ಕರ್ನಾಟಕ

karnataka

ETV Bharat / bharat

ಸೂರತ್​ನಲ್ಲಿ ದೇಶದ ಮೊದಲ ಮಲ್ಟಿಲೆವೆಲ್ ರೈಲ್ವೆ ನಿಲ್ದಾಣದ ಕಾಮಗಾರಿ ಆರಂಭ - ಮಲ್ಟಿಲೆವೆಲ್ ರೈಲ್ವೆ ನಿಲ್ದಾಣದ ಕಾಮಗಾರಿ ಆರಂಭ

ಸೂರತ್‌ನಲ್ಲಿ ಮಲ್ಟಿಲೆವೆಲ್ ರೈಲು ನಿಲ್ದಾಣವನ್ನು ಅಂದಾಜು 878 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಈ ಯೋಜನೆಯಿಂದ ಪ್ರತಿದಿನ ಸಾವಿರಾರು ರೈಲು ಪ್ರಯಾಣಿಕರಿಗೆ ಅನುಕೂಲವಾಗುವ ನಿರೀಕ್ಷೆಯಿದೆ.

first multilevel railway station begins in Surat
ಮಲ್ಟಿಲೆವೆಲ್ ರೈಲ್ವೆ ನಿಲ್ದಾಣದ ಕಾಮಗಾರಿ ಆರಂಭ

By

Published : Dec 16, 2022, 3:51 PM IST

ಸೂರತ್:ಭಾರತದ ಮೊದಲ ಮಲ್ಟಿಲೆವೆಲ್ ರೈಲು ನಿಲ್ದಾಣ ನಿರ್ಮಾಣ ಕಾರ್ಯ ಆರಂಭವಾಗಿದೆ. ಈ ನಿಲ್ದಾಣವನ್ನು ಅಂದಾಜು 878 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಸೂರತ್ ಮುನ್ಸಿಪಲ್ ಕಾರ್ಪೊರೇಷನ್​ಗೆ ಸೇರಿದ ಜಾಗದಲ್ಲಿ ನಿರ್ಮಾಣವಾಗುತ್ತಿರುವ ರೈಲು ನಿಲ್ದಾಣದಿಂದ ಪ್ರತಿನಿತ್ಯ ಸಾವಿರಾರು ರೈಲು ಪ್ರಯಾಣಿಕರಿಗೆ ಅನುಕೂಲವಾಗುವ ನಿರೀಕ್ಷೆಯಿದೆ.

ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಮೂಲಕ ನಿರ್ಮಾಣ ಕಾಮಗಾರಿಯನ್ನು ಉದ್ಘಾಟಿಸಿದರು. ನವೆಂಬರ್​ನಲ್ಲಿ ಈ ಯೋಜನೆಯ ಟೆಂಡರ್​​ ಕರೆಯಲಾಗಿತ್ತು. ಮೂರು ಹಂತಗಳಲ್ಲಿ ಕಾಮಗಾರಿ ನಡೆಯಲಿದೆ. ನಿರ್ಮಾಣ ಕಾರ್ಯ ಹಿನ್ನೆಲೆ ರೈಲ್ವೆ ಅಧಿಕಾರಿಗಳು ಉಧ್ನಾ ರೈಲು ನಿಲ್ದಾಣದ ಮೂಲಕ ಚಲಿಸುವ ರೈಲುಗಳನ್ನು ಬೈಪಾಸ್ ಮಾಡಲು ಯೋಜಿಸುತ್ತಿದ್ದಾರೆ. ಇದಕ್ಕಾಗಿ ಪಶ್ಚಿಮ ರೈಲ್ವೆಯು ರೈಲ್ವೆ ಸಚಿವಾಲಯದ ಅನುಮತಿ ಕೋರಿದೆ.

ಇದನ್ನೂ ಓದಿ:ನೀರು ಸಂಸ್ಕರಣಾ ಘಟಕದಲ್ಲಿ ಮಾನವನ ಕೈ, ತಲೆ ಪತ್ತೆ

133.50 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ರಾಜ್ಯದ ಮೊದಲ ಮಲ್ಟಿ ಲೆವೆಲ್ ರೈಲ್ವೆ ಓವರ್ ಬ್ರಿಡ್ಜ್ ಮತ್ತು ಮೇಲ್ಸೇತುವೆಯನ್ನು ಗುಜರಾತ್ ಸರ್ಕಾರ ಉದ್ಘಾಟಿಸಿದ ಆರು ತಿಂಗಳ ನಂತರ ಈ ಯೋಜನೆ ಬಂದಿದೆ.

ABOUT THE AUTHOR

...view details