ಕರ್ನಾಟಕ

karnataka

ETV Bharat / bharat

ಅಸ್ಸೋಂ ಚುನಾವಣೆ.. ಪ್ರಣಾಳಿಕೆ ಬಿಡುಗಡೆ ಮಾಡಿದ ರಾಹುಲ್ ಗಾಂಧಿ - ಐಡಿಯಾ ಆಫ್ ದಿ ಸ್ಟೇಟ್ ಆಫ್ ಅಸ್ಸಾಂ

ಭಾಷೆಗಳು, ಇತಿಹಾಸ, ನಮ್ಮ ಆಲೋಚನಾ ವಿಧಾನ, ನಮ್ಮ ಜೀವನ ವಿಧಾನ. ಆದ್ದರಿಂದ ಈ ಪ್ರಣಾಳಿಕೆಗೆ ನಾವು ಅಸ್ಸೋಂ ರಾಜ್ಯದ ಕಲ್ಪನೆ ಸಮರ್ಥಿಸುತ್ತೇವೆ ಎಂಬ ಭರವಸೆ ನೀಡುತ್ತದೆ. ಕಾಂಗ್ರೆಸ್ ನೇತೃತ್ವದ ಮಹಾ ಮೈತ್ರಿ ಅಥವಾ 'ಮಹಾಜತ್' ಎಐಯುಡಿಎಫ್, ಎಡ ಪಕ್ಷಗಳು ಮತ್ತು ಅಂಚಲಿಕ್ ಗಣ ಮಾರ್ಚಾ (ಎಜಿಎಂ) ಒಳಗೊಂಡಿದೆ..

Rahul Gandhi after releasing manifesto
ಪ್ರಣಾಳಿಕೆ ಬಿಡುಗಡೆ ಮಾಡಿದ ರಾಹುಲ್ ಗಾಂಧಿ

By

Published : Mar 20, 2021, 8:55 PM IST

ಗುವಾಹಟಿ :ಅಸ್ಸೋಂವಿಧಾನಸಭಾ ಚುನಾವಣೆಗೆ ಮುನ್ನ ಪಕ್ಷದ ಪ್ರಣಾಳಿಕೆಯನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶನಿವಾರ ಬಿಡುಗಡೆ ಮಾಡಿದ್ದಾರೆ.

ಓದಿ: ಆಕಾಂಕ್ಷಿಗಳ ಬೆಂಬಲಿಗರಿಂದ ಅರುಣ್ ಸಿಂಗ್, ಕಟೀಲ್ ಭೇಟಿ: ಟಿಕೆಟ್​ಗಾಗಿ ಭಾರೀ ಲಾಬಿ

ಇದರಲ್ಲಿ ಅವರು "ಐಡಿಯಾ ಆಫ್ ದಿ ಸ್ಟೇಟ್ ಆಫ್ ಅಸ್ಸೋಂ" ಸಮರ್ಥಿಸಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಪ್ರಣಾಳಿಕೆ ಬಿಡುಗಡೆ ಮಾಡಿದ ನಂತರ ರಾಜ್ಯ ರಾಜಧಾನಿಯ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಈ ರಾಷ್ಟ್ರದ ವೈವಿಧ್ಯಮಯ ಸಂಸ್ಕೃತಿಗಳ ಮೇಲೆ ದಾಳಿ ನಡೆಸುತ್ತಿವೆ.

ಭಾಷೆಗಳು, ಇತಿಹಾಸ, ನಮ್ಮ ಆಲೋಚನಾ ವಿಧಾನ, ನಮ್ಮ ಜೀವನ ವಿಧಾನ. ಆದ್ದರಿಂದ ಈ ಪ್ರಣಾಳಿಕೆಗೆ ನಾವು ಅಸ್ಸೋಂ ರಾಜ್ಯದ ಕಲ್ಪನೆ ಸಮರ್ಥಿಸುತ್ತೇವೆ ಎಂಬ ಭರವಸೆ ನೀಡುತ್ತದೆ. ಕಾಂಗ್ರೆಸ್ ನೇತೃತ್ವದ ಮಹಾ ಮೈತ್ರಿ ಅಥವಾ 'ಮಹಾಜತ್' ಎಐಯುಡಿಎಫ್, ಎಡ ಪಕ್ಷಗಳು ಮತ್ತು ಅಂಚಲಿಕ್ ಗಣ ಮಾರ್ಚಾ (ಎಜಿಎಂ) ಒಳಗೊಂಡಿದೆ.

ಇದಲ್ಲದೆ, ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ (ಬಿಪಿಎಫ್) ಕೂಡ ಬಿಜೆಪಿ ನೇತೃತ್ವದ ಮೈತ್ರಿಯಿಂದ 'ಮಹಾಜತ್'ಗೆ ಸೇರ್ಪಡೆಗೊಂಡಿದೆ. ಅಸ್ಸೋಂ ವಿಧಾನಸಭೆಯ 126 ಸ್ಥಾನಗಳಿಗೆ ಮಾರ್ಚ್ 27ರಿಂದ ಏಪ್ರಿಲ್ 6ರವರೆಗೆ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೇ 2ರಂದು ಫಲಿತಾಂಶ ಪ್ರಕಟಿಸಲಾಗುವುದು.

ABOUT THE AUTHOR

...view details