ನವದೆಹಲಿ :ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) 'ತಿರಂಗ ಯಾತ್ರೆ' ಮತ್ತು ಸಾಮಾಜಿಕ ಮಾಧ್ಯಮ ಅಭಿಯಾನ 'ಸೆಲ್ಫಿ ವಿತ್ ತಿರಂಗ' ಸೇರಿದಂತೆ ವಿವಿಧ ಅಭಿಯಾನಗಳ ಮೂಲಕ ಪಕ್ಷದ ಸಂಸ್ಥಾಪನಾ ದಿನಾಚರಣೆ ಆಚರಿಸಲಿದೆ.
"ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) 136ನೇ ಸಂಸ್ಥಾಪನಾ ದಿನಾಚರಣೆ ಆಚರಿಸುತ್ತಿದೆ. ಈ ದಿನ, ರಾಜ್ಯ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಪಕ್ಷದ ಸಂಸ್ಥಾಪನಾ ದಿನ ಆಚರಿಸಲಾಗುತ್ತಿದೆ. ಪದಾಧಿಕಾರಿಗಳು, ಸಂಸದರು, ಶಾಸಕರು, ಎಂಎಲ್‌ಸಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ" ಎಂದು ಎಐಸಿಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
"ಅಗತ್ಯ ಸಾಮಾಜಿಕ ಅಂತರದ ನಿಯಮಗಳನ್ನು ಅನುಸರಿಸಿ ತಿರಂಗ ಯಾತ್ರೆಗಳು ಮತ್ತು ಇತರ ಹೊಸ ಅಭಿಯಾನಗಳನ್ನು ಸಹ ಆಯೋಜಿಸಲಾಗುವುದು. ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆಯಲ್ಲಿ ತೊಡಗಿರುವ ರೈತರಿಗೆ ಒಗ್ಗಟ್ಟನ್ನು ಪ್ರದರ್ಶಿಸುವಂತೆ ಪಿಸಿಸಿಗಳನ್ನು ಕೋರಲಾಗಿದೆ" ಎಂದು ಹೇಳಿದೆ.
ಓದಿಕೋವಿಡ್ ಸಮಯದಲ್ಲಿ ಫಲಾನುಭವಿಗಳ ಖಾತೆಗಳಿಗೆ ಹಣ ವರ್ಗಾವಣೆ : ಬಿಹಾರಕ್ಕೆ ಡಿಜಿಟಲ್ ಇಂಡಿಯಾ ಪ್ರಶಸ್ತಿ
"ಜಾತ್ಯತೀತ, ಪ್ರಜಾಪ್ರಭುತ್ವ ಮತ್ತು ಏಕೀಕೃತ ಭಾರತವನ್ನು ರೂಪಿಸುವ ಪ್ರಯತ್ನಗಳಲ್ಲಿ ಐಎನ್‌ಸಿ ಮುಂಚೂಣಿಯಲ್ಲಿದೆ. ಇದು ಎಲ್ಲಾ ಕ್ಷೇತ್ರಗಳಲ್ಲೂ ವಿಶ್ವ ನಾಯಕನಾಗಿರುವ ಭಾರತ ಮತ್ತು ಎಲ್ಲಾ ವಿವಾದಗಳು ಮತ್ತು ಅಡೆತಡೆಗಳ ನಡುವೆಯೂ ಭಾರತವನ್ನು ಯಾವಾಗಲೂ ಮೊದಲ ಸ್ಥಾನದಲ್ಲಿರಿಸಿದೆ.
ಐಎನ್‌ಸಿ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಗೆದ್ದಿದೆ, ಭಾರತದ ಸಾಂವಿಧಾನಿಕ ಕಲ್ಪನೆಯನ್ನು ರೂಪಿಸಿ, ವಿಶ್ವದ ಅತ್ಯಂತ ಬಡ ರಾಷ್ಟ್ರವನ್ನು (ಭಾರತ ಸ್ವಾತಂತ್ರ್ಯ ಪಡೆದಾಗ) ಜಾಗತಿಕ ಮಹಾಶಕ್ತಿಯಾಗಿ ನಿರ್ಮಿಸಿದೆ"ಎಂದು ಎಐಸಿಸಿ ಹೇಳಿದೆ.
ಐಎನ್‌ಸಿ ಡಿಸೆಂಬರ್ 28, 1885ರಂದು ರಚನೆಯಾಯಿತು ಮತ್ತು ಡಿಸೆಂಬರ್ 31ರವರೆಗೆ ಮುಂಬೈಯಲ್ಲಿ ತನ್ನ ಮೊದಲ ಅಧಿವೇಶನ ನಡೆಸಿತ್ತು. ವಕೀಲ ಉಮೇಶ್ ಚಂದ್ರ ಬ್ಯಾನರ್ಜಿ ಐಎನ್‌ಸಿಯ ಮೊದಲ ಅಧ್ಯಕ್ಷರಾಗಿದ್ದರು.