ನಾಸಿಕ್(ಮಹಾರಾಷ್ಟ್ರ):ನಿರ್ಮಾಣ ಹಂತದಲ್ಲಿದ್ದ ಫ್ಲ್ಯಾಟ್ ಅನ್ನು ಗ್ರಾಹಕರಿಗೆ ನಿಗದಿತ ಸಮಯದಲ್ಲಿ ಹಸ್ತಾಂತರಿಸದೇ ವಿಳಂಬ ಮಾಡಿದ್ದಕ್ಕೆ ಗ್ರಾಹಕ ನ್ಯಾಯಾಲಯ ಬಿಲ್ಡರ್ಗೆ ದಂಡ ವಿಧಿಸಿದೆ. ಖರೀದಿಸಲಾದ ಫ್ಲ್ಯಾಟ್ನಲ್ಲಿನ ಶೇ.20 ರಷ್ಟು ಜಾಗವನ್ನು ಉಚಿತವಾಗಿ ನೀಡಬೇಕು. ಅಲ್ಲದೇ, 50 ಸಾವಿರ ರೂಪಾಯಿ ದಂಡದ ರೂಪದಲ್ಲಿ ಗ್ರಾಹಕನಿಗೆ ನೀಡಬೇಕು ಎಂದು ಆದೇಶ ನೀಡಿದೆ.
2017 ರಲ್ಲಿ ಮಾಡಿಕೊಂಡ ಒಪ್ಪಂದದಂತೆ ಫ್ಲ್ಯಾಟ್ ನೀಡದೇ ವಿಳಂಬ ಮಾಡಲಾಗಿದೆ ಎಂದು ವ್ಯಕ್ತಿಯೊಬ್ಬರು ಗ್ರಾಹಕ ಕೋರ್ಟ್ಗೆ ಪುಣೆ ಮೂಲದ ನಿರ್ಮಾಣ ಕಂಪನಿ ವಿರುದ್ಧ ದೂರು ನೀಡಿದ್ದರು. ವಿಚಾರಣೆ ನಡೆಸಿದ ಕೋರ್ಟ್, ಹೆಚ್ಚಿನ ವಿಳಂಬದ ಕಾರಣ ಗ್ರಾಹಕರಿಗೆ ಮೋಸವಾಗಿದೆ ಎಂದು ದಂಡದ ಆದೇಶ ನೀಡಿದೆ.
ಪ್ರಕರಣವೇನು?:ಪುಣೆ ಮೂಲದ ಗುಡ್‌ಲ್ಯಾಂಡ್ ರಿಯಾಲ್ಟಿ ಪ್ರೈವೇಟ್ ಲಿಮಿಟೆಡ್ ನಾಸಿಕ್ನಲ್ಲಿ ಬಹುಮಹಡಿ ಕಟ್ಟಡವನ್ನು ನಿರ್ಮಾಣ ಮಾಡುತ್ತಿದ್ದು, ವ್ಯಕ್ತಿಯೊಬ್ಬರಿಂದ 2017 ರಲ್ಲಿ 17.1 ಲಕ್ಷ ರೂಪಾಯಿಗೆ 212.82 ಚದರ ಮೀಟರ್ ಫ್ಲ್ಯಾಟ್ ನೀಡುವುದಾಗಿ ಒಪ್ಪಂದ ಮಾಡಿಕೊಂಡಿತ್ತು. ಗ್ರಾಹಕರು ಈ ಹಣವನ್ನು 4 ಕಂತುಗಳಲ್ಲಿ ಪಾವತಿಸಿದ್ದಾರೆ.