ಹೈದರಾಬಾದ್:ಕೊರೊನಾ ಒಮಿಕ್ರಾನ್ ರೂಪಾಂತರವಾದ BF.7 ವೈರಸ್ ಅನ್ನು ಎದುರಿಸಲು ಎಐಜಿ ಆಸ್ಪತ್ರೆಗಳ ಸಂಶೋಧಕರು ಹೊಸದೊಂದು ವಿಧಾನ ಕಂಡುಕೊಂಡಿದ್ದಾರೆ. ಕೋವಿಶೀಲ್ಡ್ ಲಸಿಕೆ ಪಡೆದವರು ಬೂಸ್ಟರ್ ಡೋಸ್ ಆಗಿ ಕಾರ್ಬೆವಾಕ್ಸ್ ಪಡೆದುಕೊಂಡರೆ ವೈರಸ್ ಅನ್ನು ಪರಿಣಾಮಕಾರಿ ಎದುರಿಸಬಹುದು. ಲಸಿಕೆ ಬದಲಿಯಿಂದ ಮನುಷ್ಯನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಅಧ್ಯಯನ ಹೇಳಿದೆ.
2 ಡೋಸ್ ಕೋವಿಶೀಲ್ಡ್ ಪಡೆದ 250 ಆರೋಗ್ಯ ಕಾರ್ಯಕರ್ತರ ಮೇಲೆ ನಡೆಸಿ ಈ ಪ್ರಯೋಗ ಫಲ ನೀಡಿದ್ದು, 6 ತಿಂಗಳಲ್ಲಿ ಅವರು ಹೆಚ್ಚಿನ ರೋಗನಿರ್ಣಯ ಶಕ್ತಿಯನ್ನು ಹೊಂದಿದ್ದಾರೆ. ಲಸಿಕೆ ವೈವಿಧ್ಯತೆಯು ಪರಿಣಾಮಕಾರಿಯಾಗಿದೆ. ಅಧ್ಯಯನದಲ್ಲಿ ಒಳಗಾದವರು ಉತ್ತಮ ಆರೋಗ್ಯ ವೃದ್ಧಿ ತೋರಿಸಿದ್ದಾರೆ. ಮಿಶ್ರಿತ ಲಸಿಕೆಗಳು ಯಾವುದೇ ವ್ಯತಿರಿಕ್ತ ಪರಿಣಾಮ ಬೀರಿಲ್ಲ ಎಂದು ಅಧ್ಯಯನದ ಮುಂದಾಳು, ಎಐಜಿ ಆಸ್ಪತ್ರೆಗಳ ಅಧ್ಯಕ್ಷ ಡಾ.ಡಿ ನಾಗೇಶ್ವರ್ ರೆಡ್ಡಿ ಮತ್ತು ತಂಡ ಹೇಳಿದೆ.