ಕರ್ನಾಟಕ

karnataka

ETV Bharat / bharat

ಗಲ್ಲು ಬದಲಿಗೆ ಪರ್ಯಾಯ ಶಿಕ್ಷೆ ಪರಿಶೀಲಿಸಲು ಸಮಿತಿ ರಚನೆ: ಸುಪ್ರೀಂಗೆ ಕೇಂದ್ರ ಸರ್ಕಾರ - death row convicts

ಮರಣದಂಡನೆಗೆ ಈಗ ನೀಡಲಾಗುತ್ತಿರುವ ಉರುಳು ಶಿಕ್ಷೆಗೆ ಪರ್ಯಾಯ ಮಾರ್ಗವನ್ನು ಹುಡುಕುವ ಕುರಿತು ಪರಿಶೀಲನೆಗೆ ಸಮಿತಿ ರಚಿಸುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.

ಗಲ್ಲು ಬದಲಿಗೆ ಪರ್ಯಾಯ ಶಿಕ್ಷೆ
ಗಲ್ಲು ಬದಲಿಗೆ ಪರ್ಯಾಯ ಶಿಕ್ಷೆ

By

Published : May 2, 2023, 2:01 PM IST

Updated : May 2, 2023, 2:35 PM IST

ನವದೆಹಲಿ:ಮರಣದಂಡನೆ ನೀಡುವ ಪ್ರಕರಣಗಳಲ್ಲಿ ಗಲ್ಲು ಶಿಕ್ಷೆ ವಿಧಿಸುವುದರ ಬದಲಾಗಿ ಪರ್ಯಾಯ ಮಾರ್ಗದ ಶೋಧನೆಗಾಗಿ ತಜ್ಞರ ಸಮಿತಿಯನ್ನು ರಚಿಸುವ ಸಲಹೆಯನ್ನು ಪರಿಗಣಿಸಲಾಗಿದೆ. ಈ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​ಗೆ ಮಂಗಳವಾರ ತಿಳಿಸಿದೆ.

ದೇಶದಲ್ಲಿ ಮರಣದಂಡನೆಗೆ ಒಳಗಾದ ಅಪರಾಧಿಗಳನ್ನು ಉರುಳು ಹಾಕಿ ಗಲ್ಲಿಗೇರಿಸುವ ವಿಧಾನವಿದೆ. ಇದು ಅತ್ಯಂತ ಕ್ರೂರ ಎಂದು ಸುಪ್ರೀಂಕೋರ್ಟ್​ ಈ ಹಿಂದೆ ಅಭಿಪ್ರಾಯಪಟ್ಟಿತ್ತು. ಹೀಗಾಗಿ ಚಾಲ್ತಿಯಲ್ಲಿರುವ ಈ ವಿಧಾನವನ್ನು ಪರಿಶೀಲಿಸಲು ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಈ ಬಗ್ಗೆ ಅಧ್ಯಯನಕ್ಕೆ ಸಮಿತಿ ರಚನೆಗೂ ಸೂಚಿಸಿತ್ತು. ಅದನ್ನು ಪರಿಗಣಿಸಿರುವ ಕೇಂದ್ರ ಸಮಿತಿ ರಚನೆ ಮಾಡುವುದಾಗಿ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ ಅವರನ್ನೊಳಗೊಂಡ ಪೀಠದ ಮುಂದೆ, ಕೇಂದ್ರದ ಪರವಾಗಿ ಹಾಜರಿದ್ದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರು ಸರ್ಕಾರ ತಜ್ಞರ ಸಮಿತಿ ರಚಿಸುವ ಕುರಿತು ಕೋರ್ಟ್​ನ ನೀಡಿದ ಸಲಹೆ ಪರಿಗಣಿಸುತ್ತಿದೆ. ಈ ಕುರಿತ ಚರ್ಚೆಗಳು ನಡೆಯುತ್ತಿವೆ ಎಂದು ತಿಳಿಸಿದರು.

ಪ್ರಸ್ತಾವಿತ ಸಮಿತಿಗೆ ತಜ್ಞರ ಹೆಸರುಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ತಜ್ಞರ ನೇಮಕದ ಬಳಿಕ ಸಮಸ್ಯೆ ಬಗ್ಗೆ ಅಧ್ಯಯನ ನಡೆಸಲು ಸಾಧ್ಯವಾಗುತ್ತದೆ ಎಂದು ಅಟಾರ್ನಿ ಜನರಲ್ ತಿಳಿಸಿದರು. ಇದನ್ನು ಆಲಿಸಿದ ಪೀಠ ಬೇಸಿಗೆ ರಜೆಯ ನಂತರ ಈ ಕುರಿತ ವಿಚಾರಣೆಗೆ ನಿಗದಿತ ದಿನಾಂಕ ನೀಡುತ್ತೇವೆ ಎಂದು ಹೇಳಿತು.

