ಕರ್ನಾಟಕ

karnataka

ETV Bharat / bharat

Manipur ambush: ಅಸ್ಸೋಂ ರೈಫಲ್​ನ​ CO ಪತ್ನಿ, ಮಗ ಹಾಗೂ ಐವರು ಸಿಬ್ಬಂದಿ ಹುತಾತ್ಮ - ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್

ಮಣಿಪುರದಲ್ಲಿ ಅಸ್ಸೋಂ ರೈಫಲ್ಸ್​ನ ಕಮಾಂಡಿಂಗ್​ ಆಫೀಸರ್​(assam-rifles) ಅವರ ಬೆಂಗಾವಲು ಪಡೆ(Convoy)ಮೇಲೆ ಉಗ್ರರು ದಾಳಿ ನಡೆಸಿ ಅಸ್ಸೋಂ ರೈಫಲ್ಸ್​ನ ಕಮಾಂಡಿಂಗ್​ ಆಫೀಸರ್ ಅವರ ಇಬ್ಬರು ಕುಟುಂಬಸ್ಥರು ಹಾಗೂ​ 4 ಮಂದಿ ಪ್ಯಾರಾ ಮಿಲಿಟರಿ ಪಡೆಯ ಯೋಧರು ಸೇರಿ ಒಟ್ಟು 7 ಮಂದಿಯನ್ನು ಹತ್ಯೆ ಮಾಡಿದ್ದಾರೆ.

terrorists
ಕಮಾಂಡಿಂಗ್​ ಆಫೀಸರ್ ಹಾಗೂ ಕುಟುಂಬಸ್ಥರು ಸಾವು

By

Published : Nov 13, 2021, 3:30 PM IST

Updated : Nov 13, 2021, 6:22 PM IST

ಇಂಪಾಲ್​/ಮಣಿಪುರ:ಗಡಿ ರಾಜ್ಯದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಅಸ್ಸಾಂ ರೈಫಲ್ಸ್‌ನ​(assam-rifles)) ಖುಗಾ ಬೆಟಾಲಿಯನ್‌ನ ಕಮಾಂಡಿಂಗ್ ಆಫೀಸರ್ ಕರ್ನಲ್ ವಿಪ್ಲವ್ ತ್ರಿಪಾಟಿ(Viplav Tripati), ಅವರ ಪತ್ನಿ ಮತ್ತು ಮಗ, ಅರೆಸೇನಾ ಪಡೆಯ ನಾಲ್ವರು ಸಿಬ್ಬಂದಿಯನ್ನು ಹತ್ಯೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಣಿಪುರದಲ್ಲಿ(Manipur) ಪ್ರತ್ಯೇಕ ತಾಯ್ನಾಡಿನ ಬೇಡಿಕೆಯ ಉಗ್ರಗಾಮಿ ಸಂಘಟನೆಯಾದ ಪೀಪಲ್ಸ್ ರೆವಲ್ಯೂಷನರಿ ಪಾರ್ಟಿ ಆಫ್ ಕಾಂಗ್ಲೀಪಾಕ್ ನ ಶಂಕಿತ ಉಗ್ರಗಾಮಿಗಳು ಚುರಾಚಂದ್‌ಪುರ ಜಿಲ್ಲೆಯ ಸೆಹ್ಕಾನ್ ಗ್ರಾಮದಲ್ಲಿ ತ್ರಿಪಾಠಿ ಅವರ ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ.

ಅಸ್ಸೋಂ ರೈಫಲ್ಸ್ ಸಿಬ್ಬಂದಿ ಉಗ್ರರ ವಿರುದ್ಧ ಗುಂಡಿನ ಚಕಮಕಿ ನಡೆಸುವ ಮುನ್ನವೇ ಸುಧಾರಿತ ಸ್ಫೋಟಕ ಸಾಧನಗಳು (IED) ಸಿಡಿದು, ಮಣಿಪುರದ ಬೆಟ್ಟಗಳಲ್ಲಿ ಶಾಂತಿ ಕದಡಿದಿವೆ. ನಂತರ ಶಂಕಿತ PREPAK ಸದಸ್ಯರು ನಡೆಸಿದ ಗುಂಡಿನ ದಾಳಿಯಲ್ಲಿ ಕಮಾಂಡಿಂಗ್ ಅಧಿಕಾರಿ ಮತ್ತು ಮೂವರು QRT ಸಿಬ್ಬಂದಿ ಹುತಾತ್ಮರಾದರು. ಘಟನೆಯಲ್ಲಿ ಕಮಾಂಡಿಂಗ್ ಆಫೀಸರ್​ ಹೆಂಡತಿ ಹಾಗೂ ಅವರ 6 ವರ್ಷದ ಮಗನನ್ನ ಸಹ ಹತ್ಯೆ ಮಾಡಲಾಗಿದೆ. ಗಾಯಗೊಂಡ ಇತರ ಸಿಬ್ಬಂದಿಯನ್ನು ಬೆಹಿಯಾಂಗಾ ಆರೋಗ್ಯ ಕೇಂದ್ರದಲ್ಲಿ ದಾಖಲಿಸಲಾಗಿದೆ ಎಂದು ಅಸ್ಸೋಂ ರೈಫಲ್ಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ (CM Biren singh) ಘಟನೆಯನ್ನು ಖಂದಿಡಿ ಟ್ವೀಟ್​ ಮಾಡಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವ ರಾಜನಾಥ್​ ಸಿಂಗ್​, "ಮಣಿಪುರದ ಚುರಾಚಂದ್‌ಪುರದಲ್ಲಿ ಅಸ್ಸೋಂ ರೈಫಲ್ಸ್ ಬೆಂಗಾವಲು ಪಡೆಯ ಮೇಲೆ ನಡೆದ ಹೇಡಿತನದ ದಾಳಿಯು ಅತ್ಯಂತ ನೋವಿನಿಂದ ಕೂಡಿದೆ ಮತ್ತು ಖಂಡನೀಯವಾಗಿದೆ. ದೇಶವು CO 46 AR ಮತ್ತು ಅವರ ಇಬ್ಬರು ಕುಟುಂಬ ಸದಸ್ಯರು ಸೇರಿದಂತೆ 5 ವೀರ ಸೈನಿಕರನ್ನು ಕಳೆದುಕೊಂಡಿದೆ. ದುಃಖತಪ್ತ ಕುಟುಂಬಗಳಿಗೆ ನನ್ನ ಸಂತಾಪ. ದುಷ್ಕರ್ಮಿಗಳನ್ನು ಶೀಘ್ರದಲ್ಲೇ ನ್ಯಾಯಾಂಗಕ್ಕೆ ಎಳೆದು ತರಲಾಗುವುದು. " ಎಂದು ಅವರು ಟ್ವೀಟ್ ಮಾಡಿದ್ದಾರೆ. ರಕ್ಷಣಾ ಸಚಿವರು ಟ್ವೀಟ್‌ನಲ್ಲಿ ಇನ್ನೂ ಒಬ್ಬ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಎಂದು ಸೂಚಿಸಿದರೂ, ಅಸ್ಸೋಂ ರೈಫಲ್ಸ್‌ನಿಂದ ಈ ಬಗ್ಗೆ ಯಾವುದೇ ಮಾಹಿತಿ ದೃಢವಾಗಿಲ್ಲ.

