡು ಬಂದಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಮಂದಿ ಸೋಂಕಿತರು ಕಂಡುಬಂದಿದ್ದು, ನಂತರ ಸ್ಥಾನದಲ್ಲಿ ದೆಹಲಿ, ಕೇರಳ ಮತ್ತು ರಾಜಸ್ಥಾನ ರಾಜ್ಯಗಳಿವೆ. ಅಂದಹಾಗೆ ಈವರೆಗೆ ದೇಶದಲ್ಲಿ1,892 ಮಂದಿ ಒಮಿಕ್ರಾನ್ ಸೋಂಕಿತರು ಕಾಣಿಸಿಕೊಂಡಿದ್ದು, 766 ಮಂದಿ ಈಗಾಗಲೇ ಚೇತರಿಕೆ ಕಂಡಿದ್ದಾರೆ.
ಇದನ್ನೂ ಓದಿ:ಮಕ್ಕಳಿಗೆ ಲಸಿಕೆ ನೀಡುತ್ತಿರುವುದು ಅತ್ಯಂತ ಮಹತ್ವದ ಹೆಜ್ಜೆ: ಪ್ರಧಾನಿ ಮೋದಿ