ಕರ್ನಾಟಕ

karnataka

ETV Bharat / bharat

ಕ್ಯಾಥೋಲಿಕರು ಇಲ್ಲದಿದ್ದರೆ ತಮಿಳುನಾಡು ಬಿಹಾರ ಆಗುತ್ತಿತ್ತು: ವಿವಾದಕ್ಕೊಳಗಾದ  ಸ್ಪೀಕರ್ ಹೇಳಿಕೆ - etvbharatkannada

ಕಳೆದ ತಿಂಗಳು ಜೂನ್ 28 ರಂದು ಅಪ್ಪಾವು ಮತ್ತು ಡಿಎಂಕೆ ಎಲ್ಎಂಎ ಇನಿಗೊ ಇರುದಯರಾಜ್ ತಿರುಚಿರಾಪಳ್ಳಿಯಲ್ಲಿರುವ ಸೇಂಟ್ ಪಾಲ್ ಸೆಮಿನರಿಯ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಈ ರೀತಿಯ ಹೇಳಿಕೆ ನೀಡಿದ್ದರು.

ವಿವಾದಗೊಂಡ ಸ್ಪೀಕರ್ ಹೇಳಿಕೆ
ವಿವಾದಗೊಂಡ ಸ್ಪೀಕರ್ ಹೇಳಿಕೆ

By

Published : Jul 26, 2022, 5:29 PM IST

ಚೆನ್ನೈ: ತಮಿಳುನಾಡು ವಿಧಾನಸಭಾಧ್ಯಕ್ಷ ಹಾಗೂ ಡಿಎಂಕೆ ನಾಯಕ ಎಂ.ಅಪ್ಪಾವು ಅವರ ರಾಜ್ಯದ ಅಭಿವೃದ್ಧಿಗೆ ಕ್ರಿಶ್ಚಿಯನ್ನರೇ ಕಾರಣ ಮತ್ತು ಕ್ಯಾಥೋಲಿಕ್ ಕ್ರಿಶ್ಚಿಯನ್ನರು ಇಲ್ಲದಿದ್ದರೆ ತಮಿಳುನಾಡು ಬಿಹಾರ ಆಗುತ್ತಿತ್ತು ಎಂಬ ತಿಂಗಳ ಹಿಂದಿನ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ.

ಕಳೆದ ತಿಂಗಳು ಜೂನ್ 28 ರಂದು ಅಪ್ಪಾವು ಮತ್ತು ಡಿಎಂಕೆ ಎಲ್ಎಂಎ ಇನಿಗೊ ಇರುದಯರಾಜ್ ತಿರುಚಿರಾಪಳ್ಳಿಯಲ್ಲಿರುವ ಸೇಂಟ್ ಪಾಲ್ ಸೆಮಿನರಿಯ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅಪ್ಪಾವು, ಕ್ರೈಸ್ತ ಫಾದರ್, ಸಿಸ್ಟರ್ಸ್ ಇಲ್ಲದಿದ್ದರೆ ತಮಿಳುನಾಡು ಬಿಹಾರದಂತಾಗುತ್ತಿತ್ತು.

ನಾನು ಇಂದು ಈ ಸ್ಥಾನಕ್ಕೆ ಬೆಳೆಯಲು ಕ್ಯಾಥೋಲಿಕ್ ಫಾದರ್ ಮತ್ತು ಸಿಸ್ಟರ್ಸ್ ಮಾತ್ರ ಸಹಾಯ ಮಾಡಿದ್ದಾರೆ. ತಮಿಳುನಾಡು ಸರ್ಕಾರ ನಿಮ್ಮ ಸರ್ಕಾರ, ನೀವೇ ರಚಿಸಿದ್ದೀರಿ. ನಿಮ್ಮ ಪ್ರಾರ್ಥನೆ ಮತ್ತು ಉಪವಾಸದಿಂದ ಈ ಸರ್ಕಾರ ರಚನೆಯಾಗಿದೆ ಎಂದು ತಮಿಳುನಾಡು ಸ್ಪೀಕರ್​ ಹೊಗಳಿಕೆ ಮಾತುಗಳನ್ನಾಡ್ಡಿದ್ದರು.

ಸ್ಪೀಕರ್​ ಅಲ್ಲಿ ಹೇಳಿದ್ದೇನು?ಸಾಮಾಜಿಕ ನ್ಯಾಯ ಮತ್ತು ದ್ರಾವಿಡ ಮಾದರಿ ಸರ್ಕಾರಕ್ಕೆ ಕ್ಯಾಥೋಲಿಕ್ ಕ್ರಿಶ್ಚಿಯನ್ ಮತ್ತು ಕ್ರಿಶ್ಚಿಯನ್ ಫಾದರ್ ಮುಖ್ಯ ಕಾರಣ. ನೀವು ಯಾರನ್ನೂ ಅವಲಂಬಿಸುವ ಅಗತ್ಯವಿಲ್ಲ, ನಿಮ್ಮ ಎಲ್ಲ ಸಮಸ್ಯೆಗಳನ್ನು ಪಟ್ಟಿ ಮಾಡಿ ನೇರವಾಗಿ ಮುಖ್ಯಮಂತ್ರಿಗೆ ಕೊಡಿ. ಅವನು ಯಾವುದನ್ನೂ ನಿರಾಕರಿಸುವುದಿಲ್ಲ ಮತ್ತು ಎಲ್ಲವನ್ನೂ ಪರಿಹರಿಸುತ್ತಾರೆ ಎಂದಿದ್ದರು.

