ಕರ್ನಾಟಕ

karnataka

ETV Bharat / bharat

ಮೇಕೆಗೆ ಕಚ್ಚಿದ ನಾಯಿಗಳ ಕೊಲೆಗೆ ಸುಪಾರಿ: ಡಬಲ್ ಬ್ಯಾರೆಲ್ ಗನ್‌ನಿಂದ ಗುಂಡು ಹಾರಿಸಿ ಹತ್ಯೆ! - ಡಬಲ್ ಬ್ಯಾರೆಲ್ ಗನ್‌ನಿಂದ ಗುಂಡು ಹಾರಿಸಿ ನಾಯಿಗಳ ಹತ್ಯೆ

ಬೆನಾಡ್ ಗ್ರಾಮದಲ್ಲಿ ಸುವಾಲಾಲ್ ಎಂಬಾತನಿಗೆ ಸೇರಿದ ಮೇಕೆಯನ್ನು ಬೀದಿ ನಾಯಿಯೊಂದು ಕಚ್ಚಿತ್ತು. ಇದರಿಂದ ಕೋಪಗೊಂಡ ಈತ ಸುಪಾರಿ ಕೊಟ್ಟು ಮೂರು ನಾಯಿಗಳ ಕೊಲೆ ಮಾಡಿಸಿದ್ದಾನೆ.

Contract Killing Of Dogs In Jaipur
ಜೈಪುರದಲ್ಲಿ ಮೇಕೆಗೆ ಕಚ್ಚಿದ ನಾಯಿಗಳ ಕೊಲೆಗೆ ಸುಪಾರಿ

By

Published : Jun 9, 2022, 8:17 PM IST

ಜೈಪುರ (ರಾಜಸ್ಥಾನ):ವೈಯಕ್ತಿಕ ದ್ವೇಷ ಅಥವಾ ಆಸ್ತಿ ಕಲಹ ಅಥವಾ ಮತ್ಯಾವುದೋ ಕಾರಣಕ್ಕೆ ಸುಪಾರಿ ಕೊಲೆ ಮಾಡಿಸುವುದನ್ನು ಕೇಳಿದ್ದೇವೆ. ಆದರೆ, ಇಲ್ಲೊಬ್ಬ ವ್ಯಕ್ತಿ ತನ್ನ ಮೇಕೆಯನ್ನು ನಾಯಿಯೊಂದು ಕಚ್ಚಿ ಗಾಯಗೊಳಿಸಿದ ಕಾರಣಕ್ಕೆ ಸುಪಾರಿ ಕೊಟ್ಟು ನಾಯಿಗಳ ಕೊಲೆ ಮಾಡಿಸಿದ್ದಾನೆ. ರಾಜಸ್ಥಾನದ ಜೈಪುರದಲ್ಲಿ ಇಂಥದ್ದೊಂದು ದುಷ್ಕೃತ್ಯ ನಡೆದಿದೆ.

ಇಲ್ಲಿನ ಬೆನಾಡ್ ಗ್ರಾಮದಲ್ಲಿ ಸುವಾಲಾಲ್ ಎಂಬಾತನಿಗೆ ಸೇರಿದ ಮೇಕೆಯನ್ನು ಬೀದಿ ನಾಯಿಯೊಂದು ಕಚ್ಚಿತ್ತು. ಇದರಿಂದ ಕೋಪಗೊಂಡ ಸುವಲಾಲ್​ ತನ್ನ ಮನೆಯ ಪ್ರದೇಶದಲ್ಲಿರುವ ನಾಯಿಗಳ ಕೊಲೆಗೆ ಬವಾರಿಯಾ ಗ್ಯಾಂಗ್‌ಗೆ ಸುಪಾರಿ ಕೊಟ್ಟಿದ್ದಾನೆ.

ಅಂತೆಯೇ, ಬುಧವಾರ ರಾತ್ರಿ ಬವಾರಿಯಾ ಗ್ಯಾಂಗ್‌ನ ಮೂವರು ಸದಸ್ಯರು ಬಂದು ಮೂರು ಬೀದಿ ನಾಯಿಗಳಿಗೆ ಡಬಲ್ ಬ್ಯಾರೆಲ್ ಗನ್‌ನಿಂದ ಗುಂಡು ಹಾರಿಸಿ ಕೊಂದಿದ್ದಾರೆ. ರಾತ್ರಿ ಗುಂಡಿನ ಸದ್ದು ಕೇಳಿದ ಗ್ರಾಮಸ್ಥರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಆಗ ಕತ್ತಲಲ್ಲಿ ಮೂವರು ದುಷ್ಕರ್ಮಿಗಳು ಓಡುತ್ತಿರುವುದು ಕಂಡು ಬಂದಿದ್ದು, ರಸ್ತೆಯಲ್ಲಿ ರಕ್ತಸಿಕ್ತವಾಗಿ ಮೂರು ನಾಯಿಗಳ ಶವ ಬಿದ್ದಿರುವುದನ್ನೂ ಗಮನಿಸಿದ್ದಾರೆ.

ನಾಯಿಗಳಿಗೆ ಗುಂಡಿಕ್ಕಿ ಕೊಂದ ಬಗ್ಗೆ ರಾತ್ರಿಯೇ ಸ್ಥಳೀಯರು ಪೊಲೀಸ್​ ಕಂಟ್ರೋಲ್ ರೂಮ್​ಗೆ ದೂರು ನೀಡಿದ್ದಾರೆ. ಆಗ ಸ್ಥಳಕ್ಕೆ ಬಂದ ಪೊಲೀಸರು ನಾಯಿಗಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಪಶು ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಘಟನೆ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿ ಸಂಗ್ರಹಿಸಿದಾಗ ನಾಯಿಗಳ ಕೊಲೆಗೆ ಸುವಾಲಾಲ್ ಸುಪಾರಿ ನೀಡಿರುವುದು ಬಯಲಾಗಿದೆ. ಆದ್ದರಿಂದ ಪ್ರಮುಖ ಆರೋಪಿ ಸುವಾಲಾಲ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಬವಾರಿಯಾ ಗ್ಯಾಂಗ್‌ನ ಹಂತಕರು ತಲೆಮರೆಸಿಕೊಂಡಿದ್ದು, ಅವರ ಪತ್ತೆಯಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ:ಸೋಶಿಯಲ್​ ಮೀಡಿಯಾ 'ಪ್ರೇಮ' ಕೊಲೆಯಲ್ಲಿ ಅಂತ್ಯ: ನೀಟ್​ ತಯಾರಿಯಲ್ಲಿದ್ದ ಗೆಳತಿಯ ಕೊಂದ ಗೆಳೆಯ!

ABOUT THE AUTHOR

...view details