ನವದೆಹಲಿ: ಎಎಪಿ ನಾಯಕರು ದೂರು ಹಿಂಪಡೆಯುವಂತೆ ಪದೇ ಪದೆ ಬೆದರಿಕೆ ಹಾಕುತ್ತಿದ್ದಾರೆಂದು ಆರೋಪಿಸಿ ಬಹುಕೋಟಿ ವಂಚನೆ ಪ್ರಕರಣದ ಆರೋಪಿ ಸುಕೇಶ್ ಚಂದ್ರಶೇಖರ್ ತನ್ನನ್ನು ಮತ್ತು ತನ್ನ ಪತ್ನಿಯನ್ನು ದೆಹಲಿಯಿಂದ ಬೇರೆ ಜೈಲಿಗೆ ಸ್ಥಳಾಂತರಿಸಬೇಕೆಂದು ದೆಹಲಿಯ ರಾಜ್ಯಪಾಲ (ಲೆಫ್ಟಿನೆಂಟ್ ಗವರ್ನರ್) ಗೆ ಮತ್ತೊಂದು ಪತ್ರ ಬರೆದು ಒತ್ತಾಯಿಸಿದ್ದಾನೆ.
'ದೂರು ಹಿಂಪಡೆಯಲು ಆಪ್‌ನಿಂದ ಬೆದರಿಕೆ': ಬೇರೆ ಜೈಲಿಗೆ ಸ್ಥಳಾಂತರಿಸಲು ಸುಖೇಶ್ ಪತ್ರ
ಆಪ್ ನಾಯಕರ ಬೆದರಿಕೆ ಹಿನ್ನೆಲೆಯಲ್ಲಿ ತನ್ನನ್ನು ಬೇರೆ ಜೈಲಿಗೆ ಸ್ಥಳಾಂತರಿಸ ಬೇಕೆಂದು ವಂಚನೆ ಪ್ರಕರಣದ ಆರೋಪಿ ಸುಕೇಶ್ ಚಂದ್ರಶೇಖರ್ ದೆಹಲಿಯ ಲೆಫ್ಟಿನೆಂಟ್ ಗವರ್ನರ್‌ಗೆ ಮನವಿ ಮಾಡಿದ್ದಾರೆ.
ಆರೋಪಿ ಸುಕೇಶ್ ಚಂದ್ರಶೇಖರ್
ನವೆಂಬರ್ 9 ರಂದು ಸುಕೇಶ್ ಪರ ವಕೀಲ ಎ.ಕೆ. ಸಿಂಗ್ ಬಿಡುಗಡೆ ಮಾಡಿದ ಪತ್ರದಲ್ಲಿ, ಆಮ್ ಆದ್ಮಿ ಪಕ್ಷ, ಸತ್ಯೇಂದ್ರ ಜೈನ್, ಅರವಿಂದ್ ಕೇಜ್ರಿವಾಲ್ ಮತ್ತು ಕೈಲಾಶ್ ಗೆಹ್ಲೋಟ್ ವಿರುದ್ಧ ರಾಜ್ಯಪಾಲದ ಕಚೇರಿಯಲ್ಲಿ ಸಲ್ಲಿಸಿರುವ ದೂರುಗಳನ್ನು ಹಿಂಪಡೆಯಲು ನಿರಂತರ ಬೆದರಿಕೆ ಮತ್ತು ಒತ್ತಡವಿದೆ ಎಂದು ತಿಳಿಸಲಾಗಿದೆ. ಹಾಗಾಗಿ ಬೇರೆ ಜೈಲಿಗೆ ವರ್ಗಾಯಿಸಬೇಕೆಂದು ಕೋರಿದ್ದಾರೆ.
ಇದನ್ನೂ ಓದಿ :ಫೋನ್ ಕದ್ದಾಲಿಕೆ ಶಂಕೆ.. ನನ್ನ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ: ತೆಲಂಗಾಣ ರಾಜ್ಯಪಾಲರ ಆರೋಪ
Last Updated : Nov 10, 2022, 11:31 AM IST