ಏಕೆಂದರೆ ಈ ಸರ್ಕಾರಕ್ಕೆ ನೀವೇ ಕಾರಣ ಎಂದು ಮುಖ್ಯಮಂತ್ರಿಗಳಿಗೂ ಗೊತ್ತಿದೆ. ಇದು ನಿಮ್ಮ ಸರ್ಕಾರ ಮತ್ತು ನಿಮ್ಮ ಮುಖ್ಯಮಂತ್ರಿ. ಇದರಲ್ಲಿ ನಾನು ನಿಮ್ಮೊಂದಿಗಿದ್ದೇನೆ. ತಮಿಳುನಾಡಿನಿಂದ ಕ್ರೈಸ್ತರನ್ನು ತೊಲಗಿಸಿದರೆ ಅಭಿವೃದ್ಧಿ ಆಗುವುದಿಲ್ಲ ಎಂದು ಸ್ಪೀಕರ್ ಎಂ.ಅಪ್ಪಾವು ಹೇಳಿದ್ದರು.

ಸ್ಪೀಕರ್​ ಹೇಳಿಕೆಗೆ ಬಿಜೆಪಿ ಗರಂ:​ ಇದೀಗ ಅಪ್ಪಾವು ಅವರ ತಿಂಗಳ ಹಳೆಯ ಭಾಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಡಿಎಂಕೆ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದ್ದು, ತಮಿಳುನಾಡು ವಿಧಾನಸಭಾಧ್ಯಕ್ಷರ ಹೇಳಿಕೆ ಖಂಡಿಸಿದೆ. ತಮಿಳುನಾಡು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮತ್ತು ವಕ್ತಾರ ನಾರಾಯಣನ್ ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಪೋಸ್ಟ್​ ಹಾಕಿದ್ದು, ಕಿಡಿಕಾರಿದ್ದಾರೆ.

ಇದಅ ಡಿಎಂಕೆಯ ಸೆಕ್ಯುಲರಿಸಂ? ಅವರು ತಮ್ಮನ್ನು ಜಾತ್ಯತೀತ ಪಕ್ಷ ಎಂದು ಕರೆದುಕೊಳ್ಳುವ ಹಕ್ಕನ್ನು ಕಳೆದುಕೊಂಡಿದ್ದಾರೆ. ಡಿಎಂಕೆ ಹಿಂದೂ ವಿರೋಧಿ ಪಕ್ಷ ಎಂಬುದು ಈಗ ಸಾಬೀತಾಗಿದೆ ಎಂದು ಕುಟುಕಿದ್ದಾರೆ.

ಟೀಕೆಗೆ ಸ್ಪಷ್ಟನೆ ಕೊಟ್ಟಿರುವ ಸ್ಪೀಕರ್​:ಬಿಜೆಪಿ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಅಪ್ಪಾವು ಪ್ರತಿಕ್ರಿಯಿಸಿದ್ದಾರೆ. ಬಿಜೆಪಿ ನನ್ನ ಭಾಷಣವನ್ನು ಪ್ರಚಾರ ಮಾಡುತ್ತಿದ್ದರೆ ಅದು ಒಳ್ಳೆಯದು, ನಾನು ಅದನ್ನು ಹೇಳಲಿಲ್ಲ ಎಂದು ನಾನು ಹೇಳುವುದಿಲ್ಲ. ಹೌದು, ನಾನು ಆ ರೀತಿ ಹೇಳಿದ್ದೇನೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಎಡಿಟ್​ ಮಾಡಲಾದ ವಿಡಿಯೋಗಳು ಮಾತ್ರ ಹರಿದಾಡುತ್ತಿವೆ. ಇದರಲ್ಲಿ ಯಾವುದೇ ರಾಜಕೀಯ ಬೇಡ ಎಂದು ಅಪ್ಪಾವು ಹೇಳಿದ್ದಾರೆ.

ಇದನ್ನೂ ಓದಿ: ಜಲ್ಗಾಂವ್‌ನಲ್ಲಿ ಬೇರ್ಪಟ್ಟ ರೈಲಿನ ಬೋಗಿ -ಇಂಜಿನ್​: ತಪ್ಪಿತು ಭಾರಿ ಅನಾಹುತ

ABOUT THE AUTHOR

...view details