ಹೈದರಾಬಾದ್ : ತೆಲಂಗಾಣದಲ್ಲಿ ಬಿಆರ್ಎಸ್ ಹಿಂದಿಕ್ಕಿರುವ ಕಾಂಗ್ರೆಸ್ ಅಧಿಕಾರ ಹಿಡಿಯುವುದು ಖಚಿತವಾಗಿದೆ. ತೆಲಂಗಾಣದಲ್ಲಿನ ಕಾಂಗ್ರೆಸ್ನ ಅಭೂತಪೂರ್ವ ಗೆಲುವಿಗೆ ಹರ್ಷ ವ್ಯಕ್ತಪಡಿಸಿರುವ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಎ. ರೇವಂತ್ ರೆಡ್ಡಿ, ತೆಲಂಗಾಣ ರಾಜ್ಯ ನಿರ್ಮಾಣದ ಹುತಾತ್ಮರು ಮತ್ತು ರಾಜ್ಯದ ನಾಲ್ಕು ಕೋಟಿ ಜನರ ಆಕಾಂಕ್ಷೆಗಳನ್ನು ಈಡೇರಿಸುವ ಸಮಯ ಬಂದಿದೆ ಎಂದು ಭಾನುವಾರ ಹೇಳಿದ್ದಾರೆ.
ತೆಲಂಗಾಣ ರಾಜ್ಯದ ಹೋರಾಟದಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಾಹುತಿ ಮಾಡಿದ ಶ್ರೀಕಾಂತ್ ಚಾರಿ ಅವರಿಗೆ ಇದೇ ಸಂದರ್ಭದಲ್ಲಿ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) ಅಧ್ಯಕ್ಷ ರೇವಂತ್ ರೆಡ್ಡಿ ಗೌರವ ನಮನ ಸಲ್ಲಿಸಿದ್ದಾರೆ. ನಲ್ಗೊಂಡ ಜಿಲ್ಲೆಯ ಫಾರ್ಮಾಕಾಲಜಿ ವಿದ್ಯಾರ್ಥಿಯಾಗಿದ್ದ ಚಾರಿ 2009ರ ಡಿಸೆಂಬರ್ 3ರಂದು ಸುಟ್ಟ ಗಾಯಗಳಿಂದ ಮೃತಪಟ್ಟಿದ್ದರು.
ಮುಖ್ಯಮಂತ್ರಿ ಹುದ್ದೆಗೆ ಮುಂಚೂಣಿ ಸ್ಥಾನದಲ್ಲಿರುವ ರೇವಂತ್ ರೆಡ್ಡಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, "ತೆಲಂಗಾಣದ ಆಕಾಂಕ್ಷೆಗಳನ್ನು ಉತ್ತುಂಗಕ್ಕೇರಿಸಿದ ಅಮರರಿಗೆ ಅಭಿನಂದನೆಗಳು. ಅಮರರಾದವರ ಮತ್ತು ನಾಲ್ಕು ಕೋಟಿ ಜನರ ಆಕಾಂಕ್ಷೆಗಳನ್ನು ಈಡೇರಿಸುವ ಸಮಯ ಬಂದಿದೆ" ಎಂದು ಬರೆದಿದ್ದಾರೆ.
TELANGANA119/119
PARTY
BRS
INC
BJP
MIM
OTH
LEAD
36
57
8
5
1
WON
2
8
1
1
0
CHANGE
-50
+46
+8
-1
-3
ನವೆಂಬರ್ 30 ರಂದು ಮತದಾನ ಮುಗಿದ ನಂತರ ಮಾತನಾಡಿದ್ದ ರೇವಂತ್ ರೆಡ್ಡಿ, ಶ್ರೀಕಾಂತ್ ಚಾರಿ ಅವರು ಅದೇ ದಿನ ಬೆಂಕಿ ಹಚ್ಚಿಕೊಂಡಿದ್ದನ್ನು ಮತ್ತು ಡಿಸೆಂಬರ್ 3 ರಂದು ನಿಧನರಾಗಿದ್ದನ್ನು ಸ್ಮರಿಸುತ್ತ, ಹುತಾತ್ಮರ ಆಕಾಂಕ್ಷೆಗಳನ್ನು ಈಡೇರಿಸಲು ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದರು. ಚಾರಿ ಅವರು ಸ್ವತಃ ತಮಗೆ ಬೆಂಕಿ ಹಚ್ಚಿಕೊಂಡ ನಂತರ ಪ್ರತ್ಯೇಕ ತೆಲಂಗಾಣ ರಾಜ್ಯದ ಕೂಗು ಭುಗಿಲೆದ್ದಿತ್ತು.
ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಜನ್ಮದಿನವಾದ ಡಿಸೆಂಬರ್ 9 ರಂದು ಕಾಂಗ್ರೆಸ್ ಪಕ್ಷದಿಂದ ತೆಲಂಗಾಣದ ನೂತನ ಮುಖ್ಯಮಂತ್ರಿಯ ಪ್ರಮಾಣವಚನ ನಡೆಯಲಿದೆ ಎಂದು ರೇವಂತ್ ರೆಡ್ಡಿ ಈಗಾಗಲೇ ಹೇಳಿದ್ದಾರೆ.
ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಇಂದು (ಭಾನುವಾರ) ಪ್ರಕಟವಾಗಿದ್ದು, ಈ ವರದಿಯನ್ನು ಬರೆಯುವ ವೇಳೆಗೆ ಕಾಂಗ್ರೆಸ್ ತೆಲಂಗಾಣದಲ್ಲಿ 69 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ಸ್ಪಷ್ಟ ಬಹುಮತದತ್ತ ಮುನ್ನುಗ್ಗುತ್ತಿದೆ. ಈ ಹಿಂದಿನ ಆಡಳಿತಾರೂಢ ಬಿಆರ್ಎಸ್ ಪಕ್ಷ 37 ಸ್ಥಾನಗಳಲ್ಲಷ್ಟೇ ಮುನ್ನಡೆ ಸಾಧಿಸಿದೆ. ಇನ್ನು ಬಿಜೆಪಿ ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ನಿಚ್ಚಳ ಬಹುಮತ ಪಡೆಯುವತ್ತ ಮುನ್ನಡೆದಿದೆ. ಛತ್ತೀಸಗಢದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ.