ರಂಗಾರೆಡ್ಡಿ(ತೆಲಂಗಾಣ):ಮನೆಯಲ್ಲಿ ಯಾರು ಇಲ್ಲದ ವೇಳೆ ಅಪ್ರಾಪ್ತೆಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಕಾಮುಕ ಕಾನ್ಸ್ಟೇಬಲ್ ಒಬ್ಬ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಆತನ ವಿರುದ್ಧ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತೆಲಂಗಾಣದ ರಂಗಾರೆಡ್ಡಿಯಲ್ಲಿ ಈ ಘಟನೆ ನಡೆದಿದೆ.
ಹೈದರಾಬಾದ್ನ ಕುಕಟಪಲ್ಲಿಯ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ 35 ವರ್ಷದ ಶೇಖರ್ ರಂಗಾರೆಡ್ಡಿ ಜಿಲ್ಲೆಯ ಶಂಕರಪಲ್ಲಿ ನಿವಾಸಿಯಾಗಿದ್ದಾನೆ. ಕಾನ್ಸ್ಟೇಬಲ್ ಮನೆಯೊಂದರಲ್ಲಿ ಬೇರೆ ಕುಟುಂಬ ಕಳೆದ ಕೆಲ ವರ್ಷಗಳಿಂದ ಬಾಡಿಗೆಗೆ ವಾಸವಾಗಿತ್ತು. ಬುಧವಾರ ರಾತ್ರಿ ಮನೆಯಲ್ಲಿ ವಾಸವಾಗಿದ್ದ ಎಲ್ಲರೂ ಹೊರಗಡೆ ಹೋಗಿದ್ದರು. ಈ ವೇಳೆ, ಬಾಲಕಿ ಒಬ್ಬಳೇ ಉಳಿದುಕೊಂಡಿದ್ದಳು. ಈ ಸಂದರ್ಭದಲ್ಲಿ ಆಕೆಯ ಮೇಲೆ ದುಷ್ಕೃತ್ಯವೆಸಗಲು ಶೇಖರ್ ಮುಂದಾಗಿದ್ದಾನೆ.