ನವದೆಹಲಿ:ಕೊರೊನಾ ವೈರಸ್ ಬಿಕ್ಕಟ್ಟನ್ನು ಉಲ್ಲೇಖಿಸಿ ಇಂದು ಸುದ್ದಿವಾಹಿನಿಯಲ್ಲಿ ಚುನಾವಣಾ ಫಲಿತಾಂಶ ಬಗ್ಗೆ ನಡೆಯಲಿರುವ ಚರ್ಚೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಕಾಂಗ್ರೆಸ್ ತಿಳಿಸಿದೆ.
ಚುನಾವಣೆ ಸೋಲು-ಗೆಲುವಿನ ಚರ್ಚೆಯಲ್ಲಿ ಪಾಲ್ಗೊಳ್ಳುವುದಿಲ್ಲ: ಕಾಂಗ್ರೆಸ್ - ಚುನಾವಣಾ ಫಲಿತಾಂಶ ಇಂದು ಲೈವ್
ರಾಷ್ಟ್ರವು ಅಭೂತಪೂರ್ವ ಕೋವಿಡ್ ಬಿಕ್ಕಟ್ಟು ಎದುರಿಸುತ್ತಿದೆ. ಈ ಸಂಕಷ್ಟದ ಸಮಯವನ್ನು ಸೂಕ್ತ ರೀತಿಯಲ್ಲಿ ನಿಭಾಯಿಸುವಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಸರ್ಕಾರ ವೈಫಲ್ಯ ಅನುಭವಿಸಿದೆ. ಇಂಥ ಸಂದರ್ಭದಲ್ಲಿ ಚುನಾವಣೆಗಳ ಸೋಲು-ಗೆಲುವು ಬಗ್ಗೆ ಆಮೇಲೆ ಚರ್ಚಿಸುತ್ತೇವೆ. ಸುದ್ದಿವಾಹಿನಿಗಳ ಚುನಾವಣೆ ಸಂಬಂಧಿತ ಚರ್ಚೆಗಳಿಗೆ ವಕ್ತಾರರನ್ನು ಕಾಂಗ್ರೆಸ್ ಕಳುಹಿಸಿಕೊಡುವುದಿಲ್ಲ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ತಿಳಿಸಿದ್ದಾರೆ.
Congress
ಕಾಂಗ್ರೆಸ್ ಮುಖ್ಯ ವಕ್ತಾರ ರಂದೀಪ್ ಸುರ್ಜೆವಾಲಾ ಮಾತನಾಡಿ, ದೇಶದ ಗಂಭೀರ ಕೊರೊನಾವೈರಸ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಮತದಾನದ ಫಲಿತಾಂಶಗಳು ಹೊರಬಿದ್ದ ನಂತರ ಕಾಂಗ್ರೆಸ್ ವಕ್ತಾರರು ಟಿವಿ ಚರ್ಚೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ.