ಡೆಹ್ರಾಡೂನ್: ಉತ್ತರಾಖಂಡದ ನೈನಿತಾಲ್ ಮೃಗಾಲಯದ ಎರಡು ಹುಲಿಗಳು ಈಗ ಪ್ರಧಾನಿ ನರೇಂದ್ರ ಮೋದಿ ಅವರ ತವರಿನಲ್ಲಿರುವ ಜಾಮ್‌ನಗರ (ಗುಜರಾತ್) ಮೃಗಾಲಯವನ್ನು ಸೇರಿವೆ. ಇಲ್ಲಿಯವರೆಗೆ ಈ ಹುಲಿಗಳು ನೈನಿತಾಲ್‌ನ ಗೋವಿಂದ್ ಬಲ್ಲಭ್ ಪಂತ್ ಮೃಗಾಲಯದಲ್ಲಿ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದ್ದವು.
ಈಗ ಅವುಗಳನ್ನು ಗುಜರಾತ್‌ಗೆ ವರ್ಗಾಯಿಸಲಾಗಿದೆ. ಇದರ ಬಗ್ಗೆ ಕಾಂಗ್ರೆಸ್ ತಗಾದೆ ತೆಗೆದಿದ್ದು, ತೆಗೆದುಕೊಳ್ಳುವುದು ಗೊತ್ತು. ಆದರೆ ಏನನ್ನೂ ಕೊಡುವುದಿಲ್ಲ ಎಂದು ವ್ಯಂಗ್ಯವಾಡಿದೆ. ಮಾಹಿತಿ ಪ್ರಕಾರ, ಹುಲಿಗಳ ವರ್ಗಾವಣೆ ಪ್ರಕ್ರಿಯೆಯು ಏಪ್ರಿಲ್ 2, 2022 ರಿಂದ ನಡೆಯುತ್ತಿದೆ. ಈ ಪ್ರಕ್ರಿಯೆಯು ಇತ್ತೀಚೆಗೆ ಪೂರ್ಣಗೊಂಡಿದೆ.
ಮುಖ್ಯ ವನ್ಯಜೀವಿ ವಾರ್ಡನ್ ಅವರಿಂದ ಅನುಮತಿ ಪಡೆದು ಎರಡೂ ಹುಲಿಗಳನ್ನು ಇಲ್ಲಿಂದ ಸ್ಥಳಾಂತರಿಸಲಾಗಿದೆ. ಈ ಎರಡು ಹುಲಿಗಳನ್ನು ಗುಜರಾತ್‌ನಿಂದ ಕರೆದೊಯ್ಯಲು ವಿಶೇಷ ತಂಡ ಮತ್ತು ವಾಹನ ನೈನಿತಾಲ್ ತಲುಪಿತ್ತು. ರಿಲಯನ್ಸ್ ಇಂಡಸ್ಟ್ರೀಸ್ ಗುಜರಾತ್‌ನ ಜಾಮ್‌ನಗರದಲ್ಲಿ ವಿಶ್ವದ ಅತಿದೊಡ್ಡ ಮೃಗಾಲಯವನ್ನು ಮಾಡಲು ಮುಂದಾಗಿದೆ.
ಗುಜರಾತ್‌ಗೆ ಶಿಖಾ ಮತ್ತು ಬೇತಾಲ್: ಈ ಹುಲಿಗಳು ನೈನಿತಾಲ್‌ನ ಮೃಗಾಲಯದಲ್ಲಿ ಬಹಳ ಕಾಲ ಇದ್ದವು. 3 ವರ್ಷದ ಹುಲಿ ಶಿಖಾ ಮತ್ತು 14 ವರ್ಷದ ಬೇತಾಲ್ನನ್ನು ಜಾಮ್‌ನಗರಕ್ಕೆ ಕಳುಹಿಸಲಾಗಿದೆ. ನೈನಿತಾಲ್‌ನ ಕಿಶನ್‌ಪುರದಿಂದ 3 ವರ್ಷಗಳ ಹಿಂದೆ ಶಿಖಾನನ್ನು ರಕ್ಷಿಸಲಾಗಿತ್ತು. 14 ವರ್ಷದ ಬೇತಾಲ್ನನ್ನೂ ಸಹ ಈ ಹಿಂದೆ ತಂತಿಗೆ ಸಿಲುಕಿ ಗಾಯಗೊಂಡಾಗ ರಕ್ಷಿಸಿ, ಮೃಗಾಲಯಕ್ಕೆ ಕರೆತರಲಾಗಿತ್ತು.