ಚಂಡೀಗಢ:ಅತ್ಯಾಚಾರ, ಕೊಲೆ ಆರೋಪ ಹೊತ್ತಿರುವ ಸ್ವಯಂಘೋಷಿತ ದೇವಮಾನವ, ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ಗೆ ಪೆರೋಲ್ ನೀಡಿದ್ದು, ವಿವಾದಕ್ಕೆ ಕಾರಣವಾಗಿದೆ. ಇದನ್ನು ಪ್ರಶ್ನಿಸಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ವಕೀಲ ಹರಿಯಾಣ ಸರ್ಕಾರಕ್ಕೆ ಲೀಗಲ್ ನೋಟಿಸ್ ನೀಡಿದ್ದಾರೆ. ಅಲ್ಲದೇ, ತಕ್ಷಣವೇ ರಾಮ್ ರಹೀಮ್ ಅವರ ಪೆರೋಲ್ ಅನ್ನು ತಿರಸ್ಕರಿಸಬೇಕು ಎಂದು ನೋಟಿಸ್ನಲ್ಲಿ ಒತ್ತಾಯಿಸಲಾಗಿದೆ.
ಹರಿಯಾಣ ಸರ್ಕಾರ ರಾಮ್ ರಹೀಮ್ ಅವರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ. ಹಲವು ಬಾರಿ ಪೆರೋಲ್ ನೀಡಲಾಗಿದೆ. ಈಗ ನೀಡಿರುವ ರಜೆಯನ್ನು ತಿರಸ್ಕರಿಸುವಂತೆ ಒತ್ತಾಯಿಸಿ ಹೈಕೋರ್ಟ್ ವಕೀಲರು ಕಳುಹಿಸಿರುವ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ.
ಅಲ್ಲದೇ, ರಾಮ್ ರಹೀಮ್ ಅವರ ಯೂಟ್ಯೂಬ್‌ನಲ್ಲಿ ವಿಡಿಯೋಗಳನ್ನು ಅಪ್‌ಲೋಡ್ ಮಾಡಲಾಗುತ್ತಿದೆ. ಇದರಿಂದಾಗಿ ಆತನ ಅನುಯಾಯಿಗಳು ಹೆಚ್ಚಾಗುತ್ತಿದ್ದಾರೆ. ಅತ್ಯಾಚಾರ ಮತ್ತು ಕೊಲೆ ಆರೋಪಿಗೆ ಕೊಡುವ ಗೌರವ ಇದಲ್ಲ. ಯೂಟ್ಯೂಬ್‌ನಲ್ಲಿ ಹಾಕಲಾದ ವಿಡಿಯೋವನ್ನು ಕೂಡಲೇ ಅಳಿಸುವಂತೆಯೂ ನೋಟಿಸ್ನಲ್ಲಿ ಒತ್ತಾಯಿಸಲಾಗಿದೆ.