ಕರ್ನಾಟಕ

karnataka

ETV Bharat / bharat

ಸಾಮೂಹಿಕ ವಿವಾಹ: ನವವಿವಾಹಿತರಿಂದ ಧರ್ಮ ಪರಿವರ್ತನೆ - ದೇಶದ ಸಮಗ್ರತೆಗೆ ಧಕ್ಕೆ

ರಾಜಸ್ಥಾನದ ಭರತ್‌ಪುರದಲ್ಲಿ ಸೋಮವಾರ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನಡೆದ ಧರ್ಮ ಪರಿವರ್ತನೆ ಪ್ರಕರಣ ಮುನ್ನೆಲೆಗೆ ಬಂದಿದೆ. ವಿವಾಹ ಸಮಾವೇಶದಲ್ಲಿ 11 ಜೋಡಿಗಳಿಗೆ ಹಿಂದೂ ದೇವರು ಮತ್ತು ದೇವತೆಗಳನ್ನು ನಂಬುವುದಿಲ್ಲ ಎಂದು ಪ್ರಮಾಣ ವಚನ ಬೋಧಿಸಲಾಯಿತು.

conversion of religion in samuhik vivah sammelan in bharatpur
ಸಾಮೂಹಿಕ ವಿವಾಹ: ನವವಿವಾಹಿತರಿಂದ ಧರ್ಮ ಪರವರ್ತನೆ

By

Published : Nov 22, 2022, 6:58 PM IST

Updated : Nov 22, 2022, 7:13 PM IST

ಭರತಪುರ(ರಾಜಸ್ಥಾನ): ಜಿಲ್ಲೆಯ ಕುಮ್ಹೇರ್ ಪಟ್ಟಣದಲ್ಲಿ ಸೋಮವಾರ ಸಂತ ರವಿದಾಸ್ ಸೇವಾ ಸಮಿತಿ ಆಯೋಜಿಸಿದ್ದ ಭರತ್‌ಪುರದ ಸಾಮೂಹಿಕ ವಿವಾಹ ಸಮ್ಮೇಳನದಲ್ಲಿ ಧರ್ಮ ಪರಿವರ್ತನೆ ಪ್ರಕರಣ ಬೆಳಕಿಗೆ ಬಂದಿದೆ. ಸಾಮೂಹಿಕ ವಿವಾಹ ಸಮಾವೇಶದಲ್ಲಿ 11 ಜೋಡಿಗಳ ವಿವಾಹ ನೆರವೇರಿತು.

ಈ ಸಂದರ್ಭದಲ್ಲಿ, ಸಮಿತಿಯು ಎಲ್ಲ ನವವಿವಾಹಿತರಿಗೆ ಹಿಂದೂ ದೇವರು ಮತ್ತು ದೇವತೆಗಳನ್ನು ನಂಬುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ಎಲ್ಲಾ ಹಿಂದೂ ದಂಪತಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡು. ಮತಾಂತರದ ಪ್ರಮಾಣ ವಚನ ಸ್ವೀಕಾರದ ವಿಡಿಯೋ ಕೂಡ ಹೊರಬಿದ್ದಿದೆ.

ಅಧಿಕಾರಿಗಳು, ಮುಖಂಡರೂ ಭಾಗಿ: ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು ಎಂದು ಹೇಳಲಾಗುತ್ತಿದೆ. ಅಧಿಕಾರಿಗಳು ಮತ್ತು ಸಾರ್ವಜನಿಕ ಪ್ರತಿನಿಧಿಗಳು ತೆರಳಿದ ನಂತರ, ಸಂಘಟಕರು ಮದುವೆ ಸಮಾವೇಶದಲ್ಲಿನ 11 ಜೋಡಿಗಳಿಗೆ 22 ಪ್ರತಿಜ್ಞೆ ಮಾಡಿಸಿದ್ದಾರೆ.

ಪ್ರಮಾಣ ವಚನ ಹೀಗಿದ್ದವು: ಮದುವೆ ಸಮಾವೇಶದಲ್ಲಿ ನವದಂಪತಿಗಳಿಗೆ ‘ಬ್ರಹ್ಮ, ವಿಷ್ಣು, ಮಹೇಶ್ವರನನ್ನು ಎಂದಿಗೂ ದೇವರೆಂದು ಪರಿಗಣಿಸುವುದಿಲ್ಲ, ಪೂಜಿಸುವುದಿಲ್ಲ’ ಎಂದು ನವ ದಂಪತಿಗಳು ಪ್ರಮಾಣ ವಚನ ಸ್ವೀಕರಿಸಿದರು. ನಾನು ರಾಮನನ್ನು ದೇವರೆಂದು ಪರಿಗಣಿಸುವುದಿಲ್ಲ ಮತ್ತು ಅವನನ್ನು ಪೂಜಿಸುವುದಿಲ್ಲ.

