ಕರ್ನಾಟಕ

karnataka

ETV Bharat / bharat

ಮಹಿಳಾ ಕಾನ್ಸ್​​ಟೇಬಲ್​ನಿಂದ ಬ್ಲಾಕ್​ಮೇಲ್: ಆತ್ಮಹತ್ಯೆಗೆ ಶರಣಾದ ಪೊಲೀಸ್​! - ಮಹಿಳಾ ಪೇದೆಯಿಂದ ಬ್ಲಾಕ್​ಮೆಲ್

ಮಹಿಳಾ ಪೊಲೀಸ್ ಕಾನ್ಸ್​ಟೇಬಲ್​​ ಬ್ಲಾಕ್​ಮೇಲ್​ನಿಂದಾಗಿ ಪೊಲೀಸ್ ಕಾನ್ಸ್​ಟೇಬಲ್​ವೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್​ ನಗರದಲ್ಲಿ ನಡೆದಿದೆ.

constable commits suicide
constable commits suicide

By

Published : Jan 6, 2021, 3:27 PM IST

ಮುಜಾಫರ್​ನಗರ (ಉತ್ತರಪ್ರದೇಶ): ಮಹಿಳಾ ಪೊಲೀಸ್ ಕಾನ್ಸ್​ಟೇಬಲ್​​ ಬ್ಲಾಕ್​ಮೇಲ್​ನಿಂದಾಗಿ ಪೊಲೀಸ್ ಕಾನ್ಸ್​ಟೇಬಲ್​ವೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್​ ನಗರದಲ್ಲಿ ನಡೆದಿದೆ.

ನಿನ್ನೆ ಕೆಲಸ ಮುಗಿಸಿ ಹೊಟೇಲ್​ಗೆ ತೆರಳಿದ್ದ ಪೊಲೀಸ್ ಕಾನ್ಸ್​ಟೇಬಲ್​​ ಆತ್ಮಹತ್ಯೆಗೆ ಶರಣಾಗಿದ್ದಾನೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಆತನೊಂದಿಗೆ ಕೆಲಸ ಮಾಡ್ತಿದ್ದ ಮಹಿಳಾ ಪೊಲೀಸ್ ಕಾನ್ಸ್​ಟೇಬಲ್​​ ಕಿರುಕುಳ ನೀಡಿದ್ದರಿಂದಲೇ ಆತ ಈ ನಿರ್ಧಾರ ಕೈಗೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಆತ ಆತ್ಮಹತ್ಯೆಗೆ ಶರಣಾಗಿರುವ ಹೊಟೇಲ್​ ರೂಂನಲ್ಲಿ ಸೂಸೈಡ್ ನೋಟ್ ಲಭ್ಯವಾಗಿದೆ. ಈಗಾಗಲೇ ಮಹಿಳಾ ಪೊಲೀಸ್ ಕಾನ್ಸ್​ಟೇಬಲ್​ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೃತ ವ್ಯಕ್ತಿಯನ್ನು ಸುನೀಲ್ ಎಂದು ಗುರುತಿಸಲಾಗಿದೆ. ಮಹಿಳಾ ಪೊಲೀಸ್ ಕಾನ್ಸ್​ಟೇಬಲ್​ ಆತನಿಗೆ ಮೇಲಿಂದ ಮೇಲೆ ಹಣಕ್ಕಾಗಿ ಬ್ಲಾಕ್​ಮೇಲ್​ ಮಾಡುತ್ತಿದ್ದಳು ಎನ್ನಲಾಗಿದೆ. ಮೃತದೇಹವನ್ನು ಈಗಾಗಲೇ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದೆ.

ಸೂಸೈಡ್​ ನೋಟ್​ನಲ್ಲಿ ಮಹಿಳಾ ಪೊಲೀಸ್ ಕಾನ್ಸ್​ಟೇಬಲ್​ ಅರಿಕ್ಷಾ ಹೆಸರು ಬರೆದಿದ್ದು, ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಎಸ್​​ಪಿ ಸಂತೋಷ್​ ಕುಮಾರ್ ಸಿಂಹ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details