ಆಂಧ್ರ ಪ್ರದೇಶ:ವಾಷಿಂಗ್ ಮೆಷಿನ್‌ನಿಂದ ಬರುವ ತ್ಯಾಜ್ಯ ನೀರಿನ ವಿಚಾರವಾಗಿ ಎರಡು ಕುಟುಂಬಗಳ ನಡುವೆ ನಡೆದ ಘರ್ಷಣೆಯಲ್ಲಿ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿರುವ ಘಟನೆ ಶ್ರೀ ಸತ್ಯಸಾಯಿ ಜಿಲ್ಲೆಯ ಕದಿರಿ ಎಂಬಲ್ಲಿ ನಡೆದಿದೆ.
ಘಟನೆಯ ಹಿನ್ನೆಲೆ:ಕದಿರಿ ಪಟ್ಟಣದ ಮಶಾನಪೇಟೆಯಲ್ಲಿ ಪದ್ಮಾವತಿ ಎಂಬ ಮಹಿಳೆ ವಾಸವಾಗಿದ್ದಳು. ಆಕೆಯ ಮನೆಯಲ್ಲಿದ್ದ ವಾಷಿಂಗ್ ಮೆಷಿನ್‌ನ ತ್ಯಾಜ್ಯ ನೀರು ಪಕ್ಕದ ವೇಮಣ್ಣ ನಾಯ್ಕರ ಮನೆಗೆ ಹೋಗಿದೆ. ಈ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ತೀವ್ರ ವಾಗ್ವಾದ ನಡೆದು ಘರ್ಷಣೆಯಾಗಿದೆ. ಈ ವೇಳೆ ವೇಮಣ್ಣ ನಾಯ್ಕ್ ಕುಟುಂಬಸ್ಥರು ಪದ್ಮಾವತಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಆಕೆಯ ಮುಖ ಹಾಗೂ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿತ್ತು.