ಕರ್ನಾಟಕ

karnataka

ETV Bharat / bharat

ಜನವರಿ 14 ರಿಂದ ಮಣಿಪುರದಿಂದ ಮುಂಬೈಗೆ 'ಭಾರತ್​ ನ್ಯಾಯ ಯಾತ್ರೆ': ಕಾಂಗ್ರೆಸ್​ ಘೋಷಣೆ - ಜೈರಾಮ್ ರಮೇಶ್

ಭಾರತ್​ ಜೋಡೋ ಯಾತ್ರೆಯ ಮಾದರಿ, ಭಾರತ್​ ನ್ಯಾಯ ಯಾತ್ರೆ ನಡೆಸಲು ಕಾಂಗ್ರೆಸ್​ ಮುಂದಾಗಿದೆ.

ಭಾರತ್​ ನ್ಯಾಯ ಯಾತ್ರೆ
ಭಾರತ್​ ನ್ಯಾಯ ಯಾತ್ರೆ

By PTI

Published : Dec 27, 2023, 11:02 AM IST

Updated : Dec 27, 2023, 11:25 AM IST

ನವದೆಹಲಿ:ಲೋಕಸಭೆ ಚುನಾವಣೆಗೆ ಸಿದ್ಧವಾಗುತ್ತಿರುವ ಕಾಂಗ್ರೆಸ್​, ಸಂಸದ ರಾಹುಲ್​ ಗಾಂಧಿ ಅವರ ಭಾರತ್​ ಜೋಡೋ ಯಾತ್ರೆಯ ಮುಂದುವರಿದ ಭಾಗ ಎಂಬಂತೆ ಜನವರಿ 14 ರಿಂದ ಮಾರ್ಚ್ 20 ರವರೆಗೆ ಮಣಿಪುರದಿಂದ ಮುಂಬೈಗೆ 'ಭಾರತ್ ನ್ಯಾಯ ಯಾತ್ರೆ' ನಡೆಸಲು ಮುಂದಾಗಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರು, ಕಾಂಗ್ರೆಸ್​ ದೇಶಾದ್ಯಂತ ಸಂಘಟನೆ ನಡೆಸುತ್ತಿದೆ. ಮಣಿಪುರದಲ್ಲಾದ ಸಂಷರ್ಘ ಮತ್ತು ಪ್ರಾಣ ಹಾನಿಯ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ಸಲುವಾಗಿ ಭಾರತ್​ ನ್ಯಾಯ ಯಾತ್ರೆ ನಡೆಸಲಾಗುವುದು. ಇದರಲ್ಲಿ ಪಕ್ಷದ ನಾಯಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯು ಉತ್ತಮ ಅನುಭವ ನೀಡಿದೆ. ಮುಂದಿನ ಯಾತ್ರೆಗೆ ಇದು ದಾರಿ ದೀಪವಾಗಿದೆ. ಭಾರತ ನ್ಯಾಯ ಯಾತ್ರೆ ವೇಳೆ, ಯುವಕರು, ಮಹಿಳೆಯರು ಮತ್ತು ಅಂಚಿನಲ್ಲಿರುವ ಜನರೊಂದಿಗೆ ಸಂವಾದ ನಡೆಸಲಿದೆ. ಹೊಸ ಯಾತ್ರೆಯು 6,200 ಕಿ.ಮೀ. ದೂರ ಕ್ರಮಿಸಲಿದೆ. ಮಣಿಪುರ, ನಾಗಾಲ್ಯಾಂಡ್, ಅಸ್ಸೋಂ, ಮೇಘಾಲಯ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒಡಿಶಾ, ಛತ್ತೀಸ್‌ಗಢ, ಯುಪಿ, ಎಂಪಿ, ರಾಜಸ್ಥಾನ, ಗುಜರಾತ್ ಮತ್ತು ಅಂತಿಮವಾಗಿ ಮಹಾರಾಷ್ಟ್ರ ಸೇರಿದಂತೆ ಇನ್ನಿತರ ರಾಜ್ಯಗಳನ್ನು ಪ್ರಯಾಣಿಸುತ್ತದೆ. ಬಸ್ ಮೂಲಕ ಯಾತ್ರೆ ನಡೆಯಲಿದೆ ಎಂದು ಕೆ ಸಿ ವೇಣುಗೋಪಾಲ್​ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಇದಕ್ಕೂ ಮೊದಲು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಅವರು ಮಾತನಾಡಿ, ನಾಳೆ ಕಾಂಗ್ರೆಸ್ ಪಕ್ಷದ ಸಂಸ್ಥಾಪನಾ ದಿನವಾಗಿದ್ದು, ನಾಗ್ಪುರದಲ್ಲಿ 'ಹೇ ತಯಾರ್ ಹಮ್' ರ್ಯಾಲಿಯನ್ನು ಆಯೋಜಿಸಲಾಗಿದೆ. ಎಲ್ಲ ರಾಜ್ಯಗಳ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಅಲ್ಲಿಗೆ ಬರಲಿದ್ದಾರೆ. ಈ ಮೂಲಕ ಪಕ್ಷ 2024 ರ ಲೋಕಸಭೆ ಚುನಾವಣೆ ಭರ್ಜರಿ ತಯಾರಿ ನಡೆಸಲಿದೆ ಎಂದು ಹೇಳಿದರು.

ಕಳೆದ ವರ್ಷ ಕಾಂಗ್ರೆಸ್​​​​​​ ನಾಯಕ ರಾಹುಲ್​ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ನಡೆಸಿದ್ದರು. ಸುಮಾರು 3 ಸಾವಿರ ಕಿಮೀ ದೂರವನ್ನು ಪಾದಯಾತ್ರೆ ಮಾಡುವ ಮೂಲಕ ಪೂರೈಸಿ, ಪಕ್ಷವನ್ನು ಬಲಪಡಿಸಲು ಶ್ರಮಿಸಿದ್ದರು. ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾಗಿ ಜಮ್ಮು ಕಾಶ್ಮೀರದವರೆಗೆ ಯಾತ್ರೆ ಸಾಗಿತ್ತು. ಈ ಬಾರಿ ಬಸ್ ಮೂಲಕ ಸುಮಾರು 6,200 ಕಿ.ಮೀ ದೂರದವರೆಗೆ ಭಾರತ ನ್ಯಾಯ ಯಾತ್ರೆಗೆ ಪಕ್ಷ ಮುಂದಾಗಿದೆ.

ಇದನ್ನೂ ಓದಿ:ಅಗ್ನಿಪಥ್​ ಜಾರಿ ಮಾಡಿ ಸರ್ಕಾರ ಯುವಕರ ಕನಸುಗಳನ್ನ ನಾಶ ಮಾಡ್ತಿದೆ; ರಾಹುಲ್​ ಗಾಂಧಿ

Last Updated : Dec 27, 2023, 11:25 AM IST

ABOUT THE AUTHOR

...view details