ಅಲ್ಮೊರಾ(ಉತ್ತರಾಖಂಡ್): ಗ್ರಾಹಕರಿಗೆ ಕಳಪೆ ಇಂಟರ್ನೆಟ್ ಸೇವೆ ಒದಗಿಸಿದ ಕಾರಣಕ್ಕೆ ಬಿಎಸ್ಎನ್ಎಲ್ ಸಂಸ್ಥೆಗೆ ಇಲ್ಲಿನ ಅಲ್ಮೊರಾ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗವು 12,925 ರೂ ದಂಡ ವಿಧಿಸಿದೆ.
ಚಂದಾದಾರರಾದ ರೋಹಿತ್ ಜೋಶಿ ಎಂಬುವವರು ವರ್ಕ್ ಫ್ರಮ್ ಹೋಮ್‌ಗಾಗಿ(ಮನೆಯಿಂದಲೇ ಕೆಲಸ) ಬಿಎಸ್ಎನ್ಎಲ್ ಸಂಪರ್ಕ ತೆಗೆದುಕೊಂಡಿದ್ದರು. ಸೇವೆ ಆಯ್ಕೆ ಮಾಡಿಕೊಂಡು ತೀವ್ರ ಸಮಸ್ಯೆ ಅನುಭವಿಸಿದ ಅವರಿಗೆ ತಕ್ಷಣ 12,925ರೂ.ಗಳ ಪರಿಹಾರ ನೀಡುವಂತೆ ಬಿಎಸ್ಎನ್ಎಲ್ ವ್ಯವಸ್ಥಾಪಕರಿಗೆ ಆಯೋಗ ಸೂಚಿಸಿದೆ.
"ನಾನು ಫೆಬ್ರವರಿ 24, 2022 ರಂದು ಬಿಎಸ್ಎನ್ಎಲ್ನ ಏರ್ಬ್ಯಾಂಡ್ ನೆಟ್ವರ್ಕ್ ಇಂಟರ್ನೆಟ್ ಸಂಪರ್ಕ ಆರಿಸಿಕೊಂಡಿದ್ದೆ. 70 ಎಂಬಿಪಿಎಸ್ ದರದಲ್ಲಿ ಡೇಟಾ ವೇಗ ಲಭ್ಯವಾಗಲಿದೆ ಎಂದು ಕಂಪನಿ ಭರವಸೆ ನೀಡಿತ್ತು. ಆದರೆ ಇಂಟರ್ನೆಟ್ ಭರವಸೆ ನೀಡಿದ್ದಕ್ಕಿಂತ ಕಡಿಮೆ ಇದ್ದುದರಿಂದ ನನ್ನ ಕೆಲಸದ ಮೇಲೆ ಕೆಟ್ಟ ಪರಿಣಾಮ ಬೀರಿತು. ಕಳಪೆ ಸಂಪರ್ಕದಿಂದಾಗಿ ಮೇಲಧಿಕಾರಿಗಳ ಮುಂದೆ ಮುಜುಗರದ ಪರಿಸ್ಥಿತಿ ಅನುಭವಿಸಿದೆ. ಕಳಪೆ ಸೇವೆಯಿಂದಾಗಿ ಮಾನಸಿಕ ಸಂಕಷ್ಟಕ್ಕೂ ಒಳಗಾಗಿದ್ದೆ'' ಎಂದು ರೋಹಿತ್ ಜೋಶಿ ದೂರು ಕೊಟ್ಟಿದ್ದರು.
ಇದನ್ನೂ ಓದಿ:ಗುಜರಾತ್ ವಿಧಾನಸಭೆ ಚುನಾವಣೆ : ಮತಗಟ್ಟೆಯಲ್ಲಿ ಕೈಕೊಟ್ಟ ಇವಿಎಂ ಯಂತ್ರ