ನವದೆಹಲಿ: ಒಮಿಕ್ರೋನ್ ರೂಪಾಂತರ ಆತಂಕದ ನಡುವೆ ಸಾಮಾನ್ಯ ಕೊರೊನಾ ಸೋಂಕಿತರ ಸಂಖ್ಯೆಯೂ ಕೂಡಾ ದೇಶದಲ್ಲಿ ಆತಂಕ ಮೂಡಿಸುತ್ತಿದೆ.
ಇತ್ತೀಚಿಗೆ ಒಂದು ದಿನದಲ್ಲಿ 9 ಸಾವಿರದ ಆಸುಪಾಸಿನಲ್ಲಿ ಕೊರೊನಾ ಸೋಂಕಿತರು ಕಾಣಿಸಿಕೊಳ್ಳುತ್ತಿದ್ದು, ಕಳೆದ 24 ಗಂಟೆಗಳಲ್ಲಿ 9,216 ಮಂದಿಯಲ್ಲಿ ಈ ಸೋಂಕು ಕಾಣಿಸಿಕೊಂಡಿದೆ.
ಈ ಕುರಿತು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಈಗ ಒಟ್ಟು ಇಬ್ಬರು ಒಮಿಕ್ರೋನ್ ಸೋಂಕಿತರು ಸೇರಿದಂತೆ ಒಟ್ಟು 99, 976 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂದಹಾಗೆ, ಗುರುವಾರ ಇಬ್ಬರು ಬೆಂಗಳೂರಿನಲ್ಲಿ ಒಮಿಕ್ರೋನ್ ಸೋಂಕಿತರು ಪತ್ತೆಯಾಗಿದ್ದರು.
ದೇಶದಲ್ಲಿ ಒಟ್ಟು ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ 3,46,15,757ಕ್ಕೆ ತಲುಪಿದೆ. ಈವರೆಗೆ 3,40,45,666 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಚೇತರಿಕೆಯ ಪ್ರಮಾಣವು ಶೇಕಡಾ 98.35ರಷ್ಟಿದೆ ಎಂದು ವರದಿಯಾಗಿದೆ. ಈವರೆಗೆ 4,70,115 ಮಂದಿ ಸೋಂಕಿಗೆ ಬಲಿಯಾಗಿದ್ದು, 24 ಗಂಟೆಯಲ್ಲಿ 391 ಮಂದಿ ಸಾವನ್ನಪ್ಪಿದ್ದಾರೆ.