ಕರ್ನಾಟಕ

karnataka

ETV Bharat / bharat

ಆಮ್ಲಜನಕ ತಂದು 22 ಜನರ ಪ್ರಾಣ ಉಳಿಸಿದ ಪೊಲೀಸಪ್ಪ.. ಈ ಪೊಲೀಸ್​ ಸಮಯ ಪ್ರಜ್ಞೆಗೆ ಸೆಲ್ಯೂಟ್​ - ಜಬಲ್ಪುರ ಪೊಲೀಸ್​ ಸುದ್ದಿ

ಸರಿಯಾದ ಸಮಯಕ್ಕೆ ಆಮ್ಲಜನಕವನ್ನು ಆಸ್ಪತ್ರೆಗೆ ಒದಗಿಸಿ 22 ಮಂದಿಯ ಜೀವ ಉಳಿಸುವಲ್ಲಿ ಪೊಲೀಸ್​ವೋರ್ವರು ಯಶಸ್ವಿಯಾಗಿದ್ದಾರೆ. ಮಧ್ಯಪ್ರದೇಶದ ಜಬಲ್ಪುರದ ಈ ಪೊಲೀಸ್​ ಕಾರ್ಯಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.

police madadgaar  corona case  mp police  save 22 life  oxygen  ಆಕ್ಸಿಜನ್​ ನೀಡಿ 22 ಜನರ ಪ್ರಾಣ ಉಳಿಸಿದ ಪೊಲೀಸರು  ಜಬಲ್ಪುರದಲ್ಲಿ ಆಕ್ಸಿಜನ್​ ನೀಡಿ 22 ಜನರ ಪ್ರಾಣ ಉಳಿಸಿದ ಪೊಲೀಸರು  ಜಬಲ್ಪುರ ಪೊಲೀಸ್​ ಸುದ್ದಿ  22 ಜನರ ಪ್ರಾಣ ಉಳಿಸಿದ ಪೊಲೀಸರು
ಸರಿಯಾದ ಸಮಯಕ್ಕೆ ಆಮ್ಲಜನಕ ತಂದು 22 ಜನರ ಪ್ರಾಣ ಉಳಿಸಿದ ಪೊಲೀಸಪ್ಪ

By

Published : May 1, 2021, 10:54 AM IST

ಜಬಲ್ಪುರ(ಮಧ್ಯ ಪ್ರದೇಶ):ಆಕ್ಸಿಜನ್​ ಸಮಸ್ಯೆಯಿಂದ ನರಳುತ್ತಿದ್ದ ರೋಗಿಗಳ ಸಹಾಯಕ್ಕೆ ಪೊಲೀಸ್​ವೋರ್ವರು ದೌಡಾಯಿಸಿ ಪ್ರಾಣ ಉಳಿಸಿದ ಘಟನೆ ನಗರದಲ್ಲಿ ಕಂಡು ಬಂದಿದೆ.

ಅರ್ಧ ಗಂಟೆ ಮಾತ್ರ ಆಕ್ಸಿಜನ್...

ಗೋಹಲ್​ಪುರ ನಗರದ ನ್ಯೂಟೋಮ್​ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಆಕ್ಸಿಜನ್​ ಕೊರತೆ ಉಂಟಾಗಿತ್ತು. ಕೇವಲ ಅರ್ಧ ಗಂಟೆ ಮಾತ್ರ ರೋಗಿಗಳಿಗೆ ಆಕ್ಸಿಜನ್​ ಒದಗಿಸಬಹುದಾಗಿತ್ತು.

ಸರಿಯಾದ ಸಮಯಕ್ಕೆ ಆಮ್ಲಜನಕ ತಂದು 22 ಜನರ ಪ್ರಾಣ ಉಳಿಸಿದ ಪೊಲೀಸಪ್ಪ

ಸಂಬಂಧಿಕರ ಆಕ್ರೋಶ..

ಆಕ್ಸಿಜನ್​ ಸಮಸ್ಯೆಯಿಂದಾಗಿ ರೋಗಿಗಳ ಸಂಬಂಧಿಕರು ಆಸ್ಪತ್ರೆಯ ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರು.

ಅಸಹಾಯಕರಾದ ಸಿಬ್ಬಂದಿ..

ಕೇವಲ ಅರ್ಧ ಗಂಟೆಯಲ್ಲಿ ಆಕ್ಸಿಜನ್​ ಪೂರೈಸಲು ಆಸ್ಪತ್ರೆಯ ಸಿಬ್ಬಂದಿ ಅಸಹಾಯಕರಾಗಿದ್ದರು. ಮುಂದೆ ಏನು ಮಾಡ್ಬೇಕೆಂಬ ಚಿಂತೆಯಲ್ಲಿದ್ದಾಗ ಪೊಲೀಸ್​ ಅಧಿಕಾರಿಯೊಬ್ಬರು ಸಹಾಯಕ್ಕೆ ದೌಡಾಯಿಸಿದರು. ಅವರೇ ರವೀಂದ್ರ ಗೌತಮ್​.

ಆಕ್ಸಿಜನ್​ ಸಿಲಿಂಡರ್​ ಹೊತ್ತು ವಾಹನಕ್ಕೆ ಹಾಕಿದ ಪೊಲೀಸ್​...!

ಸಹಾಯಕ್ಕೆ ದೌಡಾಯಿಸಿದ ಪೊಲೀಸ್​ ರವೀಂದ್ರ ಗೌತಮ್​ ತಂಡ, ಆಕ್ಸಿಜನ್​ ಘಟಕಕ್ಕೆ ತೆರಳಿ ವಾಹನದಲ್ಲಿ ಅವರೇ ಆಕ್ಸಿಜನ್​ ಸಿಲಿಂಡರ್​ಗಳನ್ನು ತುಂಬಿ ಆಸ್ಪತ್ರೆಗೆ ಪೂರೈಸಿದ್ದಾರೆ. ತಂದ ಆಕ್ಸಿಜನ್​ನನ್ನು ಸರಿಯಾದ ಸಮಯಕ್ಕೆ ರೋಗಿಗಳಿಗೆ ನೀಡುವುದರ ಮೂಲಕ 22 ಜೀವಗಳನ್ನು ಉಳಿಸಿದ್ದಾರೆ.

ಸರಿಯಾದ ಸಮಯಕ್ಕೆ ಪೊಲೀಸ್​ ಅಧಿಕಾರಿ ಬರದೇ ಇದ್ದಿದ್ದರೆ ದೊಡ್ಡ ಅನಾಹುತವೇ ನಡೆಯುತ್ತಿತ್ತು ಎಂಬುದು ಸ್ಥಳೀಯರ ಮಾತಾಗಿದೆ. ಗೌತಮ್​ ಅವರ ಈ ಕಾರ್ಯಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.

ABOUT THE AUTHOR

...view details