ಹೈದರಾಬಾದ್:ನಿಷೇಧಕ್ಕೊಳಗಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ತೆಲಂಗಾಣದಲ್ಲೂ ಬೇಡು ಬಿಟ್ಟಿದ್ದು, ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ. ಹರಿತವಾದ ಆಯುಧಗಳು, ಕತ್ತಿಗಳು, ಕಬ್ಬಿಣದ ಸರಳುಗಳಿಂದ ಹತ್ಯೆ ಮಾಡುವ ಬಗ್ಗೆ ತನ್ನ ಉದ್ದೇಶಿತ ಗುಂಪಿಗೆ ತರಬೇತಿ ನೀಡಿದೆ ಎಂದು ಆರೋಪಿಸಿದೆ.
ಗಂಟಲು, ಹೊಟ್ಟೆ, ತಲೆಗೆ ಹೇಗೆ ದಾಳಿ ಮಾಡಬೇಕು ಎಂಬುದರ ಬಗ್ಗೆ ಕಲಿಸಿಕೊಡಲಾಗುತ್ತಿದೆ. ಯೋಗ ಮತ್ತು ದೈಹಿಕ ಶಿಕ್ಷಣ ನೀಡುವ ನೆಪದಲ್ಲಿ ಇಂತಹ ಕುಕೃತ್ಯಗಳನ್ನು ಹೇಳಿಕೊಡಲಾಗುತ್ತಿದೆ. ದ್ವೇಷ ಭಾಷಣ ಮಾಡುವ ಮೂಲಕ ಅನ್ಯಧರ್ಮಗಳ ಮೇಲೆ ಯುವಕರನ್ನು ಎತ್ತಿಕಟ್ಟಿ ಕೊಲೆಗೆ ಪ್ರೇರೇಪಣೆ ನೀಡುತ್ತಿದೆ ಎಂದು ಚಾರ್ಜ್ಶೀಟ್ನಲ್ಲಿ ನಮೂದಿಸಲಾಗಿದೆ. ಈ ಸಂಬಂಧ ಹನ್ನೊಂದು ಆರೋಪಿಗಳ ವಿರುದ್ಧ ದೂರು ದಾಖಲಿಸಲಾಗಿದೆ.