ಕರ್ನಾಟಕ

karnataka

ETV Bharat / bharat

ತಿಹಾರ್​ ಜೈಲು ಸಿಬ್ಬಂದಿಗೆ ಲಂಚ ನೀಡಿದ ವಂಚಕ ಸುಕೇಶ್.. ಬೇರೊಂದು ಜೈಲಿಗೆ ಶಿಫ್ಟ್ - Sukesh multi crore scam

ತಿಹಾರ್​ ಜೈಲಿನ ಸಿಬ್ಬಂದಿಗೆ ಲಂಚ ನೀಡಿರುವ ಆರೋಪದ ಮೇಲೆ ವಂಚಕ ಸುಕೇಶ್ ಚಂದ್ರಶೇಖರ್​ನನ್ನು ಬೇರೊಂದು ಜೈಲಿಗೆ ಶಿಫ್ಟ್ ಮಾಡಲಾಗಿದ್ದು, ಲಂಚ ಪಡೆದ ಸಿಬ್ಬಂದಿಯನ್ನು ಸಹ ವರ್ಗಾವಣೆ ಮಾಡಲಾಗಿದೆ.

Conman Sukesh bribes again, shifted to another jail
ತಿಹಾರ್​ ಜೈಲು ಸಿಬ್ಬಂದಿಗೆ ಲಂಚ ನೀಡಿದ ವಂಚಕ ಸುಕೇಶ್

By

Published : Feb 7, 2022, 12:59 PM IST

ನವದೆಹಲಿ:ಬಹುಕೋಟಿ ವಂಚನೆ ಆರೋಪ ಎದುರಿಸುತ್ತಿರುವ ಸುಕೇಶ್ ಚಂದ್ರಶೇಖರ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ತಿಹಾರ್​ ಜೈಲಿನಲ್ಲಿದ್ದ ವಂಚಕ ಸುಕೇಶ್​ ಅಲ್ಲಿನ ಮೂವರು ಸಿಬ್ಬಂದಿಗೆ ಲಂಚ ನೀಡಿರುವ ಆರೋಪ ಕೇಳಿಬಂದಿದ್ದು, ಇದರ ಬೆನ್ನಲ್ಲೇ ಆತನನ್ನು ಬೇರೊಂದು ಜೈಲಿಗೆ ಶಿಫ್ಟ್ ಮಾಡಲಾಗಿದೆ.

ಈ ಲಂಚದ ಹಣ ನೀಡಲು ಕೈದಿಯೊಬ್ಬನ ಸಹೋದರನ ಬ್ಯಾಂಕ್​ ಅಕೌಂಟ್​ಗೆ ಎರಡು ವಾರಗಳ ಹಿಂದೆ 1.25 ಲಕ್ಷ ರೂಪಾಯಿಯನ್ನು ಜಮೆ ಮಾಡಿಸಿರುವುದು ತಿಳಿದು ಬಂದಿದೆ. ವಿಷಯ ತಿಳಿದ ಕೂಡಲೇ ಮೂವರೂ ಸಿಬ್ಬಂದಿಯನ್ನು ವರ್ಗಾಯಿಸಲಾಗಿದ್ದು, ಸುಕೇಶ್​​ನನ್ನು ಬೇರೆ ಜೈಲಿಗೆ ಶಿಫ್ಟ್ ಮಾಡಿದ್ದೇವೆ. ಈ ಸಂಬಂಧ ತನಿಖೆಗೆ ಆದೇಶ ನೀಡಲಾಗಿದೆ ಎಂದು ತಿಹಾರ್​ ಜೈಲು ಮಹಾನಿರ್ದೇಶಕ ಸಂದೀಪ್ ಗೋಯೆಲ್ ತಿಳಿಸಿದ್ದಾರೆ.

ಇದನ್ನೂ ಓದಿ: ಜಾಕ್ವೆಲಿನ್​ಗಾಗಿ 500 ಕೋಟಿ ರೂ. ಬಜೆಟ್​ ಸಿನಿಮಾ ಮಾಡಲು ಹೊರಟಿದ್ದ ವಂಚಕ ಸುಖೇಶ್..

ಕಳೆದ ತಿಂಗಳು, ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗ ತಿಹಾರ್ ಜೈಲು ಅಧಿಕಾರಿಗಳಿಗೆ ಪತ್ರ ಬರೆದು ಸುಕೇಶ್‌ ಜೈಲಿನೊಳಗೆ ಐಷಾರಾಮಿ ಸೌಲಭ್ಯ ಕಲ್ಪಿಸಲು ಸಹಾಯ ಮಾಡಿದ 82 ಜೈಲು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ತಿಳಿಸಿತ್ತು. ಅಷ್ಟರಲ್ಲೇ ಇದೀಗ ಲಂಚ ನೀಡಿರುವುದು ತಿಳಿದು ಬಂದಿದೆ.

ABOUT THE AUTHOR

...view details