ಕರ್ನಾಟಕ

karnataka

ETV Bharat / bharat

ಕೊರೊನಾ : ವೈದ್ಯಕೀಯ ಸಿಬ್ಬಂದಿಗೆ ಒತ್ತಡ ತಗ್ಗಿಸಲು ನರ್ಸಿಂಗ್​ ವಿದ್ಯಾರ್ಥಿಗಳ ಸಹಾಯ - Helping Nursing Students

ಎಂಎಸ್​ಸಿ ನರ್ಸಿಂಗ್ ವಿದ್ಯಾರ್ಥಿನಿ ಜೆಮಿಮಾ, ತನ್ನ ರಜಾ ದಿನಗಳನ್ನು ಬಿಟ್ಟು ಮಿಜೋರಾಂನ ಫಾಲ್ಕಾನ್​ ಮೆಡಿಕಲ್ ಕಾಲೇಜಿನ ಕೋವಿಡ್ ಕೇರ್​ ಸೆಂಟರ್​​ನಲ್ಲಿ ಸೇವೆ ಮಾಡಲು ಮುಂದಾಗಿದ್ದಾಳೆ..

ನರ್ಸಿಂಗ್​ ವಿದ್ಯಾರ್ಥಿ
ನರ್ಸಿಂಗ್​ ವಿದ್ಯಾರ್ಥಿ

By

Published : May 18, 2021, 5:26 PM IST

ಮಿಜೋರಾಂ : ಮಿಜೋರಾಂನಲ್ಲಿ ಕೋವಿಡ್ ಎರಡನೇ ಅಲೆಯಿಂದಾಗಿ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಇಲ್ಲಿನ ಆಸ್ಪತ್ರೆಗಳ ಸಿಬ್ಬಂದಿ-ವೈದ್ಯರ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ನರ್ಸಿಂಗ್​​ ವಿದ್ಯಾರ್ಥಿಗಳು ವೈದ್ಯಕೀಯ ಸಿಬ್ಬಂದಿಗೆ ಸಹಾಯ ಮಾಡಲು ಸ್ವಯಂಪ್ರೇರಿತರಾಗಿ ಮುಂದೆ ಬರುತ್ತಿದ್ದಾರೆ.

ದೇಶದ ಹಲವು ರಾಜ್ಯಗಳು ಕೋವಿಡ್​ ಪಿಡುಗನ್ನು ಎದುರಿಸುತ್ತಿವೆ. ಈ ನಡುವೆ ಆಸ್ಪತ್ರೆ ಸಿಬ್ಬಂದಿ-ವೈದ್ಯರು, ದಾದಿಯರು ಮತ್ತು ಆರೋಗ್ಯ ಕಾರ್ಯಕರ್ತರ ಮೇಲೆ ಒತ್ತಡ ಹೆಚ್ಚಾಗುತ್ತಿದೆ.

ಇದನ್ನು ಅರಿತ ಮಿಜೋರಾಂನ ನರ್ಸಿಂಗ್​​ ವಿದ್ಯಾರ್ಥಿಗಳು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವೈದ್ಯಕೀಯ ಸಿಬ್ಬಂದಿಗೆ ಸಹಾಯ ಮಾಡಲು ಸ್ವಯಂಪ್ರೇರಿತರಾಗಿದ್ದಾರೆ.

ಎಂಎಸ್​ಸಿ ನರ್ಸಿಂಗ್ ವಿದ್ಯಾರ್ಥಿನಿ ಜೆಮಿಮಾ, ತನ್ನ ರಜಾ ದಿನಗಳನ್ನು ಬಿಟ್ಟು ಮಿಜೋರಾಂನ ಫಾಲ್ಕಾನ್​ ಮೆಡಿಕಲ್ ಕಾಲೇಜಿನ ಕೋವಿಡ್ ಕೇರ್​ ಸೆಂಟರ್​​ನಲ್ಲಿ ಸೇವೆ ಮಾಡಲು ಮುಂದಾಗಿದ್ದಾಳೆ.

ಹಾಗೆಯೇ ಎಸ್ತರ್ ಲಾಲ್‌ರಾಂಗ್‌ಬಾವ್ಲಿ ಎಂಬಾಕೆ ಕೂಡ ಮಾಮಿತ್ ಜಿಲ್ಲೆಯ ಕೋವಿಡ್ ಕೇರ್ ಸೆಂಟರ್‌ನಲ್ಲಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾಳೆ. ಇವರು ಕೋವಿಡ್ ಮಾದರಿಗಳನ್ನು ಸಂಗ್ರಹಿಸುವುದು ಹಾಗೂ ದಾದಿಯರಿಗೆ ಸಹಾಯ ಮಾಡುತ್ತಿದ್ದಾರೆ.

ABOUT THE AUTHOR

...view details