ನಾನು ಗೌರಿ-ಗಣೇಶ ಇತ್ಯಾದಿ ಹಿಂದೂ ಧರ್ಮದ ದೇವತೆಗಳನ್ನು ದೇವರೆಂದು ಪರಿಗಣಿಸುವುದಿಲ್ಲ ಮತ್ತು ನಾನು ಬುದ್ಧನನ್ನು ಆರಾಧಿಸುತ್ತೇನೆ. ಭಗವಾನ್ ಬುದ್ಧ ವಿಷ್ಣುವಿನ ಅವತಾರ ಎಂದು ನಾನು ಎಂದಿಗೂ ಹೇಳುವುದಿಲ್ಲ. ನಾನು ಅಂತಹ ಹೇಳಿಕೆಯನ್ನು ಹುಚ್ಚು ಮತ್ತು ಸುಳ್ಳು ಎಂದು ಪರಿಗಣಿಸುತ್ತೇನೆ. ನಾನು ಎಂದಿಗೂ ದೇಹದಾನ ಮಾಡುವುದಿಲ್ಲ. ಬೌದ್ಧ ಧರ್ಮದ ವಿರುದ್ಧ ಏನನ್ನೂ ಹೇಳುವುದಿಲ್ಲ.

ಸಾಮೂಹಿಕ ವಿವಾಹ

ನವವಿವಾಹಿತರಿಗೆ ಮೂಲಸೌಕರ್ಯಗಳ ಕೊಡುಗೆ: ಸಂಘಟಕ ಲಾಲಚಂದ್ ತೈಂಗುರಿಯಾ ಮಾತನಾಡಿ, ಸಾಮೂಹಿಕ ವಿವಾಹ ಸಮಾವೇಶದಲ್ಲಿ ವಧು-ವರರಿ 11 ಸಾವಿರ ಕಟ್ಟಿಸಿಕೊಂಡು. ಉಳಿದ ಖರ್ಚುಗಳನ್ನು ಸಂತ ರವಿದಾಸ್ ಸೇವಾ ಸಮಿತಿ ಮಾಡುತ್ತದೆ. ಇದರಲ್ಲಿ ಫ್ರಿಡ್ಜ್, ಪಾತ್ರೆಗಳು, ಬಟ್ಟೆ, ಕುರ್ಚಿ, ಡಬಲ್ ಬೆಡ್ ಇತ್ಯಾದಿಗಳನ್ನು ಹೆಣ್ಣು ಮಗುವಿಗೆ ದಾನವಾಗಿ ನೀಡಲಾಗುತ್ತದೆ.

ವೈಯಕ್ತಿಕ ಹಿತಾಸಕ್ತಿಗಳಿಗಾಗಿ ಬೌದ್ಧ ಧರ್ಮವನ್ನು ಬೆರೆಸಬಾರದು: ಬಾಬಾ ಭೀಮರಾವ್ ಅಂಬೇಡ್ಕರ್ ಪುನರುಚ್ಚರಿಸಿದ 22 ಪ್ರತಿಜ್ಞೆಗಳನ್ನು ವಧು-ವರರು ಮಾಡುವ ಮೂಲಕ ವಿವಾಹವನ್ನು ನೆರವೇರಿಸಲಾಯಿತು ಎಂದು ಸಮಾಜದ ಪ್ರತಿನಿಧಿ ಶಂಕರ್ ಲಾಲ್ ಬೌದ್ದ ತಿಳಿಸಿದರು. ಈ ವಚನಗಳು ಬೌದ್ಧ ಧರ್ಮದ ರಕ್ಷಾಕವಚ. ಜನರು ತಮ್ಮ ವೈಯಕ್ತಿಕ ಹಿತಾಸಕ್ತಿಗಳಿಗಾಗಿ ಬೌದ್ಧ ಧರ್ಮವನ್ನು ಬೆರೆಸಬಾರದು ಎಂದು ಈ ಪ್ರತಿಜ್ಞೆಗಳನ್ನು ನೀಡಲಾಗುತ್ತದೆ.

ದೇಶದ ಸಮಗ್ರತೆಗೆ ಧಕ್ಕೆ ತಂದಿದೆ: ಈ ಸಂಪೂರ್ಣ ವಿಷಯಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಲಖನ್ ಸಿಂಗ್, ಇದು ಅತ್ಯಂತ ಗಂಭೀರವಾದ ವಿಷಯ, ವಿವಾದಿತ ಪ್ರಮಾಣ ವಚನವನ್ನು ಸಾರ್ವಜನಿಕ ವೇದಿಕೆಯಲ್ಲಿ ಬೋಧಿಸಲಾಗಿದೆ. ಇದು ದೇಶದ ಸಮಗ್ರತೆಗೆ ಧಕ್ಕೆ ತಂದಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:500 ಮದರಸಾಗಳಲ್ಲಿ ಸ್ಮಾರ್ಟ್ ಕ್ಲಾಸ್ ರೂಂ: ₹13 ಕೋಟಿ ಪ್ಯಾಕೆಜ್‌ಗೆ ರಾಜಸ್ತಾನ ಸರ್ಕಾರ ಒಪ್ಪಿಗೆ

Last Updated : Nov 22, 2022, 7:13 PM IST

ABOUT THE AUTHOR

...view details