ಜುಲೈ 2021 ರಲ್ಲಿ ಮಣಿಪುರಕ್ಕೆ ವರ್ಗಾವಣೆಯಾಗುವವರೆಗೂ ಮಿಜೋರಾಂನಲ್ಲಿ ಈ ಹಿಂದೆ ಸೇವೆ ಸಲ್ಲಿಸಿದ್ದ ಇಂದು ಹುತಾತ್ಮರಾಗಿರುವ ಕಮಾಂಡಿಂಗ್ ಅಧಿಕಾರಿಯ ಸೇವೆಯನ್ನು ಅಸ್ಸೋಂ ರೈಫಲ್ಸ್ ಶ್ಲಾಘಿಸಿದೆ. "ಮಿಜೋರಾಂನಲ್ಲಿ ವಿಪ್ಲವ್ ತ್ರಿಪಾಟಿ ತಮ್ಮ ಅಧಿಕಾರಾವಧಿಯಲ್ಲಿ, ಸಮರ್ಥ ಮತ್ತು ಶಕ್ತಿಯುತ ನಾಯಕತ್ವದಲ್ಲಿ, IMB ಮತ್ತು ಒಳನಾಡಿನಲ್ಲಿ ಅಕ್ರಮ ಕಳ್ಳಸಾಗಣೆ ತಡೆಯುವಲ್ಲಿ ಗಡಿ ನಿರ್ವಹಣೆಯಲ್ಲಿ ಬೆಟಾಲಿಯನ್ ಮುಂಚೂಣಿಯಲ್ಲಿದೆ. "ಕರ್ನಲ್ ವಿಪ್ಲವ್ ಅವರು ಜನವರಿ 2021 ರಲ್ಲಿ ಅವರ ಬೆಟಾಲಿಯನ್ ನಡೆಸಿದ ಮಾದಕ ದ್ರವ್ಯ ವಿರೋಧಿ ಅಭಿಯಾನವು ಹಲವಾರು ಪ್ರಶಸ್ತಿಗಳನ್ನು ಮತ್ತು ಪ್ರಶಂಸೆಯನ್ನು ಪಡೆಯಿತು ಮತ್ತು ದೂರದ ಹಳ್ಳಿಗಳು ಸೇರಿದಂತೆ ಇಡೀ ರಾಜ್ಯದಲ್ಲಿ ಜಾಗೃತಿಯನ್ನು ಮೂಡಿಸಿದರು. ಅವರ ಈ ಕಾರ್ಯ ಶಾಶ್ವತವಾಗಿ ಉಳಿಯುತ್ತದೆ" ಎಂದು ಅಸ್ಸೋಂ ರೈಫಲ್ಸ್​​ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

"PREPAK ಸ್ಮರಣಾರ್ಥ ದಿನವನ್ನು 12/13 ನವೆಂಬರ್ ಆಚರಿಸಲಾಗಿರುವ ಹಿನ್ನೆಲೆ ಈ ದಾಳಿಯನ್ನು ನಡೆಸಿರುವ ಬಂಡುಕೋರರು PREPAK ಕಾರ್ಯಕರ್ತರಾಗಿರಬೇಕು" ಎಂದು ಶಂಕಿಸಲಾಗಿದೆ ಎಂದು ಅಸ್ಸೋಂ ರೈಫಲ್ಸ್ ಹೇಳಿಕೆ ನೀಡಿದೆ.

ಇದನ್ನೂ ಓದಿ:ಕೋಟಿ..ಕೋಟಿ ಮೌಲ್ಯದ ಚಿನ್ನ ತೆಗೆದುಕೊಂಡು ನಾಪತ್ತೆ: ಮಗಳ ವಿರುದ್ಧವೇ ದೂರು ಕೊಟ್ಟ ತಾಯಿ

Last Updated : Nov 13, 2021, 6:22 PM IST

ABOUT THE AUTHOR

...view details