ಕರ್ನಾಟಕ

karnataka

ETV Bharat / bharat

ರಿಪ್ಡ್​ ಜೀನ್ಸ್ ಧರಿಸಿ ಮಹಿಳೆ ಎನ್‌ಜಿಒ ನಡೆಸುತ್ತಿರುವುದನ್ನು ನೋಡಿ ಆಘಾತಕ್ಕೊಳಗಾದೆ : ಉತ್ತರಾಖಂಡ ಸಿಎಂ - ಜೀನ್ಸ್ ಧರಿಸಿದ ಮಹಿಳೆಯ ಬಗ್ಗೆ ಉತ್ತರಾಖಂಡ ನೂತನ ಸಿಎಂ ಹೇಳಿಕೆ

ಬರಿ ಮೊಣಕಾಲುಗಳನ್ನು ತೋರಿಸುವುದು, ಸೀಳಿರುವ ಡೆನಿಮ್ ಧರಿಸುವುದು ಮತ್ತು ಶ್ರೀಮಂತ ಮಕ್ಕಳಂತೆ ಕಾಣುವುದು ಇವುಗಳನ್ನು ಈಗ ಮಕ್ಕಳಿಗೆ ಮೌಲ್ಯಗಳಾಗಿ ನೀಡಲಾಗುತ್ತಿದೆ..

ಉತ್ತರಾಖಂಡ ಸಿಎಂ
ಉತ್ತರಾಖಂಡ ಸಿಎಂ

By

Published : Mar 17, 2021, 5:32 PM IST

Updated : Mar 17, 2021, 6:07 PM IST

ಡೆಹ್ರಾಡೂನ್​ :ಸೀಳಿರುವ ಜೀನ್ಸ್‌ನಲ್ಲಿ ಮಹಿಳೆಯೊಬ್ಬರು ಎನ್‌ಜಿಒ ನಡೆಸುತ್ತಿರುವುದನ್ನು ನೋಡಿ ಆಘಾತಕ್ಕೊಳಗಾಗಿದ್ದೇನೆ. ಅವರು ಸಮಾಜಕ್ಕೆ ನೀಡುತ್ತಿರುವ ಉದಾಹರಣೆಯ ಬಗ್ಗೆ ಆತಂಕವಾಗುತ್ತದೆ ಎಂದು ಉತ್ತರಾಖಂಡ ನೂತನ ಸಿಎಂ ತಿರಥ್ ಸಿಂಗ್ ರಾವತ್​ ಹೇಳಿದ್ದಾರೆ.

ಡೆಹ್ರಾಡೂನ್‌ನಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ಉತ್ತರಾಖಂಡ ರಾಜ್ಯ ಆಯೋಗ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಭಾಗಿಯಾಗಿದ್ದ ಉತ್ತರಾಖಂಡ ನೂತನ ಸಿಎಂ ತಿರಥ್ ಸಿಂಗ್ ರಾವತ್​, ನಾನು ಜೈಪುರದಿಂದ ಒಂದು ದಿನ ವಿಮಾನದಲ್ಲಿ ಬರುತ್ತಿದ್ದೆ. ಒಬ್ಬ ಸಹೋದರಿ ನನ್ನ ಪಕ್ಕದಲ್ಲಿ ಕುಳಿತಿದ್ದಳು.

ರಿಪ್ಡ್​ ಜೀನ್ಸ್ ಧರಿಸಿ ಮಹಿಳೆ ಎನ್‌ಜಿಒ ನಡೆಸುತ್ತಿರುವುದನ್ನು ನೋಡಿ ಆಘಾತಕ್ಕೊಳಗಾದೆ : ಉತ್ತರಾಖಂಡ ಸಿಎಂ

ನಾನು ಅವುಗಳನ್ನು ಗಮ್ ಬೂಟ್ ಎಂದು ನೋಡಿದೆ. ಮೇಲಕ್ಕೆ ನೋಡಿದಾಗ, ಜೀನ್ಸ್ ಮೊಣಕಾಲಿನಿಂದ ಹರಿದು ಹೋಗಿತ್ತು. 2 ಮಕ್ಕಳು ಅವರೊಂದಿಗೆ ಇದ್ದರು. ಮಹಿಳೆ ಎನ್‌ಜಿಒ ನಡೆಸುತ್ತಿದ್ದಾಳೆ ಎಂದು ಘಟನೆಯೊಂದನ್ನು ನೆನೆದರು.

ಸೀಳಿರುವ ಜೀನ್ಸ್‌ನಲ್ಲಿ ಮಹಿಳೆಯೊಬ್ಬರು ಎನ್‌ಜಿಒ ನಡೆಸುತ್ತಿರುವುದನ್ನು ನೋಡಿ ಆಘಾತಕ್ಕೊಳಗಾಗಿದ್ದೇನೆ. ಅವರು ಸಮಾಜಕ್ಕೆ ನೀಡುತ್ತಿರುವ ಉದಾಹರಣೆಯ ಬಗ್ಗೆ ಆತಂಕವಾಗುತ್ತದೆ. ಈ ರೀತಿಯ ಮಹಿಳೆ ಸಮಾಜದಲ್ಲಿ ಜನರನ್ನು ಭೇಟಿ ಮಾಡಲು ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸಲು ಹೊರಟರೆ, ನಾವು ಸಮಾಜಕ್ಕೆ, ನಮ್ಮ ಮಕ್ಕಳಿಗೆ ಯಾವ ರೀತಿಯ ಸಂದೇಶ ನೀಡುತ್ತಿದ್ದೇವೆ? ನಾವು ಏನು ಮಾಡುತ್ತೇವೆ, ನಮ್ಮ ಮಕ್ಕಳು ಅದನ್ನೇ ಅನುಸರಿಸುತ್ತಾರೆ ಎಂದು ಮುಖ್ಯಮಂತ್ರಿ ಹೇಳಿದರು.

ಬರಿ ಮೊಣಕಾಲುಗಳನ್ನು ತೋರಿಸುವುದು, ಸೀಳಿರುವ ಡೆನಿಮ್ ಧರಿಸುವುದು ಮತ್ತು ಶ್ರೀಮಂತ ಮಕ್ಕಳಂತೆ ಕಾಣುವುದು ಇವುಗಳನ್ನು ಈಗ ಮಕ್ಕಳಿಗೆ ಮೌಲ್ಯಗಳಾಗಿ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

Last Updated : Mar 17, 2021, 6:07 PM IST

For All Latest Updates

TAGGED:

ABOUT THE AUTHOR

...view details