ನವದೆಹಲಿ: ಕೋವಿಡ್ 3ನೇ ಅಲೆ ಬಾರದಂತೆ ತಡೆಯಲು ಸರ್ಕಾರವು ವ್ಯಾಕ್ಸಿನೇಷನ್ಗೆ ಒತ್ತು ನೀಡುತ್ತಿದೆ. ಈವರೆಗೆ ಕೋಟ್ಯಂತರ ಜನ ಲಸಿಕೆಯನ್ನೂ ಪಡೆದಿದ್ದಾರೆ. ಆದರೂ, ವ್ಯಾಕ್ಸಿನ್ ಬಗೆಗಿನ ವಿವಾದ ಮಾತ್ರ ನಿಂತಿಲ್ಲ. ಹಿರಿಯ ವಕೀಲ ಪ್ರಶಾಂತ್ ಭೂಷಣ್ ವ್ಯಾಕ್ಸಿನ್ ಕುರಿತು ವಿವಾದಾತ್ಮಕ ಟ್ವೀಟ್ ಮಾಡಿದ್ದಾರೆ. ನನಗೆ ಕೋವಿಡ್ ಲಸಿಕೆ ಸಿಕ್ಕಿಲ್ಲ, ವ್ಯಾಕ್ಸಿನ್ ಪಡೆಯುವ ಉದ್ದೇಶ ನನಗಿಲ್ಲ ಎಂದು ಉಲ್ಲೇಖಿಸಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ಪ್ರಶಾಂತ್ ಭೂಷಣ್, ಕೊರೊನಾದಿಂದ ಆರೋಗ್ಯವಂತ ಯುವಕರು ಗಂಭೀರ ಪರಿಣಾಮ ಎದುರಿಸುವ ಅಥವಾ ಸಾಯುವುದು ತೀರಾ ಕಡಿಮೆ. ಆದರೆ, ಲಸಿಕೆ ಪಡೆದ ನಂತರ ಅವರು ಸಾಯುವ ಸಾಧ್ಯತೆ ಹೆಚ್ಚು. ಕೊರೊನಾದಿಂದ ಚೇತರಿಸಿಕೊಳ್ಳುವವರಲ್ಲಿ ಲಸಿಕೆಗಿಂತಲೂ ಇಮ್ಯುನಿಟಿ ಪವರ್ ಜಾಸ್ತಿ ಇರುತ್ತದೆ ಎಂದಿದ್ದಾರೆ.
ಮಕ್ಕಳಿಗೆ ಈವರೆಗೆ ಕೋವಿಡ್ ಲಸಿಕೆ ಯಾಕೆ ಕಂಡು ಹಿಡಿಯಲಾಗಿಲ್ಲ. ಮಕ್ಕಳಿಗೆ ಲಸಿಕೆ ನೀಡದಿರಲು ಹಲವು ಕಾರಣಗಳನ್ನು ನೀಡಲಾಗ್ತಿದೆ. ವಿಜ್ಞಾನವನ್ನು ಕಡೆಗಣಿಸಿ, ಮೌಢ್ಯವನ್ನು ಬಿತ್ತಲಾಗುತ್ತಿದೆ ಎಂದೂ ಅವರು ಬರೆದುಕೊಂಡಿದ್ದಾರೆ.