ಸುಪ್ರೀಂ ಕೋರ್ಟ್​ ಏನು ಹೇಳಿತ್ತು?:ಮರಣದಂಡನೆಗೆ ನೀಡಲಾಗುವ ಉರುಳು ಶಿಕ್ಷೆಯು ಕಠಿಣವಾಗಿದೆ. ಅಪರಾಧಿ ನೋವಿಲ್ಲದೇ ಸಾಯುವ ವಿಧಾನದ ಬಗ್ಗೆ ಪರಿಶೀಲಿಸಲು ಮಾರ್ಚ್​ 21 ರಂದು ನಡೆದ ವಿಚಾರಣೆಯಲ್ಲಿ ಸಲಹೆ ನೀಡಿತ್ತು. ಇದಕ್ಕೂ ಮೊದಲು 2017 ರಲ್ಲಿ ವಕೀಲ ರಿಷಿ ಮಲ್ಹೋತ್ರಾ ಎಂಬುವವರು ಮರಣದಂಡನೆ ಶಿಕ್ಷೆಗೆ ನೀಡಲಾಗುವ ಗಲ್ಲಿಗೇರಿಸುವ ಪ್ರಸ್ತುತ ಪದ್ಧತಿಯನ್ನು ರದ್ದುಪಡಿಸಲು ಕೋರಿದ್ದರು. ಇದರ ಬದಲಾಗಿ ಗುಂಡೇಟು, ಮಾರಣಾಂತಿಕ ಚುಚ್ಚುಮದ್ದು ಅಥವಾ ವಿದ್ಯುತ್​ ಕುರ್ಚಿಯಂತಹ ಆಯ್ಕೆಗಳನ್ನು ಪರಿಗಣಿಸಬಹುದು ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.

ಇದನ್ನೂ ಓದಿ:ಇನ್ನೆರಡು ದಿನ ಭಾರೀ ಮಳೆ ಹಿಮಪಾತ ಸಾಧ್ಯತೆ: ಕೇದಾರನಾಥ ಧಾಮ್​​ಕ್ಕೆ ತೆರಳದಂತೆ ಯಾತ್ರಾರ್ಥಿಗಳಿಗೆ ಸರ್ಕಾರದ ಸೂಚನೆ

ಆದರೆ, ಇಂಜೆಕ್ಷನ್​ನಿಂದ ತ್ವರಿತ ಸಾವು ಉಂಟಾಗದು, ಈಗಿರುವ ಉರುಳು ಶಿಕ್ಷೆಯ ಬದಲಾಗಿ ಇಂಜೆಕ್ಷನ್​ ನೀಡಿ ಮರಣದಂಡನೆ ನೀಡುವುದು ಸಮಂಜಸವೇ?, ಅದು ಅಷ್ಟಾಗಿ ಪರಿಣಾಮ ಬೀರುವುದಿಲ್ಲ ಎಂಬುದು ಈಗಾಗಲೇ ಅಮೆರಿಕದಲ್ಲಿ ಸಾಬೀತಾಗಿದೆ ಎಂಬ ವಾದ ಕೂಡ ಮಂಡನೆಯಾಗಿತ್ತು. ಇದಲ್ಲದೇ, ಚುಚ್ಚುಮದ್ದು ನೀಡುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದೂ ಹೇಳಲಾಗಿದೆ.

ಮನುಷ್ಯನ ಘನತೆಗೆ ಹೆಚ್ಚು ಅನುಗುಣವಾಗಿ ಇರುವ ಇನ್ನೊಂದು ಆಯ್ಕೆ ಇದೆ ಎಂಬುದಕ್ಕೆ ವೈಜ್ಞಾನಿಕ ಆಧಾರ ಇರುವುದಾದರೆ, ಗಲ್ಲಿಗೇರಿಸಿ ಮರಣದಂಡನೆ ನೀಡುವುದನ್ನು ಅಸಾಂವಿಧಾನಿಕ ಎಂದು ಘೋಷಿಸಲು ತಾನು ಸಿದ್ಧವಿರುವುದಾಗಿ ಕೋರ್ಟ್​ ಹೇಳಿದೆ.

ಓದಿ:'ದಿ ಕೇರಳ ಸ್ಟೋರಿ' ಸಿನಿಮಾ ಬಿಡುಗಡೆ ತಡೆಗೆ ಸುಪ್ರೀಂ ಕೋರ್ಟ್​ ನಕಾರ

Last Updated : May 2, 2023, 2:35 PM IST

ABOUT THE AUTHOR

...view details