ಕರ್ನಾಟಕ

karnataka

ETV Bharat / bharat

ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಕೂದಲೆಳೆ ಅಂತರದಲ್ಲಿ ರಕ್ಷಿಸಿದ ಕಾನ್ಸ್​ಟೇಬಲ್​: ವಿಡಿಯೋ - ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ವಿಠ್ಠಲವಾಡಿ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಪೊಲೀಸರು​ ರಕ್ಷಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿದೆ.

Cop saves teen who jumped in front of express train in Thane-video
ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ರಕ್ಷಿಸಿದ ಕಾನ್​ಸ್ಟೇಬಲ್​

By

Published : Mar 24, 2022, 9:24 AM IST

ಮಹಾರಾಷ್ಟ್ರ : ರೈಲ್ವೆ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಜಿಆರ್‌ಪಿ ಕಾನ್​ಸ್ಟೇಬಲ್ ರಕ್ಷಿಸಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ವಿಠ್ಠಲವಾಡಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ರಕ್ಷಿಸಿದ ಕಾನ್​ಸ್ಟೇಬಲ್​

ಕಾನ್​​ಸ್ಟೇಬಲ್​​ ಹೃಷಿಕ್ಷ ಮಾನೆ ಎಂಬುವವರು ವಿಠ್ಠಲವಾಡಿ ರೈಲು ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅದೇ ವೇಳೆ, ಯುವಕ ಅನೇಕ ಗಂಟೆಗಳಿಂದ ನಿಲ್ದಾಣದಲ್ಲಿ ಓಡಾಡುತ್ತಿದ್ದು ದ್ದನ್ನು ಗಮನಿಸಿದ್ದರು. ಯುವಕನ ನಡವಳಿಕೆ ಮೇಲೆ ಅನುಮಾನಗೊಂಡು ಆತನ ಮೇಲೆ ನಿಗಾ ಇಟ್ಟಿದ್ದರು. ಹೀಗಿರುವಾಗ ಮಧ್ಯಾಹ್ನ 2:30ರ ಗಂಟೆ ಸುಮಾರಿಗೆ ಯುವಕ ಪ್ಲಾಟ್‌ಫಾರ್ಮ್​ನಿಂದ ರೈಲ್ವೆ ಹಳಿ ಮೇಲೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದನು.

ಇದನ್ನು ಗಮನಿಸುತ್ತಲೇ ಇದ್ದ ಕಾನ್ಸ್​ಟೇಬಲ್​, ತಕ್ಷಣ ರೈಲ್ವೆ ಹಳಿಗೆ ಹಾರಿ ಯುವಕನನ್ನು ಪಕ್ಕದ ಹಳಿಗೆ ತಳ್ಳಿ ಯುವಕನನ್ನು ರಕ್ಷಿಸಿದ್ದಾರೆ. ಘಟನೆ ಕುರಿತಾದ ವಿಡಿಯೋ ರೈಲ್ವೆ ನಿಲ್ದಾಣದಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋವನ್ನು ಪಶ್ಚಿಮ ರೈಲ್ವೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಕಾನ್​ಸ್ಟೇಬಲ್​​ ಕೆಲಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಜಮ್ಮು ಕಾಶ್ಮೀರ ಕುರಿತು ಪ್ರತಿಕ್ರಿಯಿಸಲು ಚೀನಾಕ್ಕೆ ಯಾವುದೇ ಹಕ್ಕಿಲ್ಲ: ಭಾರತ


ABOUT THE AUTHOR

...view details